ಮೋಹನ್ ಜುನೇಜಾ ಅವರು ಭಕ್ತಿ ಗೀತೆ ಬರೆದಿದ್ದಾರಂತೆ. ತಾತ ರಂಗಭೂಮಿ ಆಸಕ್ತಿ ಬಗ್ಗೆ ಮೋಹನ್ ಮಾತನಾಡಿದ್ದಾರೆ.
ಹಾಸ್ಯ ನಟ ಮೋಹನ್ ಜುನೇಜಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಅಗಲಿದ್ದಾರೆ. ಮೋಹನ್ ಅವರ ಸಾಧನೆ ಮತ್ತು ಜರ್ನಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಕ್ತಿ ಗೀತೆ:
'ನಾನು ಶಬರಿಮಲೆಗೆ ಹೋಗಿಲ್ಲ ಆದರೆ ಭಾರ್ವಿ ಅವರು ನನಗೆ ಧೈರ್ಯ ಕೊಟ್ಟು 10 ಗೀತೆಗಳನ್ನು ಮಾಡಿಸಿದ್ದರು. ಆನಂದ್ ಆಡಿಯೋದಲ್ಲಿ ಸ್ವಾಮಿ ಶರಣು ಶರಣು ಅಂತ ಅಯ್ಯಪ್ಪ ಭಕ್ತಿಗಳ ಆಡಿಯೋ ಬಂದಿದೆ. ಈಗಲೂ ಬರೆಯುತ್ತಿರುವೆ.
ರಂಗಭೂಮಿ ಆಸಕ್ತಿ:
'ನನ್ನ ತಾತನ ಹೆಸರು ಚೆನ್ನೈಯ ಶೆಟ್ಟಿ. ಎಲ್ಲರೂ ಅವರನ್ನು ಪಾಪಣ್ಣ ಎಂದು ಕರೆಯುತ್ತಾರೆ. ಅವರು ನಾಟಕಗಳು ಮಾಡುತ್ತಿದ್ದರು.. ದುರ್ಯೋದನ, ರಾವಣ ಪಾತ್ರಗಳನ್ನು ಮಾಡುತ್ತಿದ್ದರು. ನನ್ನ ತಂದೆ Bangalore Water Supply and Sewerage Boardನಲ್ಲಿ ವಾಟರ್ ಸಪ್ಲೈಯರ್ ಇಂಜಿನಿಯರ್ ಆಗಿದ್ದರು. ಕಾವೇರಿ ನೀರು ಬಸವನಗುಡಿಗೆ ಬರಬೇಕು ಅಂತ ಟ್ಯಾಂಕ್ ಬೇಕಿತ್ತು ಅದನ್ನು ನನ್ನ ತಂದೆ ರೆಡಿ ಮಾಡಿದ್ದಾರೆ. ನಾವು ನಾಟಕ ನೋಡಲು ಹೋಗುತ್ತಿದದ್ದು ಒಂದೇ ಕಾರಣ, ಬೆಳಗ್ಗೆ ತನಕ ಎದ್ದಿದ್ದರೆ ರಸಾಯನ ಕೊಡುತ್ತಿದ್ದರು. ನಾನು ನಾಟಕ ಮಾಡಬೇಕು ಒಂದು ದಿನ ಕಲಾ ಕ್ಷೇತಾ ಮೆಟ್ಟಿಲು ಹತ್ತಬೇಕು ಎಂದು ಕನಸು ಇತ್ತು ಅದೆಲ್ಲಾ ಒಂದಾದ ಮೇಲೆ ಒಂದು ಬಂತು. ನಟನಾಗಬೇಕು ಎಂದು ಬಂದಿದ್ದು ಆದರೆ ನಾನು ತುಂಬಾ ಸುಂದರವಾಗಿದ್ದ ಕಾರಣ ನಾಯಕನ ಪಾತ್ರ ಸಿಗುತ್ತಿರಲಿಲ್ಲ. ನಾಯಕನಾಗಿದ್ದರೆ ನನ್ನ ಕನಸು ನನಸು ಆಗಿರುವುದಿಲ್ಲ ಎಂದು ಎರಡು ವರ್ಷ ಮಾಡಲಿಂಗ್ ಮೇಕಪ್, ಸೆಟ್ ವರ್ಕ್ ಸೇರಿಂದತೆ ಅನೇಕ ಕೆಲಸಗಳನ್ನು ಮಾಡಿದ್ದೀನಿ' ಎಂದು ಮೋಹನ್ ಹೇಳಿದ್ದಾರೆ.
