ವಿವಾದದಲ್ಲಿ 'ರಾಮನ ಅವತಾರ' ಸಿನಿಮಾ. ರಿಷಿ ಸಿನಿಮಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ಹಿನ್ನಲೇ ಹಿಂದೂಪರ ಸಂಘಟನೆ ಆಕ್ರೋಶ ಹೊರಹಾಕುತ್ತಿದ್ದಾರೆ. 

ಸ್ಯಾಂಡಲ್ ವುಡ್ ನಟ ರಿಷಿ ನಟನೆಯ ರಾಮಾನ ಅವತಾರ ಟೀಸರ್ ಇತ್ತೀಚೆಗಷ್ಟೆ ರಿಲೀಸ್ ಆಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಈಗ ರಾಮಾನ ಅವತಾರ ವಿವಾದದಲ್ಲಿ ಸಿಲುಕಿದೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಬಂದ ಈ ಸಿನಿಮಾದ ಟೀಸರ್‌ನಲ್ಲಿ ರಾಮನಿಗೆ ಅವಮಾನ ಮಾಡಲಾಗಿದೆ, ಧಾರ್ಮಿಕ ಬಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕುತ್ತಿದ್ದಾರೆ. ಕಾಮಿಡಿಯಾಗಿದ್ದ ಟೀಸರ್ ಈಗ ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದಿದೆ. 

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಶ್ರೀರಾಮನನ್ನ ಕೆಟ್ಟದಾಗಿ ಅಪಹಾಸ್ಯ ಮಾಡಿದ್ದಾರೆ ಎಂದು ಅಸಮಾಧಾನ ಕೇಳಿಬರುತ್ತಿದೆ. ರಾಮ ಅವತಾರ ಸಿನಿಮಾ ಟೀಸರ್‌ನಿಂದ ಸಾಕಷ್ಟು ಹಿಂದೂಗಳಿಗೆ ನೋವುಂಟಾಗಿದೆ. ಈ ಕೂಡಲೇ ಸಿನಿಮಾದಿಂದ ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯುವಂತೆ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿವೆ. ಶ್ರೀರಾಮನನ್ನ ಕೆಟ್ಟದಾಗಿ ತೋರಿಸಿರುವ ದೃಶ್ಯ ತೆಗೆಯುವಂತೆ ಪತ್ರಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. 

ಇಂದು (ಏಪ್ರಿಲ್ 17) ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು ಬಳಿಕ ಕೋರಮಂಗಲದ ಫೀಲ್ಮ್ ಸೆನ್ಸಾರ್ ಬೋರ್ಡ್ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. 

ರಾಜಕೀಯಕ್ಕೆ ಕಾಲಿಟ್ಟ ರಿಷಿ; 4 ಸಾವಿರ ಕೋಟಿಗೆ ವಿಧಾನಸೌಧ ಮಾರಿ ಸಾಲ ತೀರಿಸುತ್ತೀನಿ ಎಂದ ನಟ

ಟೀಸರ್‌ನಲ್ಲಿ ಏನಿದೆ?

ರಾಮಕೃಷ್ಣ ಅಲಿಯಾಸ್ ರಾಮನಾಗಿ ಚಿತ್ರದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ. ಯುವಕರೆಲ್ಲಾ ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಹೋದರೆ ನಮ್ಮ ಊರು ಹೆಂಗೆ ಉದ್ದಾರ ಆಗುತ್ತೆ, ನಮ್ಮೂರಲ್ಲೇ ನಮ್ಮವರಿಗೆ ಕೆಲಸ ಸಿಗುವಂತೆ ಮಾಡಬೇಕು ಎನ್ನೋದು ರಾಮನ ಉದ್ದೇಶ. ಇದರ ಜೊತೆಗೆ ರಾಮ ಇಲ್ಲಿ ಇಬ್ಬರೂ ನಾಯಕಿಯರ ಜೊತೆ ಮೀಟಿಂಗು, ಡುಯೆಟ್ಟು ಅಂತ ಎಲ್ಲಾ ಮಾಡಿದ್ದಾನೆ. ಚಿತ್ರದಲ್ಲಿ ನಟಿ ಪ್ರಣಿತಾ ಸುಭಾಶ್ ಮತ್ತು ಶುಭ್ರ ಅಯ್ಯಪ್ಪ ಕಾಣಿಸಿಕೊಂಡಿದ್ದಾರೆ. ನಾಟಕದ ದೃಶ್ಯವೊಂದರಲ್ಲಿ ಶ್ರೀರಾಮನ ವೇಷ ಹಾಕಿಕೊಂಡು ವೇದಕೆ ಏರುವುದು ಬಿಟ್ಟು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಾನೆ. ಫೈಟ್ ಮಾಡುತ್ತಾನೆ, ರಾಮನ ಹೆಸರು ಇಟ್ಟುಕೊಂಡು ಸಿನಿಮಾದಲ್ಲಿ ಕುಡಿಯುತ್ತಾನೆ ಎಂದು ರಾಮನಿಗೆ ಮಾಡುವ ಅವಮಾನ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿದ್ದಾರೆ. 

ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುತ್ತಾರಾ ಅಥವಾ ಹಾಗೆ ರಿಲೀಸ್ ಮಾಡುತ್ತಾರಾ ಕಾದುನೋ ಬೇಕಿದೆ.

'ರಾಮನ ಅವತಾರ' ಚಿತ್ರಕ್ಕೆ ವಿಷ್ಣುಪ್ರಸಾದ್‌ ಹಾಗೂ ಸಮೀರ್‌ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಸಿನಿಮಾ ಶೂಟಿಂಗ್‌ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದ ಚಿತ್ರತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ.