Asianet Suvarna News Asianet Suvarna News

ಮಕ್ಳ ನಂಬ್ಕೊಂಡು ಗೌರಿ ಶ್ರೀನಿವಾಸ್ ಬರ್ತಿದಾರೆ, ಜಾಗ ಬಿಡಿ; ಮರಿಬೇಡಿ..,ಹೆಣ್ಮಕ್ಳೇ ಸ್ಟ್ರಾಂಗು ಗುರೂ!

ಮಕ್ಕಳಲ್ಲಿ ಹೊಸಾ ಆಲೋಚನೆ ತುಂಬಬಲ್ಲ, ಎಳೇ ಮನಸುಗಳ ಭಾವಲೋಕದಲ್ಲಿ ಸಮ್ಮೋಹಕವಾದ ಛಾಪುಮೂಡಿಸಬಲ್ಲ ಈ ಸಿನಿಮಾ, ಎಲ್ಲ ವಯೋಮಾನದವರಿಗೂ ಹಿಡಿಸುವಂತಿದೆ ಎಂಬುದು ಚಿತ್ರತಂಡದ ಭರವಸೆ. 

Gowri Srinivas directional Journey of Belli kannada movie completed shooting srb
Author
First Published Jan 26, 2024, 5:54 PM IST

ಹೊಸಾ ಹರಿವಿನತ್ತ ಒಡ್ಡಿಕೊಂಡಿರುವ ಕನ್ನಡ ಚಿತ್ರರಂಗದಲ್ಲಿ ನಾನಾ ಥರದ ಪ್ರಯತ್ನ, ಪ್ರಯೋಗಗಳು ನಡೆಯುತ್ತಿವೆ. ಅದೆಲ್ಲದರಾಚೆಗೂ ಒಂದಷ್ಟು ಪ್ರಕಾರಗಳ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿವೆ. ಆ ಸಾಲಿನಲ್ಲಿ ಮಕ್ಕಳ ಚಿತ್ರಗಳದ್ದು ಮುಂಚೂಣಿಯ ಸ್ಥಾನ. ಇದೀಗ ಅದನ್ನು ನೀಗುತ್ತಲೇ, ಈ ಜಾನರಿನಲ್ಲೇ ಹೊಸತನದಿಂದ ದಾಖಲಾಗುವಂಥಾ ಚಿತ್ರವೊಂದು ಸಂಪೂರ್ಣವಾಗಿ ಇದೀಗ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಘಟ್ಟದಲ್ಲಿದೆ. 

ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಆಗಮನವೂ ಆಗಿದೆ. ಅಂದಹಾಗೆ, ಹೀಗೊಂದು ಪೀಠಿಕೆಗೆ ಕಾರಣವಾಗಿರೋದು ಗೌರಿ ಶ್ರೀನಿವಾಸ್ ನಿರ್ದೇಶನದಲ್ಲಿ ರೂಪುಗೊಂಡಿರುವ `ಜರ್ನಿ ಆಫ್ ಬೆಳ್ಳಿ’ಚಿತ್ರ. ಇದುವರೆಗೂ ನಾನಾ ಕಥಾಹಂದರಗಳ ಒಂದಷ್ಟು ಮಕ್ಕಳ ಸಿನಿಮಾಗಳು ಕನ್ನಡದಲ್ಲಿ ತೆರೆಗಂಡಿವೆ. ಅದರಲ್ಲಿ ಚಿನ್ನಾರಿಮುತ್ತದಂಥಾ ಚಿತ್ರಗಳು ಸಾರ್ವಕಾಲಿಕ ದಾಖಲೆ ಬರೆದು ಅಚ್ಚಳಿಯದೆ ಉಳಿದುಕೊಂಡಿವೆ. 

ಇದೀಗ ಚಿತ್ರೀಕರಣವನ್ನೆಲ್ಲ ಸಂಪೂರ್ಣವಾಗಿ ಮುಗಿಸಿಕೊಂಡಿರುವ `ಜರ್ನಿ ಆಫ್ ಬೆಳ್ಳಿ’ ಚಿತ್ರ ಕೂಡಾ ಅಂಥಾದ್ದೊಂದು ಛಾಪು ಮೂಡಿಸುವ ಲಕ್ಷಣಗಳು ದಟ್ಟವಾಗಿವೆ. ಇದು ಓರ್ವ ಪುಟ್ಟ ಹುಡುಗಿಯ ಸುತ್ತ ಕದಲುವ ಕಥಾನಕವನ್ನೊಳಗೊಂಡ ಚಿತ್ರ. ಪುಟ್ಟ ಹುಡುಗಿಯೊಬ್ಬಳ ದೃಷ್ಟಿಕೋನದಲ್ಲಿ, ಆರ್ಮಿ ಫ್ಯಾಮಿಲಿಯ ಭೂಮಿಕೆಯಲ್ಲಿ ತೆರೆದುಕೊಳ್ಳುವ ಅಪರೂಪದ ಕಥೆಯೊಂದು ಜರ್ನಿ ಆಫ್ ಬೆಳ್ಳಿಯ ಜೀವಾಳವಂತೆ. 
ಸಮನ್ವಿ ಪಾಟೀಲ್ ಈ ಸಿನಿಮಾದ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾಳೆ. 

