ಟೀಸರ್‌ನ ಪ್ರಮುಖ ಆಕರ್ಷಣೆ ಗಣೇಶ್ ಅವರ ಎರಡು ವಿಭಿನ್ನ ಗೆಟಪ್‌ಗಳು. ಒಂದು ಕಡೆ ಸ್ಟೈಲಿಷ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕಡೆ ರಾಜನ ಅವತಾರದಲ್ಲಿ ಅದ್ದೂರಿಯಾಗಿ ಮಿಂಚಿದ್ದಾರೆ.

ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರೇಮಕಥೆಗಳು, ಕುಟುಂಬ ಭಾವನೆಗಳು ಹಾಗೂ ಕಾಮಿಡಿ ಪಾತ್ರಗಳ ಮೂಲಕ ಮನಗೆದ್ದಿರುವ ಗಣೇಶ್, ಈ ಬಾರಿ ‘ಪಿನಾಕ’ ಚಿತ್ರದ ಮೂಲಕ ಪುನರ್ಜನ್ಮದ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಇಂದು (ಜುಲೈ.6) ಬಿಡುಗಡೆಯಾದ ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಸರ್‌ನ ಪ್ರಮುಖ ಆಕರ್ಷಣೆ ಗಣೇಶ್ ಅವರ ಎರಡು ವಿಭಿನ್ನ ಗೆಟಪ್‌ಗಳು. ಒಂದು ಕಡೆ ಸ್ಟೈಲಿಷ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕಡೆ ರಾಜನ ಅವತಾರದಲ್ಲಿ ಅದ್ದೂರಿಯಾಗಿ ಮಿಂಚಿದ್ದಾರೆ. ಭವ್ಯ ಕೋಟೆಗಳು, ರೋಚಕ ಆ್ಯಕ್ಷನ್ ದೃಶ್ಯಗಳು ಹಾಗೂ ಐತಿಹಾಸಿಕ ಹಿನ್ನೆಲೆಯ ಝಲಕ್ ಸಿನಿಮಾದ ದೃಶ್ಯ ವೈಭವವನ್ನು ಎತ್ತಿಹಿಡಿಯುತ್ತವೆ. ಟೀಸರ್ ಗಮನಿಸಿದರೆ, ಕಥೆ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಸಾಗುವ ಸುಳಿವು ಸಿಗುತ್ತದೆ. ಭೂತಕಾಲ ಮತ್ತು ವರ್ತಮಾನವನ್ನು ಜೋಡಿಸುವ ಪುನರ್ಜನ್ಮದ ಕಥಾಹಂದರ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಈ ರೀತಿಯ ಕಥಾವಸ್ತುಗಳು ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆಯೂ ಯಶಸ್ಸು ಕಂಡಿರುವುದರಿಂದ, ‘ಪಿನಾಕ’ ಕೂಡ ಅದೇ ಹಾದಿಯಲ್ಲಿ ಸಾಗುತ್ತದೆಯೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆ ಮಾಡಿದೆ. ಗಣೇಶ್ ಅವರ ಜನ್ಮದಿನದ ವಿಶೇಷವಾಗಿ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಅನಾವರಣಗೊಳಿಸಲಾಗಿದೆ. ಅಕ್ಟೋಬರ್ 2, ಗಾಂಧಿ ಜಯಂತಿ ಪ್ರಯುಕ್ತ ‘ಪಿನಾಕ’ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಚಿತ್ರತಂಡ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.

ಅಭಿಮಾನಿಗಳಿಗೆ ಡಬಲ್ ಸಂಭ್ರಮ

ಇನ್ನೂ ವಿಶೇಷವೆಂದರೆ, ಇದೇ ತಿಂಗಳಲ್ಲೇ ಗಣೇಶ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಬೃಂದವಿಹಾರಿ’ ಕೂಡ ಅಕ್ಟೋಬರ್ 16ರಂದು ಬಿಡುಗಡೆಯಾಗಲಿದೆ. ಒಂದೇ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಅವರ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಎದುರಾಗಲಿದೆ. ‘ಪಿನಾಕ’ ಚಿತ್ರವನ್ನು People Media Factory ಬ್ಯಾನರ್ ಅಡಿಯಲ್ಲಿ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಗೌರ ಹರಿ ಸಂಗೀತ ಸಂಯೋಜಿಸಿದ್ದಾರೆ. ಟೀಸರ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿದರೆ, ‘ಪಿನಾಕ’ ಈಗಾಗಲೇ ಸಿನಿಪ್ರಿಯರ ವಾಚ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.