Asianet Suvarna News Asianet Suvarna News

ಪುಟ್ಟಣ್ಣರ ಪತ್ನಿಯಾಗಿದ್ದ ನಟಿ ಆರತಿ ಅಮೆರಿಕಾದಲ್ಲಿ ಏನ್ಮಾಡ್ತಿದಾರೆ; ಕೋಲಾರಕ್ಕೆ ಯಾಕೆ ಬರ್ತಾರೆ!?

ಆರತಿ ಬಾಳಲ್ಲಿ ಬಂದ ಹೊಸ ವ್ಯಕ್ತಿಯಿಂದ ಪುಟ್ಟಣ್ಣ ಕಣಗಾಲ್ ಹಾಗೂ ಆರತಿ ದಾಂಪತ್ಯ ಮುರಿದುಬಿತ್ತು. ಆ ವ್ಯಕ್ತಿ ಬೇರಾರೂ ಅಲ್ಲ, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣ ಮಂತ್ರಿಯಾಗಿದ್ದ ಎಂ ರಘುಪತಿಯವರು.

US settled Ranganayaki fame actress Aarathi social work in India gets appreciation srb
Author
First Published Jan 26, 2024, 4:44 PM IST

ಕಪ್ಪು-ಬಿಳುಪು ಕಾಲದಿಂದ ಆಗ ತಾನೇ ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮಿಂಚಿನ ಸಂಚಾರ ತಂದ ನಟಿ ಆರತಿ. ಅಂದಿನ ಕಾಲದಲ್ಲಿ ಸಹಜ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದ ಆರತಿಯವರು ಆ ಕಾಲದ ಸ್ಟಾರ್ ನಟಿಯೂ ಹೌದು. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್‌ ನಾಗ್, ಶಂಕರ್ ನಾಗ್, ಅಂಬರೀಷ್, ರಾಮಕೃಷ್ಣ ಸೇರಿದಂತೆ ಹಲವು ನಟರೊಡನೆ ಜೋಡಿಯಾಗಿ ತೆರೆಯ ಮೇಲೆ ಮಿಂಚಿದ್ದಾರೆ ಆರತಿ. 

ಆದರೆ, ಸಿನಿಮಾರಂಗಕ್ಕೆ ತಮ್ಮನ್ನು ಪರಿಚಯಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆ ಆರತಿ ಮದುವೆಯಾದ ಬಳಿಕ ಅವರ ಸಿನಿಮಾ ಪಯಣಕ್ಕೊಂದು ಬ್ರೇಕ್ ಬಿದ್ದುಹೋಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಆರತಿ-ಪುಟ್ಟಣ್ಣ ಮಧ್ಯೆ ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ, ಕಾಲಕಳೆದಂತೆ ಮನಸ್ತಾಪ ಬುಗಿಲೆದ್ದು ಈ ಇಬ್ಬರ ನಡುವೆ ಅಂತರ ಹೆಚ್ಚುತ್ತಾ ಹೋದಂತೆ ಆರತಿ ಬಾಳಲ್ಲಿ ಇನ್ನೊಬ್ಬ ವ್ಯಕ್ತಿಯ ಆಗಮನವಾಯಿತು. 

ಆರತಿ ಬಾಳಲ್ಲಿ ಬಂದ ಹೊಸ ವ್ಯಕ್ತಿಯಿಂದ ಪುಟ್ಟಣ್ಣ ಕಣಗಾಲ್ ಹಾಗೂ ಆರತಿ ದಾಂಪತ್ಯ ಮುರಿದುಬಿತ್ತು. ಆ ವ್ಯಕ್ತಿ ಬೇರಾರೂ ಅಲ್ಲ, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಶಿಕ್ಷಣ ಮಂತ್ರಿಯಾಗಿದ್ದ ಎಂ ರಘುಪತಿಯವರು. ಎಂ ರಘುಪತಿ-ಆರತಿ ಸ್ನೇಹ ಪುಟ್ಟಣ್ಣರಿಂದ ಆರತಿ ದೂರವಾಗಲು, ಪುಟ್ಟಣ್ಣ ಖಿನ್ನತೆಗೆ ಜಾರಲು ಕಾರಣವಾಯಿತು ಎನ್ನಲಾಗಿದೆ. 

