ನಟಿ ಹರಿಪ್ರಿಯಾ ಮಗುವಿನ ಫೋಟೋ ವೈರಲ್? ಅವಳಿ-ಜವಳಿ ಅಂತಿದ್ದವರಿಗೆ ಇಲ್ಲಿದೆ ಕ್ಲಾರಿಟಿ

ವೈರಲ್ ಆಯ್ತು ಅಂತಿದ್ದಾರೆ ಹರಿಪ್ರಿಯಾ ವಸಿಷ್ಠ ಸಿಂಹ ಮಗುವಿನ ಫೋಟೋ. ಫೇಕ್ ನ್ಯೂಸ್ ಬಗ್ಗೆ ಗರಂ ಆಗಿದ್ದಾರೆ ಅಭಿಮಾನಿಗಳು....

Fake news about actress haripriya and Vasishta simha first child

ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಮಾಲ್ಡೀವ್ಸ್‌ ಟ್ರೀಪ್‌ ಮೂಲಕ ಪೋಷಕರಾಗುತ್ತಿರುವ ವಿಚಾರ ಅನೌನ್ಸ್ ಮಾಡಿದ ಈ ಜೋಡಿ ವಿಶೇಷ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಹಿಂದು ಸಂಪ್ರದಾಯದ ಪ್ರಕಾರ ಸೀಮಂತ ಕೂಡ ಮಾಡಿದ್ದರು. ಸೀಮಂತ ನಡೆದು ವಾರ ಕಳೆದಿಲ್ಲ ಆಗಲೇ ಮಗುವಿಗೆ ಜನ್ಮ ನೀಡಿದ್ದಾರೆ, ಅವಳಿ ಮಕ್ಕಳನ್ನು ಬರ ಮಾಡಿಕೊಂಡಿದ್ದಾರೆ, ಮಗುವಿನ ಫೋಟೋ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಕನ್ನಡ ಫೇಸ್‌ಬುಕ್ ಅಕೌಂಟ್‌ಗಳಲ್ಲಿ 'ಬೆಳ್ಳಂಬೆಳಗ್ಗೆ ಕನ್ನಡಿಗರಿಗೆ ಸಿಹಿ ಸುದ್ದಿ. ಮುದ್ದಾದ ಮಗುವಿಗೆ ಜನ್ಮ ನೀಡಿದ ನಟಿ ಹರಿಪ್ರಿಯಾ' ಎಂದು ಪೋಸ್ಟ್ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ವಸಿಷ್ಠ ಮತ್ತು ಹರಿಪ್ರಿಯಾ ಪ್ರತಿಕ್ರಿಯೆ ನೀಡಿಲ್ಲ. ಪ್ರಿಯಾ ಮತ್ತು ವಸಿಷ್ಠ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಯಾವುದೇ ಪೋಸ್ಟ್‌ ಕೂಡ ಹಾಕಿಲ್ಲ. ಆದರೆ ಖಾಸಗಿ ವೆಬ್‌ ಸೈಟ್ ವರದಿ ಮಾಡಿರುವ ಪ್ರಕಾರ ಹರಿಪ್ರಿಯಾ ತಾಯಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹರಿಪ್ರಿಯಾಗೆ ಇನ್ನೂ ಹೆರಿಗೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಮಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್; ಫೋಟೋ ವೈರಲ್

ಹರಿಪ್ರಿಯಾ ಮತ್ತು ಅವಳ ಮಕ್ಕಳಿರುವ ಫೋಟೋ, ಮೇಘನಾ ರಾಜ್ ಪುತ್ರ ರಾಯನ್ ರಾಜ್ ಆಗಷ್ಟೇ ಹುಟ್ಟಿರುವ ಫೋಟೋವನ್ನು ಹರಿಪ್ರಿಯಾ ಫೋಟೋ ಪಕ್ಕದಲ್ಲಿ ಇಟ್ಟು ಸಿಂಹಪ್ರಿಯಾ ಮಗು ಎಂದು ವೈರಲ್ ಮಾಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವಿದೇಶದ ಅವಳಿ ಮಕ್ಕಳ ಫೋಟೋ ಹಾಕಿ ಇವರ ಮಕ್ಕಳು ಎಂದು ಪೋಸ್ಟ್ ಮಾಡಿದ್ದಾರೆ. ಸಿನಿಮಾ, ಮದುವೆ, ಪ್ರೆಗ್ನೆನ್ಸಿ ....ಯಾವುದೇ ಸಿಹಿ ವಿಚಾರ ಇರಲಿ ಸಿಂಹಪ್ರಿಯಾ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಹೀಗಾಗಿ ಇದು ಫೇಕ್ ಅನ್ನೋ ಅಭಿಮಾನಿಗಳಿಗೂ ಗೊತ್ತಾಗಿಬಿಟ್ಟಿದೆ. ಹರಿಪ್ರಿಯಾ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದಾಗಲೇ AI ಟೆಕ್ನಾಲಜಿ ಮೂಲಕ ಮಗುವಿನ ಫೋಟೋ ಕ್ರಿಯೇಟ್ ಮಾಡಿ ವೈರಲ್ ಮಾಡಿದ ಪುಂಡರು ಇದ್ದಾರೆ. ಹೀಗಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಹೊರ ಪಡಿಸಿ ಮಗುವಿನ ಬಗ್ಗೆ ಎಲ್ಲೇ ಏನೇ ಪೋಸ್ಟ್ ಆಗಿದ್ದರು ಅದು ಫೇಕ್. 

ನಟ ಶರಣ್ ಮಗಳಿಗೆ ಈ ಬಿಗ್ ಬಾಸ್ ಸ್ಪರ್ಧಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ; ಮನೆಯಲ್ಲಿ ಟಿವಿನೇ ಬದಲಾಯಿಸಿ ಬಿಟ್ಟಿದ್ದಾರೆ

Latest Videos
Follow Us:
Download App:
  • android
  • ios