ಇಂದ್ರಜಿತ್ ಲಂಕೇಶ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಐದು ಜನ ದಿಗ್ಗಜರಿಗೆ ಇಂದ್ರಜಿತ್ ನೆರವು ನೀಡಿದ್ದಾರೆ. ಗೋಲ್ಡ್ ಫಿಂಚ್ ಹೋಟೆಲ್ ‌ನಲ್ಲಿ ಸಣ್ಣ ಖಾಸಗಿ ಸಮಾರಂಭ ನಡೆಸಿದ್ದಾರೆ.ನನ್ನ ಹುಟ್ಟು ಹಬ್ಬಕ್ಕೆ ಈ ರೀತಿ ಮಾಡುತ್ತಿರುವುದು ತುಂಬಾ ಸಣ್ಣ ವಿಷಯ. ಕಳೆದ 7 ತಿಂಗಳಿನಿಂದ ಇಂಡಸ್ಟ್ರಿಯಲ್ಲಿ ಕೆಲಸ ಇಲ್ಲ. 65 ವರ್ಷ ದಾಟಿದ ಕಲಾವಿದರು ತುಂಬಾ ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

"

'ಮಹಿರಾ' ಎಂದು ಹೆಸರು ಬದಲಾಯಿಸಿಕೊಂಡ ಸಂಜನಾ?

ಐದು ಜನ ದಿಗ್ಗಜರಿಗೆ ಸಹಾಯ ಮಾಡುವ ಮೂಲಕ ಒಂದು ಸಂದೇಶ ನೀಡಿದ್ದಾರೆ ಇಂದ್ರಜಿತ್. ನನ್ನ ಒಂದು ಸಣ್ಣ ಅಳಿಲು ಸೇವೆ. ಇಂಡಸ್ಟ್ರಿಯಲ್ಲಿ ತುಂಬಾ ಜನ ಸಂಕಷ್ಟ ದಲ್ಲಿದ್ದಾರೆ. ಉಳ್ಳವರು ಅಂತವರಿಗೆ ಸಹಾಯ ಮಾಡಲಿ ಅನ್ನೋದು ನನ್ನ ಸಂದೇಶ ಎಂದು ಅವರು ಹೇಳಿದ್ದಾರೆ.

ಇನ್ನು ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹೆಸರುಗಳನ್ನು ಕೊಟ್ಟ ನಂತರ ಆಗಿರುವ ಡೆವಲಪ್‌ಮೆಂಟ್ಸ್ ನೋಡಿದ್ದೀರಿ. ಆದರೆ ಇಷ್ಟಲ್ಲ, ಇನ್ನೂ ಎಷ್ಟೋ ಆಗಬೇಕಿತ್ತು. ನಿರ್ದೇಶಕರು, ರಾಜಕಾರಣಿಗಳು, ಇವೆಣ