ಜಿಮ್‌ ರವಿ ನಟನೆಯ ‘ಪುರುಷೋತ್ತಮ’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್‌ ನೀಡಿದೆ. ಅಮರ್‌ನಾಥ್‌ ಚಿತ್ರದ ನಿರ್ದೇಶಕರು. ಅಪೂರ್ವ ನಾಯಕಿ.

ಪತಿಯ ಕರ್ತವ್ಯ, ಹೊಣೆಗಾರಿಕೆಯ ಕುರಿತಾಗಿ ಈ ಚಿತ್ರವಿದ್ದು, ಸಾಮಾಜಿಕ ಕಳಕಳಿಯ ಸಂದೇಶ ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ. ಇದರಲ್ಲಿ ಜಿಮ್‌ ರವಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ವಿ.ಹರೀಶ್‌, ಮೈಸೂರು ಪಭು ಮೊದಲಾದವರು ನಟಿಸಿದ್ದಾರೆ. ಶ್ರೀಧರ್‌ ಸಂಭ್ರಮ್‌ ಸಂಗೀತ, ಕುಮಾರ್‌.ಎಂ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ ಚಿತ್ರಕ್ಕಿದೆ.

ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ನಟನೇ ಬಂಡವಾಳ ಹಾಕಿರುವುದು. ಹೌದು! ರವಿ'ಸ್ ಜಿಮ್ ಬ್ಯಾನರ್‌ಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ರಾಮೇಗೌಡ ಭೂಕನಕೆರೆ ಅರ್ಪಿಸುತ್ತಿದ್ದಾರೆ. ಚಿತ್ರಕ್ಕೆ ಎಸ್‌.ವಿ ಅಮರನಾಥ್ (SV Amarnath) ಆಕ್ಷನ್ ಕಟ್ ಹೇಳಿದ್ದಾರೆ. ದಿಲ್ದಾರ್, ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯಾ ಸಿನಿಮಾ ನಿರ್ದೇಶನ ಮಾಡಿದ್ದ ಅಮರನಾಥ್ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. 

'ರವಿ ಅವರು ಆಯ್ಕೆ ಮಾಡಿಕೊಂಡಿರವ ಕಥೆಯಲ್ಲಿ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಹೇಳಲಾಗಿದೆ. ಅದೇ ಈ ಸಿನಿಮಾದ ಪ್ಲಸ್ ಪಾಯಿಂಟ್. ಕುಟುಂಬದಲ್ಲಿ ಪತ್ನಿಯನ್ನು ಹೇಗೆ ಪ್ರೀತಿಸಬೇಕೆಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ' ಎಂದು ತಂಡದ ಸದಸ್ಯೆ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಯುಟ್ಯೂಬ್‌ನಲ್ಲಿ ಸೂಪರ್ ವೀಕ್ಷಣೆ ಪಡೆದುಕೊಂಡಿದೆ. 

