Asianet Suvarna News Asianet Suvarna News

ಗಣೇಶ್​​ಗೆ ಶುರುವಾಗಿದೆ ಗೋಲ್ಡನ್ ಟೈಮ್: ಗೋಲ್ಡನ್ ಸ್ಟಾರ್​ ಜೊತೆ ತೀರದಲಿ ಮೈ ಮರೆತ ಶರಣ್ಯ ಶೆಟ್ಟಿ!

ಗೋಲ್ಡನ್ ಸ್ಟಾರ್​ ಗಣೇಶ್​ಗೆ ಗೋಲ್ಡನ್ ಟೈಂ ಶುರುವಾದಂತಿದೆ. ಅದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ. ಯಾಕಂದ್ರೆ 'ಕೃಷ್ಣಂ ಪ್ರಣಯ ಸಖಿ' ಹಾಡುಗಳಿಂದಲೇ ಗಣೇಶ್​ ಫುಲ್ ಶೈನ್ ಆಗ್ತಿದ್ದಾರೆ. ಈ ಸಿನಿಮಾದ ಧ್ವಾಪರ ಹಾಡು ಸೂಪರ್ ಡೂಪರ್ ಹಿಟ್​ ಆಗಿದೆ.

Golden Star Ganesh Sharanya Shetty starrer Krishnam Pranaya Sakhi movie to be released soon gvd
Author
First Published Aug 13, 2024, 4:35 PM IST | Last Updated Aug 13, 2024, 4:35 PM IST

ಅದು 18 ವರ್ಷದ ಹಿಂದಿನ ಕಥೆ. 2006ರಲ್ಲಿ ಸ್ಯಾಂಡಲ್​ವುಡ್​​ ಮುಂಗಾರು ಮಳೆಯಲ್ಲಿ ನೆಂದು ಹೋಗಿತ್ತು. ಈ ಮುಂಗಾರು ಮಳೆಯನ್ನ ಕನ್ನಡ ಸಿನಿಮಾ ಪ್ರೇಕ್ಷಕರು ಎಂಜಾಯ್ ಮಾಡಿದ್ರು. ಆ ಮುಂಗಾರು ಮಳೆ ಬಂದು ಬರೋಬ್ಬರಿ 18 ವರ್ಷ ಆಗಿದೆ. ಅಂದು ಮುಂಗಾರು ಮಳೆ ಕೊಟ್ಟು ಗೋಲ್ಡನ್ ಸ್ಟಾರ್ ಆಗಿದ್ದ ಗಣೇಶ್ ಈಗ ಮುಂಗಾರು ಮಳೆಯಂತೆ ಮತ್ತೊತ್ತು ಹಿಟ್​ ಕೊಡೋ ಸೂಚನೆ ಕೊಟ್ಟಿದ್ದಾರೆ. ಅದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಗಣೀಶ್​ರ ನಿರೀಕ್ಷೆ, ಆಸೆ ಮತ್ತು ಕನಸಿನ ಕಥೆ. ಅಂದು ನಿರ್ದೇಶಕ ಯೋಗರಾಜ್ ಭಟ್​ ಜೊತೆ ಸೇರಿ ಮುಂಗಾರು ಮಳೆ ಗಾನ ಬಜಾನ ಮಾಡಿ ಗೋಲ್ಡನ್ ಸ್ಟಾರ್ ಕಿರೀಟವನ್ನ ಹೆಗಲೇರಿಸಿಕೊಂಡವರು ಗಣೇಶ್. ಈಗ ಮತ್ತೆ ಒನ್ಸ್​​​ ಅಗೈನ್ ಗಣೇಶ್​ ಮುಂಗಾರು ಮಳೆಯಂತೆ ಹಾಡುಗಳಿಂದ ಮತ್ತೊಂದು ಬಿಗ್ ಹಿಟ್ ಕೊಡೋಕೆ ಸಜ್ಜಾಗಿದೆ. 

