ಕಳೆದ ಜನವರಿಯಲ್ಲಿ ಮದುವೆಯಾಗಿರುವ ನಟಿ ಹರಿಪ್ರಿಯಾ ಅವರು ಕುತೂಹಲದ ಸಂದೇಶವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡು ಅಭಿಮಾನಿಗಳ ತಲೆ ಕೆಡಿಸಿದ್ದಾರೆ. ಏನದು ಸಂದೇಶ? 

ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ ಕಳೆದ ಜನವರಿ 26ರಂದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಮದುವೆ ನಡೆದಿತ್ತು. ಕೆಲ ವರ್ಷಗಳಿಂದ ಹರಿಪ್ರಿಯಾ (Hari Priya) ಹಾಗೂ ವಸಿಷ್ಠ ಸಿಂಹ (Vasishta Simha) ಆತ್ಮೀಯ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯಕ್ಕೆ ಕಾಲಿರಿಸಿದರು. ಡಿಸೆಂಬರ್ ತಿಂಗಳಿನಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಹಪ್ರಿಯಾ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು. ಸರಳವಾಗಿ, ಶಾಸ್ತ್ರೋಕ್ತವಾಗಿ ಎಂಗೇಜ್‌ಮೆಂಟ್ ನಡೆದಿತ್ತು. ನಿಶ್ಚಿತಾರ್ಥದಲ್ಲಿ ಸಿಂಹದ ಡಿಸೈನ್ ಹೊಂದಿದ್ದ ಉಂಗುರಗಳನ್ನ 'ಸಿಂಹಪ್ರಿಯಾ' ಜೋಡಿ ಎಕ್ಸ್‌ಚೇಂಜ್ ಮಾಡಿಕೊಂಡರು. ಮದುವೆ ಕಾರ್ಯಕ್ರಮಕ್ಕೆ ಕನ್ನಡದ ಬಿಗ್ ಸ್ಟಾರ್ಸ್ ಹಾಗೂ ಹಿರಿಯ ಕಲಾವಿದರು ಈ ಲವ್ ಬರ್ಡ್ಸ್ ಆರತಕ್ಷತೆಗೆ ಬಂದು ಆಶೀರ್ವದಿಸಿದ್ದಾರೆ. ರಿಷಬ್ ಶೆಟ್ಟಿ, ಗಣೇಶ್, ಅಮೂಲ್ಯ ದಂಪತಿ, ಮಾಲಾಶ್ರೀ, ಶ್ರುತಿ, ಶರಣ್, ಉಪೇಂದ್ರ ದಂಪತಿ, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಮಾಳವೀಕ ಅವಿನಾಶ್, ನೆನಪಿರಲಿ ಪ್ರೇಮ್ ದಂಪತಿ, ಸಚಿವ ಅಶ್ವತ್ಥ್ ನಾರಾಯಣ್, ಡಾ. ಕೆ ಸುಧಾಕರ್ ಸೇರಿ ಅನೇಕ ಗಣ್ಯರು ಆಗಮಿಸಿದ್ದರು.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯಾಗಿ ಇನ್ನೂ ಎರಡು ತಿಂಗಳಾಗಲಿಲ್ಲ. ಆದರೆ ಇಷ್ಟು ಬೇಗ ಫ್ಯಾನ್ಸ್​ಗೆ ಈ ಜೋಡಿ ಸರ್​ಪ್ರೈಸ್​ ನೀಡಿದೆ. ಈ ಕುರಿತು ನಟಿ ಹರಿಪ್ರಿಯಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಸೀಕ್ರೆಟ್​ ಆಗಿ ಏನನ್ನೋ ಬರೆದಿದ್ದು, ಅದನ್ನು ನೋಡಿ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಅವರು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವುದು ಏನೆಂದರೆ, ‘ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ ಎನ್ನುವುದು ನನಗೆ ಗೊತ್ತು. ಅದೇನು ಅಂತ ನಾನು ಘೋಷಿಸುವ ಮುನ್ನ... ನೀವೇ ಊಹಿಸಿ' ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಯಾವುದೋ ಹೊಸ ಮನೆ ಖರೀದಿಯೋ ಇಲ್ಲವೇ ಹೊಸ ವಸ್ತುಗಳ ಖರೀದಿಯೋ ಅಂದುಕೊಳ್ಳಬಹುದಿತ್ತು. ಅದರೆ ಅವರು ಹ್ಯಾಷ್​ಟ್ಯಾಗ್​ನಲ್ಲಿ ಬರೆದಿರುವುದು ಹೊಸ ಆರಂಭ, ಹೊಸ ಜೀವನ, ಹೊಸ ಜೀವನಶೈಲಿ, ಹೊಸ ಜವಾಬ್ದಾರಿ, ಅತೀ ಶೀಘ್ರದಲ್ಲೇ ಬರಲಿದೆ, ಹೊಸ ಆಗಮನ, ಖುಷಿಯಾಗಿದ್ದೇನೆ, ಕಾಯಲು ಆಗುತ್ತಿಲ್ಲ.., ಎಂಬ ಅರ್ಥದ ಹ್ಯಾಶ್‌ಟ್ಯಾಗ್‌ಗಳನ್ನು (HashTag) ಬಳಸಿರುವುದರಿಂದ ಅದು ಏನು ಎಂದು ಯೋಚಿಸುವ ಮೊದಲೇ ಅಭಿಮಾನಿಗಳು ಮಗುವಿನ ಆಗಮನ ಎಂದೇ ಅಂದುಕೊಳ್ಳುತ್ತಿದ್ದಾರೆ. 

