Asianet Suvarna News Asianet Suvarna News

ಖ್ಯಾತ ಗಾಯಕಿ ಇಷ್ಟು ದಿನ ಏನ್ಮಾಡ್ತಿದ್ರು, ಅವಕಾಶ ಇಲ್ವಾ? ಸಿನಿಮಾರಂಗದಿಂದ ದೂರಾದ ಬಗ್ಗೆ ಚೈತ್ರಾ ಬಹಿರಂಗ

ಖ್ಯಾತ ಗಾಯಕಿ ಇಷ್ಟು ದಿನ ಏನ್ಮಾಡ್ತಿದ್ರು, ಎಲ್ಲಿದ್ದರು, ಅವಕಾಶ ಇಲ್ವಾ? ಸಿನಿಮಾರಂಗದಿಂದ ದೂರಾದ ಬಗ್ಗೆ ಸ್ವತಃ ಚೈತ್ರಾ ಅವರೇ ಬಹಿರಂಗ ಪಡಿಸಿದ್ದಾರೆ.  

famous Singer Chaitra now heroine for Maavu bevu Kannada film sgk
Author
First Published Apr 28, 2023, 3:19 PM IST

ಕನ್ನಡದ ಖ್ಯಾತ ಗಾಯಕಿಯರಲ್ಲಿ ಚೈತ್ರಾ ಹೆಚ್ ಜಿ ಕೂಡ ಒಬ್ಬರು. ತನ್ನ ವಿನೂತನ ಧ್ವನಿಯ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕಿ ಚೈತ್ರಾ. ಸ್ಯಾಂಡಲ್‌ವುಡ್‌ನ ಅನೇಕ ಸಿನಿಮಾಗಳ ಗೀತೆಗೆಳಿಗೆ ಚೈತ್ರಾ ಧ್ವನಿ ನೀಡಿದ್ದಾರೆ. ಹುಡುಗ ಹುಡುಗ, ಬಿಡು ಬಿಡು ಬಿಡು ಕದ್ದು ನೋಡೋದನ್ನ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಚೈತ್ರಾ ಧ್ವನಿ ನೀಡಿದ್ದಾರೆ. ಚೈತ್ರಾ 1994ರಲ್ಲಿ ಹಿನ್ನಲೆ ಗಾಯಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಚೈತ್ರಾ 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 'ಬೇಡ ಕೃಷ್ಣ ರಂಗಿನಾಟ' ಸಿನಿಮಾ ಮೂಲಕ ಹಿನ್ನಲೆ ಗಾಯಕಿಯಾಗಿ ಚೈತ್ರಾ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟರು. 

ವೃತ್ತಿ ಜೀವನದಲ್ಲಿ 24 ವರ್ಷಗಳನ್ನು ಚೈತ್ರಾ ಪೂರೈಸಿದ್ದಾರೆ. ಬಹುಬೇಡಿಕೆಯ ಗಾಯಕಿಯಾಗಿದ್ದ ಚೈತ್ರಾ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ಅಷ್ಟೆಯಲ್ಲ ಹಾಡುಗಳನ್ನು ಹಾಡಿಲ್ಲ. ಹಾಗಾಗಿ ಚೈತ್ರಾ ಎಲ್ಲಿ ಹೋಗಿದ್ರು, ಏನ್ಮಾಡುತ್ತಿದ್ದರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದ್ಭುತ ಧ್ವನಿ ಹೊಂದಿರುವ ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗಿರುವ ಚೈತ್ರಾ ಅವರಿಗೆ ಅವಕಾಶಗಳೇ ಸಿಕ್ತಿಲ್ವಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಕಳೆದ ಕೆಲವು ವರ್ಷಗಳಿಂದ ಚೈತ್ರಾ ಎಲ್ಲಿ ಗೆ ಹೋಗಿದ್ದರು, ಏನ್ ಮಾಡುತ್ತಿದ್ದರು ಎನ್ನುವ ಅನೇಕ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋಗೆ ನೀಡಿದ ಸಂದರ್ಶನದಲ್ಲಿ ಚೈತ್ರಾ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಗಾಯಕಿಯಾಗಿದ್ದ ಚೈತ್ರಾ ನಟಿಯಾಗಿ ಯಾಕೆ ಕಾಣಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. 
 
ಜೀವನದಲ್ಲಿ ಯಾವತ್ತೂ ಹಿನ್ನಲೆ ಗಾಯಕಿ ಆಗಬೇಕೆನ್ನುವ ಕನಸು ಕಂಡಿರದ ಚೈತ್ರಾ ಖ್ಯಾತ ಹಿನ್ನಲೆ ಗಾಯಕಿಯಾಗಿ ಹೊರಹೊಮ್ಮಿದರು. ಚೈತ್ರಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದರು. ಈ ಬಗ್ಗೆ ಮಾತನಾಡಿರುವ ಚೈತ್ರಾ, 'ಜೀವನದಲ್ಲಿ ತಿರುವು ಬಂತು ಆಗ ನಾನು ಹಿನ್ನಲೆ ಗಾಯಕಿಯಾಗಿ ಆಯ್ಕೆ ಮಾಡಿಕೊಂಡೆ. ಈಗ ಮತ್ತೊಂದು ತಿರುವು ಬಂತು. ನಟಿಯಾಗಿ ಹೆಜ್ಜೆ ಇಟ್ಟಿದ್ದೀನಿ' ಎಂದು ಹೇಳಿದ್ದಾರೆ. 

ಅಭಿನಯ ತರಂಗದಲ್ಲಿ ನಟನೆ ಕಲಿತ ಗಾಯಕಿ 

ಅಭಿನಯ ತರಂಗದಲ್ಲಿ ನಾನು ಥಿಯೇಟರ್ ಮತ್ತು ಆಕ್ಟಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದೀನಿ ಎಂದು ಚೈತ್ರಾ ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಸಿನಿಮಾರಂಗದಲ್ಲೂ ಇದ್ದರೂ ಚೈತ್ರಾ ಈಗ ನಟನೆ ಕಲಿತು ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಬಳಿಕ ನಟನೆಗೆ ಅವಕಾಶ ಸಿಗುತ್ತೆ ಅಂತ ಅಂದುಕೊಂಡಿರಲ್ಲ. ಆದರೆ ಸಿಕ್ತು, ಸಿಕ್ಕ ಅವಕಾಶವನ್ನು ಬಾಚಿಕೊಂಡೆ. ಮಾವು ಬೇವು ಸಿನಿಮಾದಲ್ಲಿ ನಟಿಸಿದ್ದೀನಿ.