ಮಕ್ಕಳಲ್ಲಿ ಹೊಸಾ ಆಲೋಚನೆ ತುಂಬಬಲ್ಲ, ಎಳೇ ಮನಸುಗಳ ಭಾವಲೋಕದಲ್ಲಿ ಸಮ್ಮೋಹಕವಾದ ಛಾಪುಮೂಡಿಸಬಲ್ಲ ಈ ಸಿನಿಮಾ, ಎಲ್ಲ ವಯೋಮಾನದವರಿಗೂ ಹಿಡಿಸುವಂತಿದೆ ಎಂಬುದು ಚಿತ್ರತಂಡದ ಭರವಸೆ. ಇದುವರೆಗೂ ಹೆಮ್ಮೆಯ ಸೈನಿಕರ ಜೀವನಗಾಥೆಯ ನಾನಾ ಮಗ್ಗುಲುಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಲಾಗಿದೆ. ಆದರೆ, ಪುಟ್ಟ ಮಗುವೊಂದರ ಕಣ್ಣುಗಳಲ್ಲಿ ಕದಲೋ ಕಥೆ ಕನ್ನಡದ ಮಟ್ಟಿಗೆ ಇದೇ ಮೋದಲೇನೋ!

Gowri Srinivas directional Journey of Belli kannada movie completed shooting srb

ಅಂಥಾದ್ದೊಂದು ಹೊಸತನದ ಕಥೆಯೊಂದಿಗೆ ಗೌರಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತುಳು ಭಾಷೆಯಲ್ಲಿ `ಕಾರ್ನಿಕೊದ ಕಲ್ಲುರ್ಟಿ’ಅಂತೊಂದು ಸಿನಿಮಾ ನಿರ್ಮಾಣ ಮಾಡಿದ್ದ ಮಹೇಂದ್ರ ಕುಮಾರ್ `ಜರ್ನಿ ಆಫ್ ಬೆಳ್ಳಿ’ಯ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಗೌರಿ ಶ್ರೀನಿವಾಸ್, ಆ ನಂತರ ಹಲವಾರು ದಿಕ್ಕುಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮದೇ ಲಿಚಿ ಫಿಲಂಸ್ ಕಂಪೆನಿ ಕಟ್ಟಿದವರು. 

ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?

ಅದಾದ ಬಳಿಕ ಒಂದಷ್ಟು ಸಾಕ್ಷ್ಯಚಿತ್ರಗಳು, ಕಾಪೋರೇಟ್ ಜಾಹೀರಾತುಗಳನ್ನು ಸೃಷ್ಟಿಸುವ ಮೂಲಕ ಅನುಭವ ಜಗತ್ತನ್ನು ವಿಸ್ತರಿಸಿಕೊಂಡವರು. ಇವರೇ ನಿರ್ಮಾಣ ಮಾಡಿದ್ದ ಮದ್ಯಪ್ರದೇಶದ ಹ್ಯಾಂಡ್ಲೂಮ್ ಉದ್ಯಮದ ಕುರಿತಾದ `the woven motifs of chanderi' ಎಂಬ ಸಾಕ್ಷ್ಯಚಿತ್ರಕ್ಕೆ ಇತ್ತೀಚೆಗಷ್ಟೇ ಪ್ರಶಸ್ತಿ ಲಭಿಸಿದೆ. 

ಇಲ್ಲಿಯವರಗೂ ಖುಷಿ ಗೌಡ 'ದರ್ಶನ್ ಶ್ರೀನಿವಾಸ'ರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ; ಪವಿತ್ರಾ ಗೌಡ

ಇಷ್ಟೆಲ್ಲ ಅನುಭವ ಪಡೆದುಕೊಂಡ ನಂತರ ಅವರು ಚೆಂದದ್ದೊಂದು ಕಥೆ ಸಿದ್ಧಪಡಿಸಿಕೊಂಡು `ಜರ್ನಿ ಆಫ್ ಬೆಳ್ಳಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳನ್ನು ಮುಕ್ತಾಯಗೊಳಿಸುತ್ತಿರುವ ಈ ಮಕ್ಕಳ ಚಿತ್ರದ ಬಗೆಗಿನ ಮತ್ತಷ್ಟು ಮಾಹಿತಿಗಳು ಇಷ್ಟರಲ್ಲೇ ಜಾಹೀರಾಗಲಿವೆ.

ದೀಕ್ಷಿತ್ ಶೆಟ್ಟಿ ಜತೆ 'ಬ್ಲಿಂಕ್' ಆಗ್ತಿರೋ ಚೈತ್ರಾ ಆಚಾರ್ ಡ್ಯೂಯೆಟ್ ಧಮಾಕಾ; ರಿಪಬ್ಲಿಕ್ ಡೇ ಸ್ಪೆಷಲ್‌ ಟ್ರೀಟ್!

Latest Videos
Follow Us:
Download App:
  • android
  • ios