ಶಿವರಾಜ್ ಕುಮಾರ್ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವೆಬ್ ಸರಣಿಯಲ್ಲಿ ನಟಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮಿಳು ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಹೀರೋ ಆಗಲಿದ್ದಾರೆ. ಜೊತೆಗೆ ಮೊದಲ ಬಾರಿಗೆ ಖಳ ನಾಯಕನಾಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ನೆಗೆಟಿವ್ ಪಾತ್ರದಲ್ಲಿ ಶಿವಣ್ಣ

‘ಆಯುಷ್ಮಾನ್‌ಭವ’ ಸಿನಿಮಾ ತೆರೆಗೆ ಬಂದ ಮೇಲೆ ‘ಭಜರಂಗಿ 2’ ಚಿತ್ರ ಮುಗಿಸಿ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಶಿವಣ್ಣ. ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಮೂಲಕ ಕಾರ್ತಿಕ್ ಗೌಡ ನಿರ್ಮಾಣ ಮಾಡಲಿದ್ದು, ಯೋಗಿ ಜಿ. ರಾಜ್ ನಿರ್ದೇಶನ ಮಾಡಲಿದ್ದಾರೆ. ಇಲ್ಲಿ ಶಿವಣ್ಣ ನೆಗೆಟಿವ್ ಪಾತ್ರ ಮಾಡಲಿದ್ದಾರೆ. ಪಕ್ಕಾ ವಿಲನ್ ರೋಲ್ ಅಲ್ಲ. ಬದಲಾಗಿ ‘ಓಂ’ ಚಿತ್ರದ ಸ್ಫೂರ್ತಿಯೊಂದಿಗೆ ಮಾಡಿಕೊಂಡಿರುವ ಕತೆ.

'ಆಯುಷ್ಮಾನ್‌ಭವ' ರಿಲೀಸ್‌ ಡೇಟ್‌ ಬದಲಾಗಿದಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೊಂದಲ!

‘ತೆರೆ ಮೇಲೆ ನಾನು ಎಷ್ಟು ದಿನಾ ಅಂತ ಒಳ್ಳೆಯವನಾಗಿ ಕಾಣಿಸಿಕೊಳ್ಳೋದು? ಹೊಸ ಪ್ರಯತ್ನ ಮಾಡೋಣ. ಹೀರೋ ಆಗಿದ್ದುಕೊಂಡು ವಿಲನ್ ಅಥವಾ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಧೈರ್ಯಬೇಕು. ಆ ಧೈರ್ಯವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ’ ಎನ್ನುವುದು ಶಿವಣ್ಣ ಅವರ ಮಾತು.

ವೆಬ್ ಸರಣಿಯಲ್ಲಿ ನಟನೆ

ಸಿನಿಮಾ ಕ್ಷೇತ್ರದಲ್ಲಿ ಡಿಜಿಟಲ್ ಮಾರುಕಟ್ಟೆ ಪ್ರಯೋಗಗಳು ನಡೆಯುತ್ತಿರುವ ಹೊತ್ತಿನಲ್ಲಿ ವೆಬ್ ಸರಣಿಗಳು ಮಹತ್ವ ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರು ವೆಬ್ ಸರಣಿಯಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ. ಓಂಕಾರ ಹೆಸರಿನಲ್ಲಿ ಶಿವಣ್ಣ ಪುತ್ರಿ ನಿವೇದಿತಾ ವೆಬ್ ಸರಣಿ ನಿರ್ಮಿಸಲಿದ್ದಾರೆ. ಇದರ ಜತೆಗೆ ‘ಐ ಹೇಟ್ ಯೂ ರೋಮಿಯೋ’ ವೆಬ್ ಸರಣಿ ಜನವರಿಯಿಂದ ಪ್ರಸಾರಗೊಳ್ಳಲಿದೆ. ಈ ಎಲ್ಲದರ ಜತೆಗೆ ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸತ್ಯ ಜಾತಿ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಡಾ. ವಿಷ್ಣುವರ್ಧನ್ ಅವರ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.

'ಕೆಟ್ಟದ್ದಕ್ಕೂ, ಒಳ್ಳಯದ್ದಕ್ಕೂ ನಾನೇ ಕಾರಣವಂತೆ, ಇದೆಲ್ಲ ಹೇಗೆ ಸಾಧ್ಯ!'

ಮಫ್ತಿ ನಿರ್ದೇಶಕ ನರ್ತನ್ ಹೊಸ ಸಿನಿಮಾ

ಶಿವಣ್ಣ ನಟನೆಯ 125ನೇ ಚಿತ್ರಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಚಿತ್ರದ ಹೆಸರು ‘ಭೈರತಿ ರಣಗಲ್’. ನಿರ್ದೇಶನ ನರ್ತನ್ ಅವರದು. ಶ್ರೀಮುತ್ತು ಕ್ರಿಯೇಷನ್‌ನ ಮೊದಲ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗುತ್ತಿದ್ದಾರೆ.