Asianet Suvarna News Asianet Suvarna News

ಹೊಸಬರ ಚಿತ್ರಕ್ಕೆ ಮೊದಲ ಆದ್ಯತೆ, ತಾಜಾತನದಿಂದ ಕೂಡಿರುವ ಸ್ಕ್ರಿಪ್ಟ್‌ ನನಗೆ ಬಹಳ ಇಷ್ಟ: ಸುಮನ್‌ ರಂಗನಾಥ್‌

ಯಾವತ್ತೂ ಹೊಸಬರ ಸಿನಿಮಾಕ್ಕೆ ಆದ್ಯತೆ ನೀಡುತ್ತೇನೆ. ಹೊಸಬರ ಕೆಲಸ ಮಾಡಲ್ಲ ಅನ್ನೋದೇ ಇಲ್ಲ. ತಾಜಾತನದಿಂದ ಕೂಡಿರುವ ಸ್ಕ್ರಿಪ್ಟ್‌ ನನಗೆ ಬಹಳ ಇಷ್ಟ. ಈ ಸಿನಿಮಾವೂ ಅದರ ಹೊಸತನದಿಂದ, ಕ್ರಿಯೇಟಿವಿಯಿಂದ ಇಷ್ಟವಾಯಿತು. 
 

First Preference For Fresher Film Says Actress Suman Ranganathan gvd
Author
First Published Aug 31, 2024, 11:40 AM IST | Last Updated Aug 31, 2024, 11:40 AM IST

ಯಾವತ್ತೂ ಹೊಸಬರ ಸಿನಿಮಾಕ್ಕೆ ಆದ್ಯತೆ ನೀಡುತ್ತೇನೆ. ಹೊಸಬರ ಕೆಲಸ ಮಾಡಲ್ಲ ಅನ್ನೋದೇ ಇಲ್ಲ. ತಾಜಾತನದಿಂದ ಕೂಡಿರುವ ಸ್ಕ್ರಿಪ್ಟ್‌ ನನಗೆ ಬಹಳ ಇಷ್ಟ. ಈ ಸಿನಿಮಾವೂ ಅದರ ಹೊಸತನದಿಂದ, ಕ್ರಿಯೇಟಿವಿಯಿಂದ ಇಷ್ಟವಾಯಿತು. ಇದರಲ್ಲಿ ಎರಡು ಶೇಡ್‌ಗಳಲ್ಲಿ ನಟಿಸಿದ್ದೇನೆ, ನಿರ್ದೇಶಕರು ಹೇಳಿದ ತಕ್ಷಣವೇ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ‌. 

ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಚಿರ ಯುವತಿ ಸುಮನ್‌ ರಂಗನಾಥ್‌. ಅವರ ನಟನೆಯ ‘ತದ್ವಿರುದ್ಧ’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಈ ಸಂದರ್ಭ ನಿರ್ದೇಶಕ ವಿನೋದ್ ಜೆ ರಾಜ್ ಬಾಯ್ತಪ್ಪಿ, ‘ತದ್ವಿರುದ್ಧ ಸಿನಿಮಾದ ಪಾತ್ರಕ್ಕೆ ಸುಮನ್‌ ಅವರನ್ನು ಸಂಪರ್ಕಿಸಿದಾಗ ಅವರು ಹೊಸಬರ ಸಿನಿಮಾದಲ್ಲಿ ನಟಿಸೋದಿಲ್ಲ ಎಂದರು. ಆಮೇಲೆ ಕಥೆ ಕೇಳಿ ಇಷ್ಟಪಟ್ಟರು’ ಎಂದಿದ್ದೇ ಸುಮನ್‌ ಸ್ಪಷ್ಟೀಕರಣದ ರೀತಿ ಮೇಲಿನ ಮಾತನ್ನು ಹೇಳಲು ಕಾರಣವಾಯಿತು.

ಹೊಸ ಚಿಗುರು ಹಳೇ ಬೇರು ಸಮ್ಮಿಶ್ರಣವೇ ಈ ಚಿತ್ರ. ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ. ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಈ ವಿಭಿನ್ನ ಕಥೆಯ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಿದೆ'' ಎಂದರು ಸುಚೇಂದ್ರ ಪ್ರಸಾದ್. ವಿನೋದ್ ಜೆ ರಾಜ್, ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ‌. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವೀಕರಿಸಿಲ್ಲ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವೀಕರಿಸಿಲ್ಲ. 

ಚಾಪ್ಲಿನ್ ಶೈಲಿಯಲ್ಲಿರುವ ದಢೂತಿ ಪೊಲೀಸ್ ಕಾನ್‌ಸ್ಟೇಬಲ್ ಕತೆ 'ಲಾಫಿಂಗ್ ಬುದ್ಧ'

ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ‌. ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದಾರೆ‌‌. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್' ಎಂದರು ನಿರ್ದೇಶಕ ವಿನೋದ್‌ ಜೆ ರಾಜ್. ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿದ್ದಾರೆ. ಕೆ ಆರ್‌ ರವಿಚಂದ್ರ ನಿರ್ಮಾಪಕರು. ಕಲಾವಿದರಾದ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಸುದ್ದಿಗೋಷ್ಠಿಯಲ್ಲಿದ್ದರು.

Latest Videos
Follow Us:
Download App:
  • android
  • ios