ಹೊಸಪೇಟೆಯ ಅನ್ನಪೂರ್ಣೇಶ್ವರಿ ಶಾಲೆ ದತ್ತು ಪಡೆದ ಗೀತಾ ಶಿವರಾಜ್‌ಕುಮಾರ್!
ಶಕ್ತಿಧಾಮ ಮೂಲಕ ಮತ್ತೊಂದು ಶಾಲೆ ದತ್ತು ಪಡೆದ ಗೀತಕ್ಕೆ- ಶಿವಣ್ಣ.
ಡಾ. ಪಾರ್ವತಮ್ಮ ರಾಜ್‌ಕುಮಾರ್ ಸ್ಥಾಪಿಸಿದ ಮೈಸೂರಿನ ಶಕ್ತಿಧಾಮವನ್ನು ಕಿರಿಯ ಪುತ್ರಿ ಪುನೀತ್ ರಾಜ್‌ಕುಮಾರ್ ಮತ್ತು ಪತ್ನಿ ಅಶ್ವಿನಿ ಪುನೀತ್ ಮುಂದುವರೆಸುತ್ತಿದ್ದರು. 2021 ಅಕ್ಟೋಬರ್ 21ರಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿದರು, ಅಂದಿನಿಂದ ಶಕ್ತಿಧಾಮವನ್ನು ಸಂಪೂರ್ಣವಾಗಿ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ನೋಡಿಕೊಳ್ಳುತ್ತಿದ್ದಾರೆ. ದೊಡ್ಡ ಮನೆ ಸಮಾಜ ಸೇವೆ ಇಲ್ಲಿಗೆ ನಿಂತಿಲ್ಲ ಈಗ ಹೊಸಪೇಟೆಯಲ್ಲಿರುವ ಅನ್ನಪೂರ್ಣೇಶ್ವರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.
ಹೌದು! ಬಡ ಮಕ್ಕಳು ಹಾಗೂ ಅನಾಥರು ಅಬಲೆಯರಿಗೆ ಆಶ್ರಯ ಮತ್ತು ಶಿಕ್ಷಣ ಕೊಡಿಸಲೆಂದು ದೊಡ್ಡ ಮನೆ ಕುಟುಂಬ ಮೈಸೂರಿನಲ್ಲಿ ಶಕ್ತಿಧಾಮ ಸ್ಥಾಪನೆ ಮಾಡಿದ್ದಾರೆ. ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಅನ್ನೋದು ಸದಾ ಅಪ್ಪು ಅವರ ಕನಸು ಆಗಿತ್ತು. ಈ ಕನಸನ್ನು ಶಿವಣ್ಣ ಮುಂದುವರೆಸುತ್ತಿದ್ದಾರೆ. ಈ ಶಕ್ತಿಧಾಮದ ಮೂಲಕ ಮತ್ತೊಂದು ಬಡ ಶಾಲೆಯನ್ನು ದತ್ತು ಪಡೆದಿದ್ದಾರೆ. ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿರುವ ಅನ್ನಪೂರ್ಣೇಶ್ವರಿ ವಿದ್ಯಾಪೀಠ ದತ್ತು ತೆಗೆದುಕೊಳ್ಳುತ್ತಿದ್ದಾರೆ.