ಪುಟ್ಟ ಗಾಯಕಿ ದಿಯಾ ಹೆಗ್ಡೆ ಆಟೋಗ್ರಾಫ್ ಪಡೆದ ಸ್ಟಾರ್ ನಟ ರಮೇಶ್ ಅರವಿಂದ್

ಸಿನಿಮಾ ಹಾಡು ಕಡಿಮೆ ಮಾಡಿದ್ದೀನಿ 

ಎಲ್ಲೂ ಕಾಣಿಸಿಕೊಂಡಿಲ್ಲ ಎಂದ ಮಾತ್ರಕ್ಕೆ ಕೆಲಸ ಮಾಡುತ್ತಿರಲಿಲ್ಲ ಅಂತಲ್ಲ ಎನ್ನುವ ಚೈತ್ರಾ ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಸಿನಿಮಾ ಕೆಲಸಗಳನ್ನು ಕಡಿಮೆ ಮಾಡಿದೆ ಏಕೆಂದರೆ ಚ್ಯೂಸಿ ಆದೆ ಹಾಗಾಗೆ. 1000 ಹಾಡುಗಳನ್ನು ಪೂರೈಸಿದ್ದೀನಿ. ತುರ್ತು ನಿರ್ಗಮನ ಸಿನಿಮಾಗೆ ಹಾಡಿದ ಹಾಡು 1000ನೇ ಹಾಡು. ಸಿನಿಮಾ ಕೆಲಸ ಮಾಡುತ್ತೇನೆ, ಡಬ್ಬಿಂಗ್ ಮಾಡುತ್ತಿದ್ದೀನಿ, ಜಾಹೀರಾತುಗಳಿಗೆ ಹಾಡುತ್ತಿದ್ದೀನಿ. ಆದರೆ ಸಿನಿಮಾ ಹಾಡುಗಳಿಗೆ ನಾನು ಸ್ವಲ್ಪ ಚ್ಯೂಸಿಯಾಗಿದ್ದೀನಿ. 24ನೇ ವರ್ಷ ಗಾಯಕಿಯಾಗಿ. ಹಾಗಾಗಿ ನನಗೂ ಕೂಡ ನಿರೀಕ್ಷೆ ಇದೆ, ಹೀಗೆ ಇರಬೇಕು ಅಂತ ಹಾಗಾಗಿ ಸ್ವಲ್ಪ ಕಡಿಮೆ ಮಾಡಿದೆ. ತೃಪ್ತಿ ಕೊಡದೆ ಇರುವ ಕೆಲಸ ಮಾಡಲು ಇಷ್ಟವಾಗಿಲ್ಲ. ಹಾಗಾಗಿ ಟಿವಿಯಾಗಿ ಕಾಣಿಸಿಕೊಂಡಿಲ್ಲ. ಎಲ್ಲರೂ ಕಳೆದುಹೋಗಿದ್ದಾರೆ ಅಂತ ಹೇಳುತ್ತಿದ್ದರು' ಎಂದು ಹೇಳಿದ್ದಾರೆ. ಹಾಡುಗಳು ಕಡಿಮೆ ಆಗಿವೆ. ಆದರೆ ಕ್ವಾಲಿಟಿ ಹಾಗೆ ಇದೆ ಎಂದು ಚೈತ್ರಾ ಹೇಳಿದ್ದಾರೆ. 

ಮಾವು ಬೇವು ಸಿನಿಮಾ ಬಗ್ಗೆ  

ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದಾರೆ. 1982ನಲ್ಲಿ ರಿಲೀಸ್ ಆಗಿದ್ದ ಆಲ್ಬಂ ಮಾವು ಬೇವು. ಇದರಲ್ಲಿ 10 ಹಾಡುಗಳಿವೆ. ಎಲ್ಲಾ ಹಾಡುಗಳನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಈ ಹಾಡುಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಈ ಹಾಡುಗಳ ಸುತ್ತ ಕಥೆ ಹೆಣೆದು ಈ ಸಿನಿಮಾ ಮಾಡಲಾಗಿದೆ. 42 ವರ್ಷಗಳ ಹಿಂದಿನ ಹಾಡನ್ನು ಹಾಗೆ ಬಳಸಿಕೊಳ್ಳಲಾಗಿದೆ ಈ ಸಿನಿಮಾದಲ್ಲಿ.ಈ ಹಾಡುಗಳನ್ನು ಕೇಳಿದಾಗ 42 ವರ್ಷಗಳ ಹಿಂದೆ ಹೋದಾಗೆ ಆಗುತ್ತೆ ಎನ್ನುತ್ತಾರೆ ಚೈತ್ರಾ. ಎಸ್ ಪಿ ಬಿ ಹಾಡಿರುವ ಹಾಡುಗಳಿಗೆ ನಟಿಸುವ ಅವಕಾಶ ಬರುತ್ತೆ ಅಂತ ಒಂದುಕೊಂಡಿರಲ್ಲ. ತುಂಬಾ ಖುಷಿಯಾಗೆ ಎಂದು ಚೈತ್ರಾ ಹೇಳಿದ್ದಾರೆ. 

Follow Us:
Download App:
  • android
  • ios