![]()
2000ರಲ್ಲಿ ವಠಾರ ಸೀರಿಯಲ್ ಬಂತು. ನಾನು ಪರಿಪೂರ್ಣವಾಗಿ ತೊಡಗಿಸಿಕೊಂಡೆ. ನನಗೆ ಹೆಸರು ಕೊಟ್ಟಿದ್ದು ಕೆಎಸ್‌ಎಲ್ ಸ್ವಾಮಿ ಅವರು. ಚಿತ್ರರಂಗದಲ್ಲಿ ನೂರಾರು ಜನ ಮೋಹನ್ ಅಂತ ಇರುತ್ತಾರೆ ನಿನ್ನ ಯಾರು ಗುರುತು ಹಿಡಿಯುತ್ತಾರೆ ಎಂದು ಅವರೇ ನನಗೆ ಮೋಹನ್ ಜುನೇಜಾ ಎಂದು ನಾಮಕರಣ ಮಾಡಿದ್ದು. ಜುನೇಜಾ ಅಂತ ಫಾರಿನ್ ಕ್ಯಾರೆಕ್ಟರ್ ಮಾಡಿದ್ದೆ ಅದಿಕ್ಕೆ ಹೆಸರು ಕೊಟ್ಟರು. ಮೊದಲ ಬಾರಿ ಕಮರ್ಷಿಯಲ್ ಸಿನಿಮಾದಲ್ಲಿ ನನಗೆ ಆಫರ್ ಕೊಟ್ಟಿದ್ದು ಡೈರೆಕ್ಟರ್ ಬಿ.ರಾಮೂರ್ತಿ ಅವರು. ಆ ಚಿತ್ರದಲ್ಲಿ ನಾನು ಪಿಟಿ ಮಾಸ್ಟರ್ ಪಾತ್ರ ಕೊಟ್ಟಿದ್ದು. ನಾನು ಡ್ಯಾನ್ಸ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ರೇಖಾ ದಾಸ್ ಅವರು'
ತಮ್ಮೇನಹಳ್ಳಿಯ ರುದ್ರ ಭೂಮಿಯಲ್ಲಿ ನಟ ಮೋಹನ್ ಜುನೇಜಾ ಅಂತ್ಯ ಸಂಸ್ಕಾರ!
'ಸಣ್ಣ ವಯಸ್ಸಿನಲ್ಲಿ ನಾನು ಮುದ್ದಾಗಿದ್ದೆ. ಸಾಯಿ ಬಾಬ ರೀತಿ ಕರ್ಲಿ ಹೇರ್ ಇತ್ತು. ನನಗೆ ರೆಡಿ ಮಾಡಿಸಿ ಬಿಸಿಲಿಗೆ ಬಿಟ್ಟರೆ ಎಲ್ಲರೂ ಎತ್ತಿಕೊಂಡು ಹೋಗುತ್ತಿದ್ದರು. ಸಂಜೆ ಮನೆ ಕಡೆ ಕರೆದುಕೊಂಡು ಬಿಟ್ಟು ಹೋಗುತ್ತಿದ್ದರು ಅಷ್ಟು ಮುದ್ದು ಮಾಡಿದ್ದಾರೆ'
'ನನಗೆ ತುಂಬಾ ಅವಮಾನ ಆಗಿದೆ. ಮನುಷ್ಯನಿಗೆ ಹಠ ಚಲ ಇರಬೇಕು. ಊಟದ ವಿಷಯಕ್ಕೆ ಅವಮಾನ ಮಾಡಿದ್ದಾರೆ. ನಾನು ಡೈಲಾಗ್ ಬರೆಯುವುದು ನಿರ್ದೇಶಕರಿಗೆ ಗೊತ್ತು ನಿರ್ಮಾಪಕರಿಗೆ ಗೊತ್ತು ಆದರೆ ಊಟ ಬಡಿಸುವವರಿಗೆ ಗೊತ್ತಿರಲಿಲ್ಲ. ಒಂದು ದಿನ ನಾನು ಊಟ ಮಾಡಲಿಲ್ಲ. ಅನುರಾಗ ಸ್ಪಂದನ ಸಿನಿಮಾದಲ್ಲಿ ನಡೆದ ಘಟನೆ. ಆಗ ಕಥೆ ಹೇಳುತ್ತಿರಲಿಲ್ಲ. ಹೀರೋ, ಹೀರೋಯಿನ್ ಅಥವಾ ಹೊರಗಿನಿಂದ ಬಂದವರಿಗೆ ಮಾತ್ರ ಕಥೆ ಗೊತ್ತಿರುತ್ತಿತ್ತು. ಒಂದು ಕ್ಯಾರೆಕ್ಟರ್ ಇದೆ ಮಾಡಬೇಕು ಅಷ್ಟೇ ಹೇಳುತ್ತಿದ್ದರು. ಶೂಟಿಂಗ್ ಸ್ಪಾಟ್‌ಗೆ ಹೋದಾಗ ಸ್ಕ್ರಿಪ್ಟ್ ತಂದು ಕೊಡುತ್ತಾರೆ ಆದು ಮಾಡೋದು.ಒಂದು ರೂಪಾಯಿ ಕಡಿಮೆ ಕೊಡುತ್ತೀರಾ ಪರ್ವಾಗಿಲ್ಲ ಆದರೆ ಕರೆಕ್ಟ್ ಸಮಯಕ್ಕೆ ಕೊಡಿ. ದೊಡ್ಡ ಸಿನಿಮಾಗೆ ನಿರ್ದೇಶಕರು ಒಬ್ಬರು ನನ್ನನ್ನು ಸಂಪರ್ಕ ಮಾಡಿದ್ದರು ಆದರೆ ಅವರು ನನಗೆ ಕರೆ ಮಾಡಿಲ್ಲ ಮತ್ತೊಂದು ಸಿನಿಮಾದಲ್ಲಿ ಅದೇ ನಿರ್ದೇಶಕರ ಜೊತೆ ಕೆಲಸ ಮಾಡಿದೆ ಆಗ ಅವರಿಗೆ ಕ್ಲಾರಿಸಿ ಸಿಗ್ತು.
Mohan Juneja : ಗೋವಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದರಂತೆ ನಟ ಮೋಹನ್ ಜುನೇಜಾ!
'ಭಗವಂತ ಎಲ್ಲರಿಗೂ ಅವಕಾಶ ಕೊಡುತ್ತಾನೆ ಅದನ್ನು ಒಳ್ಳೆ ಮಾರ್ಗದಲ್ಲಿ ಒಳ್ಳೆ ರೀತಿನಲ್ಲಿ ಇನ್ನೊಬ್ಬರಿಗೆ ನೋವು ಮಾಡದ ಹಾಗೆ ಹೊಂದಿಕೊಂಡು ಹೋಗಬೇಕು ಎಂದು ದೇವರ ಮಂತ್ರ ಹೇಳಿಕೊಟ್ಟು ಕಳುಹಿಸಿರುತ್ತಾರೆ. 19ರವರೆಗೂ ದೇವರು ಟೆಸ್ಟ್ ಮ್ಯಾಚ್ ರೀತಿ ಬಿಟ್ತಾನೆ. ಎಲ್ಲರು ಮೋಸ ಮಾಡಲು ಶುರು ಮಾಡಿದರು ಅದಿಕ್ಕೆ ಈಗ ನೋಡಿ ಎಂದು ದೇವರು 2020 ಮ್ಯಾಚ್ ಶುರು ಮಾಡಿದ್ದಾನೆ' ಎಂದು
