ಪೊಲೀಸರ ವಿರುದ್ದ ಆಕ್ರೋಶ: ಡಾ.ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಲು ಒತ್ತಾಯ
ವಿಷ್ಣುವರ್ಧನ್ ಉದ್ಯಾನದಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಲು ಒತ್ತಾಯಿಸುತ್ತಿರುವ ಅಭಿಮಾನಿಗಳು. ಪೊಲೀಸರ ವಿರುದ್ಧ ಆಕ್ರೋಶ...
ಡಾ. ವಿಷ್ಣುವರ್ಧನ್ 71ನೇ ಜನ್ಮದಿನದ ಪ್ರಯುಕ್ತ ವಿಷ್ಣುವರ್ಧನ್ ಉದ್ಯಾನದಲ್ಲಿ ರಾತ್ರೋರಾತ್ರಿ ಸ್ಥಾಪಿಸಿದ ಪ್ರತಿಮೆಯನ್ನು ತೆರವುಗೊಳಿಸಿದ ಕಾರಣ ಪೊಲೀಸರ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರು ನಗರದ ಕೋಟಿ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಸೇರಿರುವ ಉದ್ಯಾನವನದಲ್ಲಿ ಯಾರ ಅನುಮತಿಯೂ ಪಡೆಯದೆ ಪ್ರತಿಮೆ ಸ್ಥಾಪಿಸಿದ ಕಾರಣ ಅನಧಿಕೃತ ಪ್ರತಿಮೆ ಎಂದು ಪೊಲೀಸರು ತೆರವುಗೊಳಿಸಿದ್ದಾರೆ. ಸುಮಾರು 10-11 ವರ್ಷಗಳಿಂದ ಈ ಉದ್ಯಾನವನದಲ್ಲಿ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತಿ ವಿಷ್ಣುವರ್ಧನ್ ಜೀವನದ ಬಗ್ಗೆ ಯಾರಿಗೂ ತಿಳಿಯದ ಘಟನೆಗಳಿವು!ಉದ್ಯಾನವನದಲ್ಲಿ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಿ ಬೆಳಗ್ಗೆ ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದರು. ಆದರೆ ಸ್ಥಳಕ್ಕೆ ಪಾಲಿಗೆ ಅಧಿಕಾರಿಗಳ ನೇತೃತ್ವದಲ್ಲಿ ಅಭಯ ತಂಡ ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲ ಎಂದು ಪ್ರತಿಮೆಯ ಬಿಡಿಭಾಗ ಬಿಚ್ಚಿ ಆಟೋದಲ್ಲಿ ತುಂಬಿಕೊಂಡು ಹೊರಟರು. ಅಭಿಮಾನಿಗಳು ಕಾಲಿಗೆ ಬಿದ್ದು ಮನವಿ ಮಾಡಿದರೂ ಯಾವುದಕ್ಕೂ ಸ್ಪಂದಿಸದೇ ತೆರವುಗೊಳಿಸಿದ್ದರು.
ಅಧಿಕಾರಿಗಳು ಹೀಗೆ ಮಾಡಿ ವಿಷ್ಣುವರ್ಧನ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಕಿಡಿಕಾರುವ ಮೂಲಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.