Asianet Suvarna News Asianet Suvarna News

ಲಿಂಗಾಯತ ಸಿಎಂ: ಶಾಮನೂರು ಶಿವಶಂಕರಪ್ಪ ಬಗ್ಗೆ ಟೀಕೆ ಮಾಡಲು ಆಗೋದಿಲ್ಲ, ಸಚಿವ ಪರಮೇಶ್ವರ್‌

ಎಲ್ಲಾ ಚನ್ನಾಗಿದ್ದರೆ ಯಾರು ನಿಮ್ಮನ್ನು ಮಾತೇ ಆಡಿಸುವುದಿಲ್ಲ. ಹಾಗಾಗಿ ಆಗ ರೀತಿ ಬರಬೇಕು, ಬರ್ತಾ ಇರುತ್ತದೆ, ಏನು ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿದೆ, ಜನ ಆಶೀರ್ವಾದ ಮಾಡಿದ್ದಾರೆ‌. ಕೊಟ್ಟ ಮಾತಿನಂತೆ ನಾವು ಕೆಲಸ ಮಾಡ್ತಾ ಇದ್ದೇವೆ. ಸಿಎಂ, ಸಚಿವರು ಕೆಲಸದಲ್ಲಿ ಬ್ಯುಸಿ ಇದ್ದೇವೆ. ಬೇರೆ ಯಾವುದು ನಮ್ಮ ಹತ್ರ ಬರೋದಿಲ್ಲ: ಪರಮೇಶ್ವರ್

Home Minister G Parameshwar React to Shamanuru Shivashankarappa Statement grg
Author
First Published Oct 1, 2023, 12:41 PM IST

ಬೆಂಗಳೂರು(ಅ.01):  ಶಾಮನೂರು ಶಿವಶಂಕರಪ್ಪ ಅವರು ಪಕ್ಷದಲ್ಲಿ, ರಾಜಕಾರಣದಲ್ಲಿ ಹಿರಿಯರು. ಅವರ ಬಗ್ಗೆ ಟೀಕೆ ಟಿಪ್ಪಣಿಗಳು ಮಾಡಲು ಆಗುವುದಿಲ್ಲ. ಆದರೆ ಅವರು ಹೇಳಿದ ಮಾತು ಬಹಳ ಗಂಭೀರವಾಗಿರೋದು. ನಾವು ಸರ್ಕಾರದದಲ್ಲಿ ಜಾತಿ ಆಧಾರಿತವಾಗಿ ಪೋಸ್ಟಿಂಗ್ ಮಾಡುವುದಿಲ್ಲ. ಅಧಿಕಾರಿಗಳ ಸಾಮಾರ್ಥ್ಯವನ್ನ ನೋಡ್ತೇವೆ. ಆ ಸಂದರ್ಭದಕ್ಕೆ ಯಾವ ಅಧಿಕಾರಿಯನ್ನ ಹಾಕಬೇಕು ಎಂದು ಸಿಎಂ ಹಿರಿಯ ಶ್ರೇಣಿ ಅಧಿಕಾರಿಗಳನ್ನು ತೀರ್ಮಾನ ಮಾಡ್ತಾರೆ. ಹಿರಿಯ ಅಧಿಕಾರಿಗಳನ್ನು ಸಚಿವರು ತೀರ್ಮಾನ ಮಾಡ್ತಾರೆ. ಆ ಜಾತಿ ಅಲ್ಲಿ ಹಾಕಬೇಕು, ಈ ಜಾತಿಯನ್ನ ಇಲ್ಲಿ ಹಾಕಬೇಕು ಎಂದು ಯಾವ ಸರ್ಕಾರ ಮಾಡಲ್ಲ. ಶಂಕರಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಇದಕ್ಕೆ ಉತ್ತರ ಒಂದೇ ಸಿಎಂರನ್ನ ಭೇಟಿ ಮಾಡಿ, ಚರ್ಚೆ ಮಾಡಿ ಇದನ್ನು ಬಗೆಹರಿಸುವುದು. ಇದನ್ನು ಶಂಕರಣ್ಣ ಅವರಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. 

ಇಂತಹ ಹೇಳಿಕೆಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಎಲ್ಲಾ ಚನ್ನಾಗಿದ್ದರೆ, ಯಾರು ನಿಮ್ಮನ್ನು ಮಾತೇ ಆಡಿಸುವುದಿಲ್ಲ. ಹಾಗಾಗಿ ಆಗ ರೀತಿ ಬರಬೇಕು, ಬರ್ತಾ ಇರುತ್ತದೆ, ಏನು ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿದೆ, ಜನ ಆಶೀರ್ವಾದ ಮಾಡಿದ್ದಾರೆ‌. ಕೊಟ್ಟ ಮಾತಿನಂತೆ ನಾವು ಕೆಲಸ ಮಾಡ್ತಾ ಇದ್ದೇವೆ. ಸಿಎಂ, ಸಚಿವರು ಕೆಲಸದಲ್ಲಿ ಬ್ಯುಸಿ ಇದ್ದೇವೆ. ಬೇರೆ ಯಾವುದು ನಮ್ಮ ಹತ್ರ ಬರೋದಿಲ್ಲ ಎಂದು ತಿಳಿಸಿದ್ದಾರೆ. 

ಲಿಂಗಾಯತ ಸಿಎಂ ವಿಚಾರವಾಗಿ ಶಾಮನೂರಿಗೆ ಸಿಎಂ ತಿರುಗೇಟು!

ಜೆಡಿಎಸ್‌ ನಾಯಕ ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಜಿ ಪರಮೇಶ್ವರ್, ನನ್ನ ಗಮನಕ್ಕೆ ಬರದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸಿಎಂ ಇಬ್ರಾಹಿಂ ಅವರು ಹೇಳಿದ್ದಾರೆ. ನನಗೆ ಬೇಸರ ಇದೆ. ಅ. 16 ರಂದು ಸಭೆ ಮಾಡ್ತೇನೆ, ತೀರ್ಮಾನ ಮಾಡ್ತೇನೆ ಎಂದು ಹೇಳಿದ್ರು. ನೋಡೋಣ ಕಾಯೋಣ. ಕಾಂಗ್ರೆಸ್ ಪಕ್ಷದ  ಸಿದ್ಧಾಂತ ಒಪ್ಪಿ ಬರ್ತೇನೆ, ಮೊದಲಿನಂತೆ ಕಾಂಗ್ರೆಸ್‌ನಲ್ಲಿ ಕೆಲಸ ಮಾಡ್ತೇನೆ ಎಂದರೆ ಹೈಕಮಾಂಡ್ ಒಂದು ಅವಕಾಶ ಕೊಡಬಹುದು. ನಾವು ಇದಕ್ಕೆ ವಿರೋಧ ಮಾಡುವುದಿಲ್ಲ, ಕಾಂಗ್ರೆಸ್ ಸಿದ್ಧಾಂತ ಒಪ್ಪಬೇಕು ಅಷ್ಟೇ ಎಂದು ಹೇಳಿದ್ದಾರೆ. 

Follow Us:
Download App:
  • android
  • ios