Divya Shridhar: ಲವ್ ಜಿಹಾದ್ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ
ಹಿಂದೂ ಹೆಸರು ಹೇಳಿಕೊಂಡ ಯುವಕನ ಜೊತೆ ಮದುವೆಯಾಗಿ ಪಡಬಾರದ ಕಷ್ಟ ಪಟ್ಟವರು ನಟಿ ದಿವ್ಯಾ ಶ್ರೀಧರ್. ಈಗ ತುಂಬು ಗರ್ಭಿಣಿಯಾಗಿರುವ ಈಕೆಯ ನೋವಿನ ಕಥೆ ಇಲ್ಲಿದೆ...
ಲವ್ ಜಿಹಾದ್ (Love Jihad)ಎನ್ನುವುದು ಇದಾಗಲೇ ಎಷ್ಟೋ ಹೆಣ್ಣುಮಕ್ಕಳ ಬಾಳನ್ನು ನರಕಕ್ಕೆ ತಳ್ಳಿರುವುದು ವರದಿಯಾಗುತ್ತಲೇ ಇದೆ. ಪ್ರೀತಿ-ಪ್ರೇಮದ ಆಸೆಗೆ ಬಿದ್ದು ದೇಹವನ್ನು ತುಂಡುತುಂಡಾಗಿರಿಸಿಕೊಂಡಿರೋ ಹೆಣ್ಣುಮಕ್ಕಳೂ ಕಡಿಮೆ ಏನಿಲ್ಲ. ಇಷ್ಟೆಲ್ಲಾ ಸುದ್ದಿಗಳು ಬರುತ್ತಿದ್ದರೂ ಯಾವುದೋ ಮೋಹದೊಳಗೆ ತಿಳಿದೋ, ತಿಳಿದೆಯೋ ಸಿಲುಕುತ್ತಿದ್ದಾರೆ ಹೆಣ್ಣುಮಕ್ಕಳು. ಹಿಂದೂ ಹೆಸರು ಇಟ್ಟುಕೊಂಡು ನಾಲ್ಕೈದು ಮಕ್ಕಳ ಅಪ್ಪಂದಿರೂ ಹೆಣ್ಣುಮಕ್ಕಳನ್ನು ಸುಲಭದಲ್ಲಿ ಮೋಸಗೊಳಿಸುತ್ತಿರುವುದು ಆತಂಕದ ವಿಷಯ. ಈ ಲವ್ ಜಿಹಾದ್ ಎನ್ನುವುದು ಸಾಮಾನ್ಯ ಜನರನ್ನು ಮಾತ್ರವಲ್ಲದೇ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಅದರಲ್ಲಿ ಒಂದು ತಾಜಾ ಉದಾಹರಣೆ ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ ದಿವ್ಯಾ ಶ್ರೀಧರ್. ಆರ್ನವ್ ಉರ್ಫ್ ಅಮ್ಜದ್ಖಾನ್ ಅವರನ್ನು ಪ್ರೇಮಿಸಿ ಮದುವೆಯಾಗಿದ್ದ ನಟಿ ಪಟ್ಟ ನೋವು ಅಷ್ಟಿಷ್ಟಲ್ಲ. ಕಳೆದ ವರ್ಷ ತಾವು ಅನುಭವಿಸಿದ್ದ ನೋವಿನ ಕುರಿತು ನಟಿ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದರು. ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ದಿವ್ಯಾ ಶ್ರೀಧರ್‌ಗೆ ಆರ್ನವ್ (Arnav) ಪರಿಚಯ ಆಗಿದೆ. ಐದು ವರ್ಷ ಡೇಟಿಂಗ್ ಮಾಡಿ ನಂತರ ಮದುವೆಯಾದರೂ ಈತನ ನಿಜ ಹೆಸರು ಅರ್ನವ್ ಅಲ್ಲ, ಬದಲಿಗೆ ಅಮ್ಜದ್ ಖಾನ್ (Amzad Khan Mohammed) ಎಂದು ನಟಿಗೆ ತಿಳಿದೇ ಇರಲಿಲ್ಲ! ನಿಜವಾದ ಹೆಸರು ಹೇಳದೆ ಆರ್ನವ್ ಎಂದು ಸುಳ್ಳು ಹೇಳಿದ್ದಾರೆ ಎಂದು ನಂತರ ದಿವ್ಯಾ ಹೇಳಿದ್ದರು. 'ನನಗೂ ಅಮ್ಜದ್ ಖಾನ್‌ಗೂ ಮದುವೆ ಆಗಿದೆ. ಆದರೆ ಎಲ್ಲೂ ಹೇಳಿಕೊಳ್ಳಬಾರದು, ಗೌಪ್ಯವಾಗಿ ಇಡಬೇಕು ಎಂದು ಬೆದರಿಕೆ ಹಾಕಿದ್ದಾರೆ' ಎಂದು ವಿಡಿಯೋದಲ್ಲಿ ದಿವ್ಯಾ ಕಣ್ಣೀರಿಟ್ಟಿದ್ದರು. ಆರ್ನವ್ ನನಗೆ ತುಂಬಾ ಹಿಂಸೆ ಕೊಡುತ್ತಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವಿಚಾರದಲ್ಲಿ ಹಲವು ಬಾರಿ ನನ್ನ ಮೇಲೆ ಹಲ್ಲೆ ಆಗಿದೆ ಎಂದಿದ್ದರು ದಿವ್ಯಾ.
'ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‌ಡೌನ್ ಟೈಂನಲ್ಲಿ ಅವನಿಗೆ ಏನೂ ಕಲಸ ಇರಲಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್ ಕೊಡಿಸಿ 30 ಸಾವಿರದಂತೆ ಲೋನ್ ಕಟ್ಟಿದ್ದೇನೆ ಅವನಿಗೆ ಕೆಲಸವಿಲ್ಲದಿದ್ದರೂ ನಾನೇ ಸಾಕಿದ್ದೇನೆ ಮಗುವಿನ ತರಹ ಅವರಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೀನಿ' ಎಂದು ವಿಡಿಯೋದಲ್ಲಿ ದಿವ್ಯಾ ಮಾತನಾಡಿದ್ದರು. ಅಸಲಿಗೆ, 2014ರಲ್ಲಿ ಶಕ್ತಿ ಧಾರಾವಾಹಿ ಮೂಲಕ ಬಣ್ಣ ಜರ್ನಿ ಆರಂಭಿಸಿದ ಅಮ್ಜದ್ ಖಾನ್ ಮೊಹಮ್ಮದ್ ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದುಕೊಂಡವರು. ಈ ಸಮಯದಲ್ಲಿ ದಿವ್ಯಾಳ ಜೊತೆ ಪ್ರೀತಿಯಲ್ಲಿ ಬಿದ್ದು ಆಕೆಗೆ ಜಾತಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾರೆ. ಪೋಷಕರಿಗೆ ಪ್ರೀತಿ ವಿಚಾರ ತಿಳಿಸಬೇಕು ಅವರಿಂದ ಮದುವೆ ಅನುಮತಿ ಪಡೆಯಬೇಕು ಎಂದು 2022ರ ಫೆಬ್ರವರಿಯಲ್ಲಿ ದಿವ್ಯಾ ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಅಂದಹಾಗೆ ದಿವ್ಯಾ ಬೆಂಗಳೂರಿನವರು. (Bangalore) ಕನ್ನಡದ ಆಕಾಶ ದೀಪ, (Akasha Deepa) ಸೇವಂತಿ ಸೇರಿ ಕೆಲವೊಂದು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ನಂತರ ಅವರಿಗೆ ತಮಿಳು ಕಿರುತೆರೆಯಲ್ಲಿ ಅವಕಾಶ ದೊರೆತಿದೆ. ಅಲ್ಲಿ ಅಮ್ಜದ್ ಖಾನ್ ಮೊಹಮ್ಮದ್ ಪರಿಚಯವಾಗಿತ್ತು.
ಮತ್ತೊಬ್ಬಳ ಜತೆ ಅಫೇರ್; ಪತಿಯ ವಿರುದ್ಧ ದೂರು ನೀಡಿದ ಗರ್ಭಿಣಿ ನಟಿ ದಿವ್ಯಾ ಶ್ರೀಧರ್
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇಸ್ಲಾಂ ಧರ್ಮದ ಪ್ರಕಾರ ದಿವ್ಯಾ ಮತ್ತು ಅಮ್ಜದ್ ಖಾನ್ ಮೊಹಮ್ಮದ್ ಮದುವೆಯಾಗಿದ್ದಾರೆ. ಮದುವೆಯಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಮದುವೆ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದಾರೆ. ಈ ನಡುವೆ ಕಿರುತೆರೆಯ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಸತ್ಯ ಬಿಚ್ಚಿಟ್ಟಿದ್ದರು. ನಂತರ, ಇಸ್ಲಾಂ ಧರ್ಮದ ಪ್ರಕಾರ ಮದುವೆ ಆದ ನಂತರ ಹಿಂದು ಸಂಪ್ರದಾಯದಲ್ಲೂ ಮದುವೆ ಆಗಬೇಕು ಎಂದು ದಿವ್ಯಾ ಡಿಮಾಂಡ್ ಮಾಡಿದ ಕಾರಣ ಕಾಂಚಿಪುರಂನಲ್ಲಿರುವ ದೇಗುಲದಲ್ಲಿ ಸರಳವಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ನಂತರ ದಿವ್ಯಾ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅಮ್ಜದ್ ಖಾನ್ ಮೊಹಮ್ಮದ್ ದೂರವಾಗುತ್ತಿರುವುದಾಗಿ ನಟಿ ಹೇಳಿಕೊಂಡಿದ್ದರು. ಅನಾರೋಗ್ಯದಿಂದ ದಿವ್ಯಾ ಕೆಲವು ದಿನಗಳ ಹಿಂದೆ ಚೆನ್ನೈನ ಸರ್ಕಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ದಿವ್ಯಾ ತುಂಬು ಗರ್ಭಿಣಿ. ಆದರೆ ಕೈಯಲ್ಲಿ ಕಾಸಿಲ್ಲ. ಇದ್ದದ್ದನ್ನೆಲ್ಲಾ ಪತಿಗೆ ಸುರಿದು ಆಗಿದೆ. ಇನ್ನು ಡೆಲವರಿಗೆ ಕೆಲವೇ ದಿನಗಳು ಬಾಕಿ ಇವೆ. ಆದರೆ ಈಗಲೂ ಅನಿವಾರ್ಯವಾಗಿ ದಿವ್ಯಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಬಗ್ಗೆ ನೋವನ್ನು ತೆರೆದಿಟ್ಟಿದ್ದಾರೆ ದಿವ್ಯಾ. 'ನನಗೆ ಯಾರೂ ಸಪೋರ್ಟ್ ಇಲ್ಲ, ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ನನಗೆ ಮಗು ಮುಖ್ಯ. ಆದ್ದರಿಂದ ಈ ಪರಿಸ್ಥಿತಿಯಲ್ಲೂ ದುಡಿಯುತ್ತಿದ್ದೇನೆ. ವಾಹಿನಿಯವರು ನನಗಾಗಿ ಕಥೆಯನ್ನೇ ಬದಲಿಸಿದರು' ಎಂದಿದ್ದಾರೆ. ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಿವ್ಯಾ ಈ ವಿಷಯ ತಿಳಿಸಿದ್ದಾರೆ. ನನಗೀಗ 9 ತಿಂಗಳು. ಡೆಲಿವರಿಗೆ ಇನ್ನು 10-15 ದಿನಗಳಷ್ಟೇ ಬಾಕಿ ಉಳಿದಿದೆ. ಈಗಲೂ ನಾನು ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಗರ್ಭಿಣಿ ಮಹಿಳೆಯರು ಡೆಲಿವರಿ ಹತ್ತಿರ ಬಂದಾಗ ಈ ರೀತಿ ಕೆಲಸ ಮಾಡುವುದು ಕಷ್ಟ. ಆದರೆ ನನ್ನ ಬಳಿ ದುಡ್ಡು ಇಲ್ಲ, ಕೆಲಸ ಅನಿವಾರ್ಯ. ವಾಹಿನಿಯವರು ನನಗಾಗಿ ಕಥೆಯನ್ನೇ ಬದಲಿಸಿದರು. ಬಹಳ ಜನರು ಈ ಮಗು ನಿನಗೆ ಬೇಕಾ? ಎಂದು ಕೇಳಿದ್ದರು. ಆದರೆ ಯಾರೋ ಮಾಡಿದ ತಪ್ಪಿಗೆ ಈ ಮಗುವಿಗೆ ಏಕೆ ಶಿಕ್ಷೆ ನೀಡಬೇಕು? ನನಗೆ ಒಂದು ವೇಳೆ ಗಂಡು ಮಗು ಆದರೆ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂದು ಕಲಿಸುತ್ತೇನೆ' ಎಂದು ದಿವ್ಯಾ ಹೇಳಿದ್ದಾರೆ.
Rakhi Sawant: ಇಸ್ಲಾಂ ಸ್ವೀಕರಿಸಿದ ನಟಿಯಿಂದ ರಂಜಾನ್ ತಿಂಗಳ ಅಚ್ಚರಿಯ ಘೋಷಣೆ!
ದಿವ್ಯಾ ಪರಿಸ್ಥಿತಿ ನೋಡಿದವರು ಈಗಲಾದರೂ ಹೆಣ್ಣುಮಕ್ಕಳಿಗೆ ಬುದ್ಧಿ ಬರುತ್ತದಾ ಎಂದು ಪ್ರಶ್ನಿಸುತ್ತಿದ್ದಾರೆ. ದೇಹ ತುಂಡು ತುಂಡಾಗಿ ಹೋದ ಉದಾಹರಣೆಗಳು ಕಣ್ಣಮುಂದೆ ಇದ್ದರೂ, ಪ್ರೀತಿ-ಮೋಹಕ್ಕೆ ಒಳಗಾಗುವವರೆ... ಈಗ ಈ ನಟಿಯ ಸ್ಥಿತಿ ನೋಡಿಯಾದರೂ ಕಲಿತುಕೊಳ್ಳಿ ಎಂದು ಹಲವರು ಹೇಳುತ್ತಿದ್ದಾರೆ. ಸುಂದರವಾದ ಹೇರ್ಸ್ಟೈಲ್, ದೊಡ್ಡ ದೊಡ್ಡ ಕಾರು, ಬೈಕು ತಂದು ಪೋಸ್ ಕೊಟ್ಟ ತಕ್ಷಣ ಮರುಳಾಗುವ ಹೆಣ್ಣುಮಕ್ಕಳೇ ಈಗ ಮರುಳಾದರೆ ಮುಂದೆ ನಿಜಕ್ಕೂ ಹುಚ್ಚರಾಗಿ ಬೀದಿಗೆ ಬೀಳುತ್ತೀರಾ, ಇಲ್ಲವೇ ತುಂಡುತುಂಡಾಗಿ ಫ್ರಿಜ್ ಸೇರುತ್ತೀರಾ ಎಂದು ಕೆಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.