Asianet Suvarna News Asianet Suvarna News

ಕನ್ನಡ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಕರ್ನಾಟಕ ರಾಜಕಾರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಆಗಿರುವ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ. ಕನ್ನಡದ ದೇಸಾಯಿ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.

Former Deputy Chief Minister Laxman Savadi entered the field of sandalwood film industry sat
Author
First Published Oct 1, 2023, 3:59 PM IST

ಬಾಗಲಕೋಟೆ (ಅ.01): ರಾಜ್ಯ ರಾಜಕಾರಣದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಶಾಸಕ ಲಕ್ಷ್ಮಣ ಸವದಿ ಅವರು ೀಗ ರಾಜಕೀಯದ ಜೊತೆಗೆ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ದೇಸಾಯಿ ಕನ್ನಡ ಸಿನಿಮಾಕ್ಕಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣ್ಣವನ್ನು ಹಚ್ಚಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ದೇಸಾಯಿ ಚಿತ್ರದ ಅತಿಥಿ ಪಾತ್ರದಲ್ಲಿ ಲಕ್ಷ್ಮಣ ಸವದಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡವು ಅವರನ್ನು ಭೇಟಿ ಮಾಡಿ ಅತಿಥಿ ಪಾತ್ರವನ್ನು ಮಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಬಣ್ಣವನ್ನು ಹಚ್ಚಿಕೊಂಡ ಲಕ್ಷ್ಮಣ ಸವದಿ ಅವರು ಇಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆಯುತ್ತಿರುವ ದೇಸಾಯಿ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾದ ಲಕ್ಷ್ಮಣ ಸವದಿ ಭಾಗವಹಿಸಿದ್ದು, ಸ್ಥಳೀಯರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಸಿನಿಮಾಕ್ಕೆ ನಾಗಿರೆಡ್ಡಿ ನಿರ್ದೇಶನ, ಮಹಾಂತೇಶ್ ಚೊಳಚಗುಡ್ಡ ನಿರ್ಮಾಣವಿದೆ. ಲವ್ 360 ಖ್ಯಾತಿಯ ಪ್ರವೀಣ ನಟಿಸುತ್ತಿರುವ ಸಿನಿಮಾ ಇದಾಗಿದೆ. ಇನ್ನು ಸಿನಿಮಾದಲ್ಲಿ ಕುಸ್ತಿ ಪಟುವಿಗೆ ಪ್ರಶಸ್ತಿ ನೀಡಿ ಹುರಿದುಂಬಿಸುವ ಪಾತ್ರದಲ್ಲಿ ಲಕ್ಷ್ಮಣ ಸವದಿ ನಟನೆ ಮಾಡುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಸಿನಿಮಾದಲ್ಲಿ ಒಂದು ಸಣ್ಣ ಪಾತ್ರವಿದೆ. ಸಿನಿಮಾ ನಾಯಕನಿಗೆ ಹುರಿದುಂಬಿಸುವ, ಪ್ರಶಸ್ತಿ ಪ್ರದಾನ ಮಾಡುವ ಪಾತ್ರವನ್ನು ನಿರ್ವಹಿಸಿದ್ದೇನೆ. ನನಗೆ ಕೊಟ್ಟಿರುವ ಅವಕಾಶ ಬಳಿಸಿಕೊಂಡು ನಟನೆ ಮಾಡಿದ್ದೇನೆ. ಮೊದಲ ಬಾರಿಗೆ ಸಿನಿಮಾ ಕ್ಯಾಮೆರಾ ಮುಂದೆ ನಿಂತಿದ್ದು ಖುಷಿಯಾಗಿದೆ. ಜೀವನದಲ್ಲಿ ಹೊಸ ಆಯಾಮ & ಅನುಭವ ತಂದಿದೆ. ರಾಜಕೀಯದಲ್ಲಿ ಒಬ್ಬರನ್ನೊಬ್ಬರ ಕಾಲೆಳೆದು ಮೇಲೆ ಬರುವ ದೃಶ್ಯಗಳನ್ನು ಒಳಗೊಂಡಂತೆ ಜನರ ನಡುವೆ ನಡೆಯುವ, ಸಮಾಜದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನ ಕ್ರೂಡಿಕರಿಸಿ ಚಿತ್ರ ಮಾಡಲಾಗುತ್ತಿದೆ ಎಂಬ ಸುಳಿವನ್ನು ನೀಡಿದರು.

ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂಬುದನ್ನು ಒಪ್ಪಲಾಗದು: ಶ್ಯಾಮನೂರು ಶಿವಶಂಕ್ರಪ್ಪನವರು ಸಮಾಜದ ಅಗ್ರ ಸ್ಥಾನದಲ್ಲಿರುವರು, ಹಿರಿಯರು ಆಗಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ನಾವ ಹೇಳಿಕ್ಕಾಗಲ್ಲ. ಅವ್ರ ಜೊತೆ ಸಮಾಲೋಚನೆ ಮಾಡಿ ಪ್ರತಿಕ್ರಿಯೆ ಕೊಡ್ತಿನಿ. ಲಿಂಗಾಯತರಲ್ಲಿ 7 ಜನ ಮಂತ್ರಿ ಇದ್ದಾರೆ. ಎಲ್ಲಾ ಸರ್ಕಾರದಲ್ಲೂ ಒಂದೊಂದು ಸಮಾಜಕ್ಕೆ ಹೆಚ್ವಿನ ಆದ್ಯತೆ ಕೊಡೋದು ಬಹಳ ಕಷ್ಟವಾಗಲಿದೆ. ನೀವು ಸಹ ಗೆದ್ದು ಬಂದ್ಮೇಲೆ ಮಂತ್ರಿ ಆಗಬೇಕು ಎಂದುಕೊಂಡಿದ್ದಿರಿ. ಆದ್ರೆ ಲಿಂಗಾಯತರನ್ನ ಕಡೆಗಣಿಸಿಲ್ವಾ ಸರ್ಕಾರದಲ್ಲಿ ಎಂಬ ಪ್ರಶ್ನೆಯನ್ನು ನಾನು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದರು.

ಲಿಂಗಾಯತ ಸಿಎಂ: ಶಾಮನೂರು ಶಿವಶಂಕರಪ್ಪ ಬಗ್ಗೆ ಟೀಕೆ ಮಾಡಲು ಆಗೋದಿಲ್ಲ, ಸಚಿವ ಪರಮೇಶ್ವರ್‌

ಸಮಾಜದಲ್ಲಿ ಸಿಕ್ಕ ಗೌರವಕ್ಕೆ ತೃಪ್ತಿ ಪಡಬೇಕು: ಇನ್ನು ಯಾವುದೇ ರಾಷ್ಟ್ರೀಯ ಪಕ್ಷಗಳಲ್ಲಿ ಎಲ್ಲಾ ಸಮುದಾಯಗಳನ್ನ ತಗೆದುಕೊಂಡು ಹೋಗೋದು ಕರ್ತವ್ಯ, ದೂರದೃಷ್ಠಿಯಾಗಿದೆ. ರಾಜ್ಯ ಸರ್ಕಾರದಲ್ಲಿ ತಕ್ಷಣಕ್ಕೆ ಮಂತ್ರಿ ಆಗಬೇಕು ಅನ್ನೋ ಬಯಕೆ ಇದ್ದೇ ಇರುತ್ತೆ, ಆಸೆಗೆ ಕೊನೆ ಎಂಬುದು ಇರಲ್ಲ. ಸಮಾಜದಲ್ಲಿ ಸಿಕ್ಕ ಗೌರವದಲ್ಲಿ ತೃಪ್ತಿ ಪಡಬೇಕು. ಸಮಾಜ ಸೇವೆ ಮಾಡುವ ಗುರಿ ಆಗಿರಬೇಕೆ ಹೊರತು, ಬಿಸಿಲುಕುದುರೆ ಹತ್ತುವ ಕೆಲಸ ಮಾಡಬಾರದು ಎಂದು ಹೇಳಿದರು.

Follow Us:
Download App:
  • android
  • ios