ಸಿದ್ದಾರ್ಥ ಆಗಿದ್ದವ ಜ್ಞಾನೋದಯವಾಗಿ ಭಗವಾನ್‌ ಬುದ್ಧ ಆಗುತ್ತಾರೆ. ಇದು ಬಹಳಷ್ಟುಮಂದಿಗೆ ಗೊತ್ತಿರುವ ವಿಚಾರ. ಈಗ ಕನ್ನಡದಲ್ಲಿ ತಾಜಾ ತಂಡವೊಂದು ‘ನೋಡಿದವರು ಏನಂತಾರೆ’ ಎನ್ನುವ ಟೈಟಲ್‌ ಇಟ್ಟುಕೊಂಡು ಹೊಸಬಗೆಯ ಚಿತ್ರ ಮಾಡಲು ಹೊರಟಿದ್ದಾರೆ.

ಹಾಗೆ ಮಾಡಬೇಡ ನೋಡಿದವರು ಏನಂತಾರೆ, ಅವರು ಏನ್‌ ಅನ್ಕೊತಾರೋ ಎನ್ನುತ್ತಾ ಅವರಿವರಿಗಾಗಿಯೇ ಜೀವನದ ಬಂಡಿ ಸವೆಯುತ್ತಿರುತ್ತದೆ. ಕಡೆ ಕಡೆಯಲ್ಲಿ ನಿಂತು ಯಾರು ನಮ್ಮನ್ನು ನೋಡುತ್ತಿದ್ದಾರೆ, ಯಾರು ಏನ್‌ ಅಂತಿದ್ದಾರೆ ಎಂದು ಹುಡುಕಿದರೆ ಅಲ್ಲಿ ಏನೂ ಸಿಗುವುದಿಲ್ಲ. ಅಷ್ಟರಲ್ಲಾಗಲೇ ಜೀವನವೆನ್ನುವ ಧೂಪದ ಬತ್ತಿ ಪೂರ್ತಿಯಾಗಿ ಉರಿದುಹೋಗಿರುತ್ತದೆ. ಎಲ್ಲರ ಬಾಳಲ್ಲೂ ಆಗುವ ಇಂತಹ ಪ್ರಸಂಗಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಕುಲದೀಪ್‌ ಕಾರಿಯಪ್ಪ. ಇವರ ಈ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್‌ ನೀಡಿದ್ದು, ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ.

ನನ್ನಿಷ್ಟದ ಬಟ್ಟೆಧರಿಸೋ ಹಕ್ಕು ನನಗಿದೆ: ಶಾನ್ವಿ ಶ್ರೀವಾಸ್ತವ್‌ 

‘ಗುಲ್ಟು’ ಸಿನಿಮಾ ಮಾಡಿ ಭರವಸೆ ಮೂಡಿಸಿದ್ದ ನವೀನ್‌ ಶಂಕರ್‌ ಇಲ್ಲಿ ಸಿದ್ಧಾರ್ಥ. ತನ್ನವರನ್ನೆಲ್ಲಾ ಬಿಟ್ಟು ಲೋಕ ಸಂಚಾರ ಮಾಡುವ ಆಸಾಮಿ. ಇವರಿಗೆ ಸದ್ಯಕ್ಕೆ ಅಪೂರ್ವ ಭಾರದ್ವಾಜ್‌ ಜೊತೆಯಾಗಿದ್ದಾರೆ.

View post on Instagram

‘ನಮ್ಮ ಜೀವನವೆಲ್ಲ ಹಾಗೆ ಇರಬೇಡ- ನೋಡಿದವರು ಏನಂತಾರೆ, ಹೀಗೆ ಮಾಡಬೇಡ- ನೋಡಿದವರು ಏನಂತಾರೆ ಎಂದು ಬರೀ ಸಮಾಜಕ್ಕಾಗಿಯೇ ಸಮಾಜ ಹೇಳಿಕೊಟ್ಟಂತೆಯೇ ಬದುಕಿ ದಣಿದಿರುತ್ತದೆ. ಹಿಂತಿರುಗಿ ಹುಡುಕಿದರೆ ಯಾರು ನೋಡುತ್ತಿರುವಂತೆ ಕಾಣುತ್ತಿಲ್ಲ. ಯಾರು ಏನು ಅನ್ನುತ್ತಲೂ ಇಲ್ಲ. ಹೀಗೊಂದು ತಲೆ ಕೆಟ್ಟಅಸ್ತಿತ್ವ ವಾದದ ಬಿಕ್ಕಟ್ಟಿನಿಂದ ಮನೆಯನ್ನು, ತನ್ನವರನ್ನೂ ಬಿಟ್ಟು ಹೊರಟವನೇ ಸಿದ್ಧಾರ್ಥ. ಆತನ ಆತ್ಮ ಮಂಥನವೇ ನಮ್ಮ ಚಿತ್ರ’ ಎನ್ನುತ್ತಾರೆ ಕುಲದೀಪ್‌ ಕಾರಿಯಪ್ಪ.

ಸಿಂಗಂ ನಟನ ಮೊದಲ ಸಂಬಳ ಸಾವಿರವೂ ಇರಲಿಲ್ಲ...! ಸೂರ್ಯನ ಫಸ್ಟ್ ಸ್ಯಾಲರಿ ಎಷ್ಟು?

ಈ ತಂಡದಲ್ಲಿ ಮಯೂರೇಶ್‌ ಅಧಿಕಾರಿ ಸಂಗೀತ ನೀಡುತ್ತಿದ್ದರೆ, ಅಶ್ವಿನ್‌ ಕೆನಡಿ ಛಾಯಾಗ್ರಹಣ, ಜಯಂತ್‌ ಕಾಯ್ಕಿಣಿ ಸಾಹಿತ್ಯ, ಪ್ರಜ್ವಲ್‌ ರಾಜ್‌, ಸಾಯಿ ಶ್ರೀನಿಧಿ, ಸುನೀಲ್‌ ವೆಂಕಟೇಶ್‌, ಕುಲದೀಪ್‌ ಸಂಭಾಷಣೆ ಇರಲಿದೆ. ಡ್ರಾಮಾ, ಟ್ರಾವೆಲ್‌ ಜಾನರ್‌ನ ಈ ಸಿನಿಮಾ ರಾಜ್ಯದಾದ್ಯಂತ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದೆ. ಹಿಪ್‌ ಆ್ಯಂಡ್‌ ಕಿಡ್ಡೊ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಶೂಟಿಂಗ್‌ಗೆ ಹೊರಟು ನಿಂತಿದೆ ತಂಡ.