ಬೆಂಗಳೂರು, [ಅ.30] : ಕನ್ನಡ ಚಿತ್ರರಂಗದಲ್ಲಿ ಅಂದ್ರೆ ಸ್ಯಾಂಡಲ್‌ವುಡ್ ನಿಂದ ಬಹುಭಾಷಾ ನಟ  ಪ್ರಕಾಶ್ ರೈ ಅವರನ್ನು ಬ್ಯಾನ್ ಮಾಡಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ, ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದೆ. 

ಹಿಂದೂ ದೇವರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್‌ನಲ್ಲಿ ನಟನೆ ಮಾಡಲು ಅವಕಾಶ ಕೊಡಬಾರದು ಎಂದು ಕನ್ನಡ ಫಿಲ್ಮ್ಂ ಚೇಂಬರ್‌ಗೆ ದೂರು  ನೀಡಿದೆ. ಅಷ್ಟೇ ಅಲ್ಲದೇ ಪೊಲೀಸ್ ಕಮಿಷನರ್‌ಗೂ ಸಹ ಹಿಂದೂ ಮಹಾಸಭಾ ಇಂದು [ಬುಧವಾರ] ಲಿಖಿತ ದೂರು ನೀಡಿದೆ.

ಹೊದ್ಕೊಳ್ಳೋಕೆ ಕಂಬಳಿ ಕೇಳ್ದ್ರೆ, ಕರ್ಚೀಫ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ: ಪ್ರಕಾಶ್ ರೈ ಕಿಡಿ

ಪ್ರಕಾಶ್ ರೈ ಹೇಳಿದ್ದೇನು..?
ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್ ರೈ ರಾಮಾಯಣದಲ್ಲಿ ಬರುವ ರಾಮ-ಲೀಲಾ ಬಗ್ಗೆ ಮಾತನಾಡುತ್ತಾ, ಅದಕ್ಕೆ ಪೋರ್ನ್ ಸೈಟ್ ಬಗ್ಗೆ ಉದಾಹರಣೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ರಾಮಲೀಲಾ ಕಾರ್ಯಕ್ರಮದ ಬಗ್ಗೆ ಸಿಟ್ಟಿನಿಂದ ಉತ್ತರಿಸಿದ ಪ್ರಕಾಶ್ ರೈ, ಶ್ರೀರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳನ್ನು ಹೆಲಿಕಾಪ್ಟರ್ ಮೂಲಕ ಮುಂಬೈನಿಂದ ಮೇಕಪ್ ಮಾಡಿ ಕರೆತರಲಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ದೇಶದಲ್ಲಿ ನಡೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ನಿರೂಪಕರು, ಎಲ್ಲರಿಗೂ ಅದಕ್ಕೆ ಆಕ್ಷೇಪ ಇರಬೇಕು ಎಂದೇನಿಲ್ಲ. ಇದು ಪ್ರಜಾಪ್ರಭುತ್ವ ದೇಶ, ಎಲ್ಲರ ಭಾವನೆಗೂ ಬೆಲೆ ಕೊಡಬೇಕಾಗುತ್ತದೆ ಎಂದಾಗ ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ ಸುಮ್ಮನಿರಲು ಸಾಧ್ಯವೇ? ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೆ ಅಪಾಯಕಾರಿ. ಇದರಿಂದಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಭಯದ ಸನ್ನಿವೇಶವನ್ನು ಸೃಷ್ಟಿಸುವುದು ಎಷ್ಟು ಸರಿ ಎಂದು ಮರು ಪ್ರಶ್ನೆ ಹಾಕಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಅಲ್ಲಿನ ವಿಗ್ರಹಕ್ಕೆ ಪೂಜಿಸುವುದು ಬೆಳೆದುಕೊಂಡು ಬಂದ ಪದ್ಧತಿ. ರಾಮಲೀಲಾ ಮುಂತಾದ ಕಾರ್ಯಕ್ರಮ ನಡೆಸಿ ನಾಟಕ ಮಾಡುವುದು ಯಾಕೆ? ಜನರಿಗೆ ಭಯ ಹುಟ್ಟು ಹಾಕುವುದು ಸರಿಯೇ ಎಂದು ಪ್ರಶ್ನಿಸಿದ್ದರು.

ಇದರಿಂದ ಅಖಿಲ ಭಾರತ ಹಿಂದೂ ಮಾಹಾಸಭಾ ಪ್ರಕಾಶ್ ರೈ ವಿರುದ್ಧ ದೂರು ನೀಡಿದೆ.