ಇಲ್ಲಿಯವರಗೂ ಖುಷಿ ಗೌಡ 'ದರ್ಶನ್ ಶ್ರೀನಿವಾಸ'ರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ; ಪವಿತ್ರಾ ಗೌಡ

ಸ್ವಲ್ಪ ಕಾಲದಲ್ಲೇ ಪುಟ್ಟಣ್ಣ ಕಣಗಾಲ್ ತೀರಿಕೊಂಡರು. ಬಳಿಕ ಆರತಿ-ರಘುಪತಿ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿದ್ದರು ಎನ್ನಲಾಗಿದೆ. ಆದರೆ, ಅವರಿಬ್ಬರ ಸ್ನೇಹ ಹೆಚ್ಚು ಕಾಲ ಬಾಳಲಿಲ್ಲ. ಬಳಿಕ ಆರತಿ ಚಂದ್ರಶೇಖರ್ ದೇಸಾಯ್‌ಗೌಡರ್ ಎಂಬವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟ್ಲ್ ಆಗಿಬಿಟ್ಟರಂತೆ. ಅಷ್ಟರಲ್ಲಾಗಲೇ ಆರತಿ ಸಿನಿಮಾ ಪ್ರಯಾಣಕ್ಕೆ ಪೂರ್ಣ ವಿರಾಮ ಬಿದ್ದಿತ್ತು. ಅಷ್ಟರಲ್ಲಾಗಲೇ ಆರತಿ ನಿಧಾನಕ್ಕೆ ಆಧ್ಯಾತ್ಮದತ್ತ ವಾಲುತ್ತಿದ್ದರು ಎನ್ನಲಾಗಿದೆ.

ದೀಕ್ಷಿತ್ ಶೆಟ್ಟಿ ಜತೆ 'ಬ್ಲಿಂಕ್' ಆಗ್ತಿರೋ ಚೈತ್ರಾ ಆಚಾರ್ ಡ್ಯೂಯೆಟ್ ಧಮಾಕಾ; ರಿಪಬ್ಲಿಕ್ ಡೇ ಸ್ಪೆಷಲ್‌ ಟ್ರೀಟ್!

ಆರತಿಗೆ ಯಶಸ್ವನಿ ಎಂಬ ಮಗಳಿದ್ದಾಳೆ ಎನ್ನಲಾಗಿದ್ದು ಅವರೆಲ್ಲರೂ ಅಮೆರಿಕಾದಲ್ಲೇ ಇದ್ದಾರಂತೆ. ಆದರೆ, ಆರತಿ ಈಗ ಹೆಚ್ಚಾಗಿ ಆಧ್ಯಾತ್ಮಿಕ ನೆಲೆಯಲ್ಲಿ ಜೀವನ ಸಾಗಿಸುತ್ತಿದ್ದು, ಬದುಕಲ್ಲಿ ಶಾಂತಿ-ನೆಮ್ಮದಿ ಕಂಡುಕೊಂಡಿದ್ದಾರಂತೆ. ಕೋಲಾರದ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಹಲವರ ಬದುಕಿಗೆ ಆರತಿ ಆಧಾರವಾಗಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯ ಆರತಿ ಯಾವುದೇ ಪ್ರಚಾರದಿಂದ ಬಹುದೂರವಿದ್ದು, ಸಿನಿರಂಗದವರ ಜತೆ ಅಷ್ಟಾಗಿ ಬಾಂಧವ್ಯ ಇಟ್ಟುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ, ಸಮಾಜಿಕ ಸೇವೆಯಲ್ಲಿ, ದೀನರಿಗೆ ದಾನಮಾಡುವಲ್ಲಿ ಆರತಿ ನಿರತರಾಗಿದ್ದಾರೆ ಎನ್ನಲಾಗಿದೆ.

ಧೀರೇಂದ್ರ ಗೋಪಾಲ್‌ ಕೊನೆಯ ಕ್ಷಣಗಳು ಭೀಕರವಾಗಿತ್ತು; ದಾನಶೂರ ಕರ್ಣನಿಗೆ ಯಾಕಿಂಥ ಸ್ಥಿತಿ ಬಂತು!?

ರಂಗನಾಯಕಿ, ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು, ಕಸ್ತೂರಿ ನಿವಾಸ, ಸತಿ ಸಕ್ಕೂಬಾಯಿ, ಶುಭ ಮಂಗಳ, ಬೆಕ್ಕಿನ ಕಣ್ಣು ಹೀಗೆ ಕಷ್ಟಪಟ್ಟು ಲೆಕ್ಕಹಾಕುವಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಆರತಿಯನ್ನು ಕನ್ನಡ ಚಿತ್ರರಂಗ ಎಂದೂ ಮರೆಯಲಾಗದು. ಒಬ್ಬೊಬ್ಬರ ವೈಯಕ್ತಿಕ ಬದುಕು ಒಂದೊಂದು ರೀತಿ, ಆದರೆ ಬಣ್ಣದ ಬದುಕಿನಲ್ಲಿ ಅಥವಾ ಬೇರೆ ಕ್ಷೇತ್ರಗಳಲ್ಲಿ ಮಾಡಿರುವ ಅವರ ಸಾಧನೆ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ ಅಷ್ಟೇ. ಇದು, ಹೀಗೊಂದು ಆರತಿ ನೆನಪು!

Follow Us:
Download App:
  • android
  • ios