2012ರಲ್ಲಿ ಸ್ಥಾಪನೆಯಾಗಿರುವ ಈ ಉಚಿತ ವಸತಿಯುತ ಪ್ರೌಢ ಶಾಲೆಯಲ್ಲಿ ನೂರಾರು ಬಡ ಮಕ್ಕಳಿದ್ದಾರೆ. 8 ರಿಂದ 10ನೇ ತರಗತಿವರೆಗೂ ಈ ಶಾಲೆಯಲ್ಲಿ ಸಧ್ಯ 123 ಮಕ್ಕಳ ವಿದ್ತಾಭ್ಯಾಸ ಮಾಡುತ್ತಿದ್ದಾರೆ. ಆದರೆ ಅನುಧಾನವಿಲ್ಲದೆ ಈ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿತ್ತು ಅಷ್ಟರಲ್ಲಿ ಸಹಾಯಕ್ಕೆ ದೊಡ್ಡ ಮನೆ ಕುಟುಂಬ ಆಶ್ರಯಕ್ಕೆ ಬಂದರು. ಹಿಂದೆ ಈ ಶಾಲೆಯನ್ನು ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ ಶಾಲೆ ನಡೆಸುತ್ತಿದ್ದರು. ಶಿವಣ್ಣ ನಟನೆಯ ವೇದ ಸಿನಿಮಾ ಪ್ರಮೋಷನ್ ಸಮಯದಲ್ಲಿ ಶಿವಣ್ಣ ಈ ಶಾಲೆಗೆ ಭೇಟಿ ನೀಡಿದ್ದರು ಆಗ ಸ್ವಾಮೀಜಿ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿ ಶಿವಣ್ಣ ಕುಟುಂಬ ದತ್ತು ಪಡೆದಿದ್ದಾರೆ
ಶಾಲೆ ದತ್ತು ಪಡೆದ ಸುದೀಪ್:
ನಟ ಸುದೀಪ್ ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಸುದೀಪ್ ಅವರ ಈ ದತ್ತು ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತವಾಗಿ ಒಪ್ಪಿಗೆ ಕೊಟ್ಟಿದ್ದಾರೆ. ಈ ಸರ್ಕಾರಿ ಶಾಲೆ 133 ವರ್ಷಗಳ ಹಳೆಯ ಕಟ್ಟಡ ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಶಾಲೆಗಾಗಿ ನಾವು ನೀವು’ ಯೋಜನೆಯಡಿ ಶಾಲೆಯನ್ನು ದತ್ತು ಪಡೆದಿದ್ದು, ಈ ಮೂಲಕ ಕಿಚ್ಚ ಅವರ ಶಾಲೆ ಉಳಿಸಿ ಕಾಳಜಿಗೆ ಮತ್ತೊಂದು ಸರ್ಕಾರಿ ಶಾಲೆ ಸೇರಿಕೊಂಡಂತಾಗಿದೆ.ಈ ಶಾಲೆಯ ಜೊತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೂಡ ತೆಗೆದುಕೊಂಡಿದ್ದಾರೆ. ಈ ಎರಡೂ ಶಾಲಾ, ಕಾಲೇಜಿನಲ್ಲಿ ಶಿವಮೊಗ್ಗದ ಅನೇಕ ಗಣ್ಯರು ಕಲಿತಿದ್ದಾರೆ.
ಅಪ್ಪು ಸಂಜೆ ಫ್ಯಾಮಿಲಿ ಜೊತೆ ಡ್ರೈವ್ ಹೋಗುತ್ತಿದ್ದ; ಫ್ಯಾಮಿಲಿಗಳ ಬಗ್ಗೆ ಮಾತನಾಡಿದ ಶಿವಣ್ಣ
ಶಾಲೆ ದತ್ತು ಪಡೆದ ದೇವರಾಜ್:
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಡಸ ಶಾಲೆಗೆ ದೇವರಾಜ ಕುಟುಂಬ ಭೇಟಿ ನೀಡಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಕುಡಿಯುವ ನೀರಿನ ಲೋಟ ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ನಟ ಪ್ರಜ್ವಲ್ ದೇವರಾಜ್, ಸರ್ಕಾರಿ ಶಾಲೆಗಳ ರಕ್ಷಣೆ ಹಾಗೂ ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ. ಖಾಸಗಿ ಶಾಲೆಯ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೂ ಸಿಗಬೇಕು. ಆದರೆ, ಜನರು ಮನಸ್ಸು ಮಾಡದ ಕಾರಣ ಸರ್ಕಾರಿ ಶಾಲೆಗಳ ದಾಖಲಾತಿ ಕುಂಠಿತವಾಗುತ್ತಿವೆ. ಇದನ್ನು ಮನಗಂಡು ಶಾಲೆ ದತ್ತು ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.