'ಅಸ್ಮಿತಾಜೀ... ಪ್ಲೀಸ್​ ಸೈಫ್​ ಅಲಿ ಮುಂದೆ ಕಾಣಿಸಿಕೊಳ್ಬೇಡಿ' ಅಂತಿದ್ದಾರೆ ಕರೀನಾ ಫ್ಯಾನ್ಸ್​! ಯಾಕೋ?

ಸಿಹಿ ಸುದ್ದಿ ಏನು ಅಂತ ಹರಿಪ್ರಿಯಾ ಇನ್ನೂ ರಿವೀಲ್ ಮಾಡಿಲ್ಲವಾದರೂ, ಮದುವೆಯಾದ ಮೇಲೆ ಸಿಹಿ ಸುದ್ದಿ ಇದೇ ಇರುತ್ತದೆ ಎಂದು ಅಭಿಮಾನಿಗಳು ತಿಳಿದುಕೊಳ್ಳಲಿ ಎನ್ನುವ ಕಾರಣಕ್ಕೋ ಏನೋ, ಒಟ್ಟಿನಲ್ಲಿ ಕನ್​ಫ್ಯೂಸ್​ ಮಾಡುವ ಹ್ಯಾಷ್​ಟ್ಯಾಗ್​ ಬಳಸಿ ಫ್ಯಾನ್ಸ್​ ತಲೆ ಕೆಡಿಸಿದ್ದಾರೆ. ಇವರ ಈ ಸಂದೇಶ ನೋಡಿದ ಅಭಿಮಾನಿಗಳು ನಿಜವಾಗಿಯೂ ಆಕೆ ಗರ್ಭಿಣಿ ಇರಬಹುದು ಎಂದೇ ಭಾವಿಸಿದ್ದು, ‘ಹೆಸರೇನು ಮೇಡಂ’, ‘ಯಾವಾಗ ಅನೌನ್ಸ್ ಮಾಡ್ತೀರಾ?’, ‘ಕೇಳಿದ್ದು ನಿಜಾನಾ?’, ‘ಗುಡ್ ನ್ಯೂಸ್?’ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಇದರ ಸ್ಕ್ರೀನ್​ಶಾಟ್​ಗಳನ್ನೂ ಹರಿಪ್ರಿಯಾ ಶೇರ್​ ಮಾಡಿಕೊಂಡಿದ್ದಾರೆ. 

ಇನ್ನು ಕೆಲವರು ಇಷ್ಟು ಬೇಗ ಮಗುವಿನ ಆಗಮನ ಸಾಧ್ಯವಿಲ್ಲ ಎಂದು ಭಾವಿಸಿರುವ ಇನ್ನು ಕೆಲವು ಅಭಿಮಾನಿಗಳು, 'ಹೊಸ ಮನೆ ತಗೊಂಡ್ರಾ?', 'ಮಗುವನ್ನ ದತ್ತು ಪಡೆದ್ರಾ?', 'ನಾಯಿಮರಿಯನ್ನ ದತ್ತು ಪಡೆದ್ರಾ?', 'ಪ್ರೆಗ್ನೆನ್ಸಿಯನ್ನ ಅನೌನ್ಸ್ ಮಾಡ್ತಿದ್ದೀರಾ?', 'ಸಿಂಹದ ಮರಿಯ ಆಗಮನದ ಬಗ್ಗೆ ಸುಳಿವು ಕೊಡ್ತಿದ್ದೀರಾ?', 'ಮರಿ ಸಿಂಹನ ಎಂಟ್ರಿ ಯಾವಾಗ?', 'ಗಂಡ - ಹೆಂಡತಿ ಇಬ್ಬರೂ ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೀರಾ?', 'ಹೊಸ ಸಿನಿಮಾದ ಘೋಷಣೆಯನ್ನೇ ಗುಡ್ ನ್ಯೂಸ್ ಅಂತ ಹೇಳ್ತಿದ್ದೀರಾ?' ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ (Comments) ಮಾಡುತ್ತಿದ್ದಾರೆ. ಇನ್ನೂ ಅನೇಕರು 'ಕಂಗ್ರ್ಯಾಟ್ಸ್' ಅಂತ ಹರಿಪ್ರಿಯಾಗೆ ವಿಶ್ ಮಾಡುತ್ತಿದ್ದಾರೆ.

Divya Shridhar: ಲವ್​ ಜಿಹಾದ್​‌ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ

 ಅಷ್ಟಕ್ಕೂ ಗುಡ್ ನ್ಯೂಸ್ ಎನು ಎಂಬುದನ್ನ ನಟಿ ಹೇಳುವವರೆಗೂ ಕಾದುನೋಡಬೇಕಿದೆ.

View post on Instagram