Asianet Suvarna News Asianet Suvarna News

ಡ್ರಗ್ಸ್ ಸೇವನೆ ಸಾಬೀತು: ಮೌನ ಮುರಿದ ರಾಗಿಣಿ ಹೇಳಿದ್ದಿಷ್ಟು

  • ಡ್ರಗ್‌ಸ ತೆಗೆದುಕೊಂಡಿರುವುದು ಸಾಬೀತು
  • ಕೊನೆಗೂ ಮೌನ ಮುರಿದ ನಟಿ ರಾಗಿಣಿ ದ್ವಿವೇದಿ 
FSL report confirms consumption of drugs Sandalwood actress  Ragini Dwivedi reacts dpl
Author
Bangalore, First Published Aug 25, 2021, 1:27 PM IST
  • Facebook
  • Twitter
  • Whatsapp

FSL ವರದಿಯಲ್ಲಿ ರಾಗಿಣಿ ದ್ವಿವೇದಿ ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಸ್ಯಾಂಡಲ್‌ವುಡ್ ಇಬ್ಬರು ನಟಿಯರು ರಾಗಿಣಿ ಹಾಗೂ ಸಂಜನಾಗೆ ಈಗ ಮತ್ತೆ ಸಂಕಟ ಎದುರಾಗಿದೆ. ಇದೀಗ ನಟಿ ರಾಗಿಣಿ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಈ ಹಿಂದೆ ಡ್ರಗ್ಸ್ ವಿಚಾರವಾಗಿ ನನ್ನನ್ನು 100ರಷ್ಟು ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸ್ಯಾಂಡಲ್‌ವುಡ್ ಚೆಲುವೆ ಈಗ ಹೇಳಿರೋದೇನು ?

ನಿನ್ನೆ ಎಫ್ಎಸ್ಎಲ್ ರಿಪೋರ್ಟ್ ಬಂದಾಗಿನಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಂದ ದೂರವಿದ್ದ ರಾಗಿಣಿ ದ್ವಿವೇದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಬರೋಬ್ಬರಿ 10 ತಿಂಗಳ ನಂತರ ವರದಿ ಬಂದಿದ್ದು ಚಾರ್ಜ್‌ಶೀಟ್‌ನಲ್ಲಿಯೂ ಈ ವರದಿಯ ಕುರಿತು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಜಾಮೀನಿನ ಮೇಲೆ ಹೊರಗೆ ಬಂದ ನಟಿ ಮತ್ತೆ ಜೈಲು ಸೇರಲಿದ್ದಾರಾ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತು: ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ

ನೀನು ಅಂದುಕೊಂಡಂತೆ ನಡೆಯದಿದ್ದರೂ ಬೇಸರ ಮಾಡಿಕೊಳ್ಳಬಾರದು. ದೇವರು ನಿಮಗಾಗಿ ಮಾಡಿರುವ ಪ್ಲಾನ್‌ಗಳಲ್ಲಿ ಅಷ್ಟು ವಿಶ್ವಾಸ ಇರಬೇಕು ಎಂದಿದ್ದಾರೆ ನಟಿ. ಹೀಗೆಂದು ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಸದ್ಯ ಮನೆಯಲ್ಲಿಯೇ ಇರುವ ರಾಗಿಣಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

FSL report confirms consumption of drugs Sandalwood actress  Ragini Dwivedi reacts dpl

ಫೋನ್ ಮೂಲಕ ತಮ್ಮ ಲಾಯರ್ ಜತೆ ಸಂಪರ್ಕದಲ್ಲಿರುವ ರಾಗಿಣಿ ಕಾನೂನು ರೀತಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಾರೆ. ನಟಿಯರು ಮತ್ತೆ ಜೈಲು ಸೇರುವ ಸಾಧ್ಯತೆ ಬಗ್ಗೆಯೂ ಮಾತು ಕೇಳಿ ಬರುತ್ತಿದ್ದು ಈಗಾಗಲೇ 12 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

"

Follow Us:
Download App:
  • android
  • ios