ಆ ಸಿನಿಮಾವೇ ಕೃಷ್ಣಂ ಪ್ರಯಣ ಸಖಿ. ಗೋಲ್ಡನ್ ಸ್ಟಾರ್​ ಗಣೇಶ್​ಗೆ ಗೋಲ್ಡನ್ ಟೈಂ ಶುರುವಾದಂತಿದೆ. ಅದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ. ಯಾಕಂದ್ರೆ 'ಕೃಷ್ಣಂ ಪ್ರಣಯ ಸಖಿ' ಹಾಡುಗಳಿಂದಲೇ ಗಣೇಶ್​ ಫುಲ್ ಶೈನ್ ಆಗ್ತಿದ್ದಾರೆ. ಈ ಸಿನಿಮಾದ ಧ್ವಾಪರ ಹಾಡು ಸೂಪರ್ ಡೂಪರ್ ಹಿಟ್​ ಆಗಿದೆ. ರೀಲ್ಸ್​​​​ ಬಳಗವನ್ನ ಬಾಚಿಕೊಳ್ಳುತ್ತಿದೆ. ಈಗ ಮೆಲೋಡಿ ಪ್ರೀತಿಯರ ಮನ ಗೆಲ್ಲೋಕೆ ಮತ್ತೊಂದು ಹಾಡು ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್​​​​​ ಜೊತೆ ಯಾವ ನಟಿ ಕಾಣಿಸಿಕೊಂಡ್ರು ಫ್ರೇಮ್​​​​ನಲ್ಲಿ ಒಂದು ಫೀಲ್​ ಇರುತ್ತೆ.  ಧ್ವಾಪರ ಹಾಡಿನಲ್ಲಿ ಗಣೇಶ್​ ಜೊತೆ ಮಾಳವಿಕಾ ನಾಯರ್​​ ಮೋಡಿ ಮಾಡಿದ್ರು. ಈಗ ಗಣೇಶ್​​​​​ ಜೊತೆ ಶರಣ್ಯ ಶೆಟ್ಟಿ ಕೃಷ್ಣಂ ಪ್ರಣಯ ಸಖಿಯಾಗಿದ್ದಾರೆ. ಗೋಲ್ಡನ್​ ಸ್ಟಾರ್​ ಜೊತೆ ತೀರದಲಿ ಮೈ ಮರೆತಿದ್ದಾರೆ ಶರಣ್ಯ ಶೆಟ್ಟಿ.

ಬೆಂಗಳೂರಿನ ಮಾಲ್​ ಒಂದರಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮೆಲೋಡಿ ಗೀತೆಯನ್ನ ರಿಲೀಸ್ ಮಾಡಿದ್ರು. ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. 'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸ್ ರಾಜು ಹಿಂಸಾತ್ಮಕ ಸಿನಿಮಾಗಳನ್ನು ಮಾಡುವುದನ್ನು ಬಿಟ್ಟಿದ್ದಾರೆ. ಈಗ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಪೆನ್ ಹಿಡಿದು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗೆ ಬೆಂಗಳೂರಿನ ಮಾಲ್​ ಒಂದರಲ್ಲಿ ಕೃಷ್ಣಂ ಪ್ರಣಯ ಸಖಿ ಪ್ರೀ ರಿಲೀಸ್​ ಕಾರ್ಯಕ್ರಮ ನಡೆದಿದೆ. 

ಟಾಕ್ಸಿಕ್ ಶೂಟಿಂಗ್ ಶುರುವಿನಲ್ಲೇ ಯಶ್‌ಗೆ ಶುರುವಾಯ್ತು ಟೆನ್ಷನ್: ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದ ರಾಕಿಂಗ್ ಸ್ಟಾರ್

ಕಾರ್ಯಕ್ರಮದಲ್ಲಿ ನಟ ರಂಗಾಯಣ ರಘು, ಶಶಿಕುಮಾರ್, ಗಣೇಶ್​, ಮಾಳವಿಕಾ ನಾಯರ್​, ಶರಣ್ಯಾ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ನಟ ರಂಗಾಯಣ ರಘು ಸ್ಟೇಜ್​ ಹತ್ತಿ ಒಂದು ಸ್ಟೆಪ್​ ಹಾಕೇ ಬಿಟ್ರು. ಮಳೆ ಹುಡುಗ ಗಣೇಶ್​​ ಪ್ರೇಮಿಗಳ ಹೃದಯ ಸಾಮ್ರಾಟ್. ಇವರ ಸಿನಿಮಾಗಳನ್ನ ಹೆಚ್ಚು ಹೆಚ್ಚು ಇಷ್ಟ ಪಡೋದೇ ಲವರ್ಸ್​ ಹಾಗು ಫ್ಯಾಮಿಲಿ ಆಡಿಯೆನ್ಸ್. ಮೆಲೋಡಿ ಪ್ರೀಯರು. ಗಣೇಶ್​ ಸಿನಿಮಾಗಳಲ್ಲಿ ರೊಮ್ಯಾಂಟಿಕ್​ ಮೆಲೋಡಿ ಹಾಡುಗಳು ಮೋಡಿ ಮಾಡೇ ಮಾಡುತ್ತವೆ. ಈಗ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲೂ ಒಟ್ಟು ಏಳು ಮೆಲೋಡಿ ಟ್ರ್ಯಾಕ್​​ಗಳಿದ್ದು, ಸಂಗೀತ ಪ್ರೀಯರಿಗೆ ಸಿನಿ ಪ್ರೇಕ್ಷಕರಿಗೆ ಥಿಯೇಟರ್​​ಗೆ ಬರುವಂತೆ ಇನ್ವಿಟೇಷನ್ ಕೊಟ್ಟಿವೆ. ಆಗಸ್ಟ್​ 15ಕ್ಕೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ತೆರೆ ಮೇಲೆ ಬರಲಿದೆ.

Latest Videos
Follow Us:
Download App:
  • android
  • ios