ವೆಡ್ಡಿಂಗ್‌ ಗಿಫ್ಟ್‌ ಆಡಿಯೋ ರಿಲೀಸ್‌; ಜೂನ್‌ ತಿಂಗಳಲ್ಲಿ ಸಿನಿಮಾ ರಿಲೀಸ್

ಈ ಸಿನಿಮಾದಲ್ಲಿ ಇನ್ನೂ ಯಂಗ್ ಆಂಡ್ ಫಿಟ್ ಆಗಿ ಕಾಣಿಸಿಕೊಳ್ಳಲಿರುವ ರವಿ ಅವರು 18ಕೆಜಿ ತೂಕ ಇಳಿಸಿಕೊಂಡಿದ್ದರು. ‘ನಾನು ಅಣ್ಣಾವ್ರ (Dr Rajkumar) ಅಭಿಮಾನಿ. ಅವರು ಸಿನಿಮಾದಲ್ಲಿ ಹೇಳಿದಂತೆ ಬದುಕಿದವನು. ನಾನು ಇನ್‌ಕಂ ಟ್ಯಾಕ್ಸ್‌ ಇನ್ಸ್‌ಪೆಕ್ಟರ್‌ (Income Tax Inspector) ಆಗಿದ್ದಾಗ ಅವರನ್ನು ಭೇಟಿಯಾಗಿದ್ದೆ. ನನ್ನ ದೇಹ ನೋಡಿದ ಅವರು, ಇನ್ನು ಮೇಲಿಂದ ನಾನೇ ನಿಮ್ಮ ಅಭಿಮಾನಿ ಅಂದಿದ್ರು. ದೇಹ ದೇವಸ್ಥಾನದ ಹಾಗೆ. ಕೊನೇವರೆಗೂ ಚೆನ್ನಾಗಿ ಕಾಪಾಡ್ಕೋಬೇಕು ಅಂದಿದ್ದರು. ಅವರ ಮಾತನ್ನು ಶಿರಸಾ ಪಾಲಿಸುತ್ತಿದ್ದೇನೆ. ಆದರೆ ಈ ಸಿನಿಮಾದಲ್ಲಿ ನನ್ನ ದೇಹ ಪ್ರದರ್ಶನ ಇಲ್ಲ. ಪತ್ನಿಯನ್ನು ಮಗುವಿನಂತೆ, ಗೆಳತಿಯಂತೆ ಪ್ರೀತಿಸಬೇಕು. ಹೆಂಡತಿ, ಮಕ್ಕಳನ್ನು ಪ್ರೀತಿಸಿದಷ್ಟು ನಾವು ಚೆನ್ನಾಗಿರ್ತೀವಿ ಅನ್ನೋದನ್ನು ಹೇಳೋ ಚಿತ್ರವಿದು’ಎಂದು ರವಿ ಹೇಳಿದ್ದಾರೆ.

'ಕಲಾವಿದರೇ 100 ಸಿನಿಮಾ 150ಸಿನಿಮಾ ಅಂತ ಲೆಕ್ಕವಿಲ್ಲ. ಯಾವ ಸಮಯದಲ್ಲಿ ಯಾವ ಪಾತ್ರ ಸಿಗುತ್ತೆ ಆ ಪಾತ್ರ ಮಾಡುವುದು ನಮ್ಮ ಧರ್ಮ. ಕೆಲವೊಂದು ಸಿನಿಮಾದಲ್ಲಿ ನಾನು ಇದ್ದೀನಿ ಅಂತ ಕೆಲವರಿಗೆ ಗೊತ್ತಾಗಲ್ಲ ಆ ತರ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿದ್ದೀನಿ ಅದರಲ್ಲೂ ನನಗೆ ಖುಷಿ ಇದೆ. ನಾನು ಸರಸ್ವತಿನ ಪ್ರೀತಿ ಮಾಡಿದ್ದೀನಿ ಅಪ್ಪಿಕೊಂಡಿದ್ದೀನಿ ಅದರ ಪ್ರತಿಫಲ ನಾನು ಇವತ್ತು ನಾಯಕನಾಗಿರುವೆ. ನಾನು ಎಷ್ಟು ಸಿನಿಮಾ ಮಾಡಿದ್ದೀನಿ ಎನ್ನಲು ನನ್ನ ಅಪ್ಪ ಪೊಡ್ಯೂಸರ್ ಅಲ್ಲ ಡೈರೆಕ್ಟರ್ ಅಲ್ಲ ಸಾಮಾನ್ಯ ಬಡ ಕುಟುಂಬದಿಂದ ಬಂದವನು ಹೀರೋ ಆಗೋಕೆ ಕಾಯಬೇಕು. ಹೀರೋ ಆಗಬೇಕು ಎನ್ನುವ ಛಲ ಇತ್ತು ದೃಢ ನಿರ್ಧಾರ ಇತ್ತು' ಎಂದು ರವಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.