ಬೆಂಗಳೂರು (ಏ. 10): ಗಣೇಶ್‌ ಅಭಿನಯದ ‘99’ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 26 ಕ್ಕೆ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಏಪ್ರಿಲ್ 23 ಕ್ಕೆ ಲೋಕಸಭಾ ಚುನಾವಣೆ ಮುಗಿಯಲಿದೆ. ಅದೇ ವಾರ ‘99’ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ. ಗಣೇಶ್‌ ಹಾಗೂ ಭಾವನಾ ಅಭಿನಯದ ಈ ಚಿತ್ರವು, ತಮಿಳಿನ ಸೂಪರ್‌ ಹಿಟ್‌ ಚಿತ್ರ ‘96’ನ ರಿಮೇಕ್‌.

ತಮಿಳಿನಲ್ಲಿ ವಿಜಯ್‌ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆ ಜಾಗದಲ್ಲೀಗ ಗಣೇಶ್‌ ಹಾಗೂ ಭಾವನಾ ಇದ್ದಾರೆ. ಅವರೊಂದಿಗೆ ಸಮೀಕ್ಷಾ ಹಾಗೂ ಹೇಮಂತ್‌ ಅಭಿನಯಿಸಿದ್ದಾರೆ. ಪ್ರೀತಮ್‌ ಗುಬ್ಬಿ ನಿರ್ದೇಶಿಸಿದ್ದು, ಚಿತ್ರದ ನಿರ್ಮಾಣಕ್ಕೆ ರಾಮು ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಈಗಾಗಲೇ 99 ಹಾಡುಗಳ ಮೂಲಕ ಭರ್ಜರಿ ಸದ್ದು ಮಾಡಿದೆ.