ಬೆಂಗಳೂರು(ಜು. 27)  ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಹೇಳಿ ಶಾಕಿಂಗ್ ನ್ಯೂಸ್ ನೀಡಿದ್ದ ಬಿಗ್ ಬಾಸ್ ಜಯಶ್ರೀ ನಂತರ ಸ್ನೇಹಿತರ ಕಮೆಂಟ್ ಗಳು, ಭರವಸೆ ಮಾತಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಆದರೆ ಮತ್ತೆ ಫೇಸ್ ಬುಕ್ ಲೈವ್ ಬಂದು ನನಗೆ ಬದುಕಲು ಇಷ್ಟವಿಲ್ಲ ಸಾಯುತ್ತಿದ್ದೇನೆ ಎಂದು ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.

ನಾನು ಕಿಚ್ಚ ಸುದೀಪ್ ಜತೆ ಮಾತನಾಡಬೇಕು ಎಂದು ಹೇಳಿಕೊಂಡಿದ್ದರು. ಅದೆಲ್ಲ ಆದ ಮೇಲೆ ವಾತಾವರಣ ಈಗ ತಿಳಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಅಪ್ ಲೋಡ್ ಮಾಡಿರುವ ಜಯಶ್ರೀ ಹೊಸ ಬೆಳಗಿಗೆ ಮೊದಲಿನ ಹೆಜ್ಜೆ ಎಂದು ಕಮೆಂಟ್ ಬರೆದು ಪೋಟೋ ಒಂದನ್ನು ಹಾಕಿದ್ದಾರೆ.

ಈ ಒಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿ ಮಾಡಬೇಕು ಎಂದಿದ್ದ ಜಯಶ್ರೀ

ಕೇಶ ಮಂಡನ ಮಾಡಿಸಿಕೊಂಡಿರುವ ಪೋಟೋ ಅಪ್ ಲೋಡ್ ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳ ನೆರವಿಗಾಗಿ ಕೂದಲನ್ನು ದಾನ ಮಾಡಿದ್ದಾರೆಂತೆ. ಏನೇ ಇರಲಿ ಕೆಟ್ಟ ನಿರ್ಧಾರದ ಕಡೆ ಹೊರಟಿದ್ದ ಜಯಶ್ರೀ ಹೊಸ ಬೆಳಗನ್ನು ನೋಡಿದ್ದು ಒಳ್ಳೆಯ ಸಂಗತಿ.