'ಜೊತೆಜೊತೆಯಲಿ' ನಟ ಅನಿರುದ್ಧ ಹಾಗೂ ನಟಿ ಭಾವನಾ ಫ್ಲೆಮಿಂಗೂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಿತ್ರರಂಗದಲ್ಲಿ ಮತ್ತೊಂದು ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು. ಅದು ಫ್ಲೆಮಿಂಗೋ ಪ್ರಶಸ್ತಿ. ಇಲ್ಲಿ ಅನಿರುದ್ಧ ಅತ್ಯುತ್ತಮ ನಟ, ಭಾವನಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬರಗೂರು 'ಅಮೃತಮತಿ'ಗೆ ಅಂತಾರಾಷ್ಟ್ರೀಯ ಪ್ರಶಸ್ತಿ! 

ಯುವನಟ ಧವನ್‌ ಸೋಹಾ ಸಾರಥ್ಯದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ಫ್ಲೆಮಿಂಗೋ ಚಲನಚಿತ್ರ ತರಬೇತಿ ಸಂಸ್ಥೆ ಈಗ ಅಗಾಧವಾಗಿ ಬೆಳೆದುನಿಂತಿದೆ. ಈ ಸಂಸ್ಥೆಯ ಮೂಲಕ ಕಲಿತ ನೂರಾರು ವಿದ್ಯಾರ್ಥಿಗಳು ಚಿತ್ರರಂಗ, ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. 

ತಮ್ಮಲ್ಲಿ ತರಬೇತಿ ಪಡೆದವರಿಗೆ ಕಿರುತೆರೆ, ಹಿರಿತೆರೆಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿರುವ ಈ ಸಂಸ್ಥೆ ಸ್ಯಾಂಡಲ್‌ವುಡ್‌ ಸ್ಟಾರ್‌ನೈಟ್ಸ್‌, ಮಿಸ್‌ ಯುವರಾಣಿ ಸ್ಪರ್ಧೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಅದರಂತೆ ಈ ಸಲವೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಗುರ್ತಿಸಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಗೌರವಕ್ಕೆ ಅನಿರುದ್‌್ಧ ಹಾಗೂ ಭಾವನಾ ಪಾತ್ರರಾಗಿದ್ದಾರೆ.