ಸ್ಯಾಂಡಲ್‌ವುಡ್‌ ಹಾಟ್‌ ನಟಿ ಹಾಗೂ ಯಂಗ್ ಮಮ್ಮಿ ಎಂದೇ ಗುರುತಿಸಿಕೊಂಡಿರುವ ಅನಿತಾ ಭಟ್‌ ಲಾಕ್‌ಡೌನ್‌ ಸಮಯವನ್ನು ಕುಟುಂಬದವರ ಜೊತೆ ಪವರ್‌ ಫುಲ್ ಆಗಿ ಕಳೆಯುತ್ತಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಲೈವ್‌ ಚಾಟ್ ಮಾಡುತ್ತಿರುವ ಸಿನಿಮಾ ತಾರೆಯರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.....

ಅನಿತಾ ಭಟ್ ನಂಬರ್‌:

ಖಾಸಗಿ ವೆಬ್‌ಸ್ಟೈಟ್ ಸಂದರ್ಶನವೊಂದರಲ್ಲಿ ಲೈವ್‌ ಚಾಟ್‌ ಮಾಡುತ್ತಿದ್ದ ಅನಿತಾ ಭಟ್‌ನನ್ನು ಅಭಿಮಾನಿಯೊಬ್ಬ ಮೊಬೈಲ್‌ ನಂಬರ್‌ ಕೇಳಿದ್ದಾರೆ. 'ನಿಮ್ಮ ಮೊಬೈಲ್ ನಂಬರ್ ಕೊಡಿ' ಎಂದು ಚಾಟ್‌ನಲ್ಲಿ ಕಾಮೆಂಟ್‌ ಮಾಡಿದ್ದಾನೆ. ಕಾಮೆಂಟ್‌ ಗಮನಿಸಿದ ಅನಿತಾ ಭಟ್‌ 'ಲೈವ್‌ ಕೊನೆಯಲ್ಲಿ ನಂಬರ್‌ ಕೊಡ್ತೀನಿ' ಎಂದು ಹೇಳಿದ್ದಾರೆ. 

ವರ್ಷಗಳ ನಂತರ ಅಡುಗೆ ಮನೆಗೆ ಕಾಲಿಟ್ಟ ನಟಿ; ಬಾಲ್ಕನಿಯಲ್ಲಿ ಕೂರೋದೇ ಹಾಬಿಯಂತೆ!

ನೋ ನಂಬರ್‌:

ಅಭಿಮಾನಿಗಳು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ ಕೆಲ ಕಾಲ ಮಾತನಾಡುತ್ತಿದ್ದ ಅನಿತಾ ಭಟ್‌ ಲೈವ್‌ ಚಾಟ್‌ ಮುಗಿದರೂ ಅಭಿಮಾನಿಗೆ ವಾಟ್ಸ್‌ಅಪ್‌ ಮೊಬೈಲ್‌ ನಂಬರ್‌ ಕೊಟ್ಟಿಲ್ಲ.
ಮೇಡಂ ನಂಬರ್ ಕೊಟ್ಟಿಲ್ಲ ಎಂದು ಹೇಳಿ ಅಭಿಮಾನಿಗಳು ನಿರಾಸೆ ವ್ಯಕ್ತ ಪಡಿಸಿದ್ದಾರೆ.

ಲಾಕ್‌ಡೌನ್‌ನಿಂದ ಕುಕ್ಕಿಂಗ್‌:

ಲಾಕ್‌ಡೌನ್‌ನಲ್ಲಿ ಏನೆಲ್ಲಾ ಮಾಡುತ್ತೇನೆ ಎಂದು ಅನಿತಾ ಭಟ್‌ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಅಚ್ಚರಿ ಏನೆಂದರೆ ಲಾಕ್‌ಡೌನ್‌ನಿಂದಾಗಿ ಅನಿತಾ ಅಡುಗೆ ಮನೆಗೆ ಕಾಲಿಟ್ಟಿದ್ದಾರೆ ಹಾಗೂ ಫ್ರಿ ಇದ್ದಾಗ  ಬಾಲ್ಕಾನಿಯಲ್ಲಿ ಪುಸ್ತಕ ಓದುತ್ತಾ  ಕಾಲ ಕಳೆಯುತ್ತಿದ್ದಾರೆ.

'ಬೆಂಗಳೂರು 69' ಚಿತ್ರದಲ್ಲಿ ಕಲರ್‌ಫುಲ್ ಹಾಡು!

ಫಿಟ್ನೆಸ್‌ ಫ್ರೀಕ್‌ ಅನಿತಾ:

ಸೈಕೋ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿತಾ ಭಟ್‌ ಸಿಕ್ಕಾಪಟ್ಟೆ ಫಿಟ್ನೆಸ್‌ ಫ್ರೀಕ್‌. 'ಸೋಹಮ್‌ ಅಪರ್ಣಾ ಯೋಗ ಆಂಡ್‌ ವೆಲ್‌ನೆಸ್‌' ಹೆಸರಿನಲ್ಲಿ ಒಂದು  ಹೆಲ್ತ್‌ ಕೇರ್‌ ಸೆಂಟರ್‌ ಆರಂಭಿಸಿದ್ದಾರೆ. ಬೆಂಗಳೂರಿನ ಎಚ್‌ ಆರ್‌ ಬಿ ಆರ್ ಲೇಔಟ್‌ನಲ್ಲಿರುವ ಈ ಸೆಂಟರ್‌ ಈ ಯೋಗ ಕೇಂದ್ರ ಶುರು ಮಾಡಿಕೊಂಡಿದೆ.

"