Asianet Suvarna News Asianet Suvarna News

ಬ್ರೇಕಪ್ ಆದ್ಮೇಲೆ ಯಾರನ್ನೂ ನಂಬಲ್ಲ, ಮತ್ತೆ ಪ್ರೀತಿಸಲು ಅವಸರವಿಲ್ಲ: Erica Fernandes

ಕೆಲಸ ಕೆಲಸ ಅಂತ ಸದಾ ಬ್ಯುಸಿಯಾಗಿರುವ ಎರಿಕಾ ಫೆರ್ನಾಂಡಿಸ್ ಪ್ರೀತಿ ಗೀತಿ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. 
 

Erica Fernandes talks about south films and relationship vcs
Author
First Published Sep 23, 2022, 3:56 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಜೋಡಿಯಾಗಿ 'ನಿನ್ನಿಂದಲೆ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮುಂಬೈ ಹುಡುಗಿ ಇದೀಗ ಬಾಲಿವುಡ್ ಬೇಡಿಕೆಯ ನಟಿ ಎರಿಕಾ. ಹಿಂದಿ ಸಿನಿಮಾ ಮತ್ತು ಸೀರಿಯಲ್‌ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸೌತ್ ಸಿನಿಮಾಗಳಿಗೆ ಆಡಿಷನ್ ನೀಡುತ್ತಲೇ ಇದ್ದಾರೆ. ಈ ಬಿಡುವಿನಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್‌ಗಳು ಮತ್ತು ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಕುಚ್ ರಂಗ್ ಪ್ಯಾರ್ ಕಿ ಹೈಸಿ ಬೀ ಧಾರಾವಾಹಿ ನಂತರ ಎರಿಕಾ ಫೆರ್ನಾಂಡಿಸ್ ಯಾವ ಪ್ರಾಜೆಕ್ಟ್‌ನೂ ಒಪ್ಪಿಕೊಂಡಿರಲಿಲ್ಲ. ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಕ್ರಿಯೇಟಿವ್ ವಿಡಿಯೋ ಮಾಡುತ್ತ ಬ್ಯುಸಿಯಾಗಿದ್ದಾರೆ. ಸೌತ್ ಸಿನಿಮಾ ರಂಗದಲ್ಲಿ ಜರ್ನಿ ಆರಂಭಿಸಿದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 'ನನ್ನ ಕೊನೆಯ ಸೌತ್ ಸಿನಿಮಾ 2017ರಲ್ಲಿ Vizhithiru ಇದಾದ ಮೇಲೆ ಹಿಂದಿ ಟಿವಿ ಶೋಗಳಲ್ಲಿ ಬ್ಯುಸಿಯಾಗಿ ಬಿಟ್ಟೆ. ಈಗಲ್ಲೂ ಸೌತ್ ಸಿನಿಮಾಗಳಲ್ಲಿ ಅಭಿನಯಿಸಬೇಕು ಅನ್ನೋ ಆಸೆ ತುಂಬಾನೇ ಇದೆ ಆದರೆ ಅಡಿಷನ್ ನೀಡಲು ಸಮಯಕ್ಕೆ ಸಿಕ್ಕಿಲ್ಲ' ಎಂದು ಟೈಮ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಎರಿಕಾ ಫೆರ್ನಾಂಡಿಸ್ ಹೇಳಿದ್ದಾರೆ.

Erica Fernandes talks about south films and relationship vcs

ಬ್ಯುಸಿ ದಿನಗಳು:

'ಧಾರಾವಾಹಿ ಮಾತ್ರವಲ್ಲದೆ ನಾನು ಮ್ಯೂಸಿಕ್ ವಿಡಿಯೋ ಕೂಡ ಮಾಡುತ್ತಿರುವೆ. ನನ್ನ ಲಿಸ್ಟ್‌ನಲ್ಲಿ ಇನ್ನೂ ತುಂಬಾ ಕೆಲಸಗಳಿದೆ. ಸದ್ಯಕ್ಕೆ ಇದರ ಬಗ್ಗೆ ಏನೂ ರಿವೀಲ್ ಮಾಡಲು ಆಗುವುದಿಲ್ಲ. ಒಂದು ಕೆಲಸಕ್ಕೆ ಸೀಮಿತವಾಗಿ ಅದರ ಮೇಲೆ ಗಮನ ಹರಿಸುತ್ತಿರುವೆ. ಟಿವಿ ಆಗಿರಲಿ ವೆಬ್ ಅಗಿರಲಿ ಎರಡರಲ್ಲೂ ಕೆಲಸ ಮಾಡುವುದಕ್ಕೆ ನಾನು ರೆಡಿ.  ಸ್ಟೋರಿ ಹೇಗಿದೆ? ನನಗೆ ಸೂಟ್ ಆಗುತ್ತಾ ಇಲ್ವಾ ಅನ್ನೋದು ಮುಖ್ಯವಾಗುತ್ತದೆ'

ತಿಂಗಳಿಗೆ 20 ಲಕ್ಷ ಸಂಬಳ, 22 ಕೋಟಿ ಒಡತಿ 'ನಿನ್ನಿಂದಲೇ' ಚಿತ್ರದ ನಟಿ ಎರಿಕಾ ಫರ್ನಾಂಡಿಸ್!

2010ರಲ್ಲಿ ಬಾಂಬಿ ಟೈಮ್ಸ್‌ ಫ್ರೆಶ್ ಫೇಸ್ ಪ್ರಶಸ್ತಿಯನ್ನು ಪಡೆದ ಎರಿಕಾ ಫೆರ್ನಾಂಡಿಸ್ 2012ರಲ್ಲಿ ಮಿಸ್ ಇಂಡಿಯಾ ಪೇಜೆಂಟ್ ಅಗಿದ್ದರು. ಇದಾದ ನಂತರ ಸೀದಾ ಸೌತ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. 'ಹಿಂದೆ ತಿರುಗಿ ನೋಡಿದರೆ ನನ್ನ ಜರ್ನಿ ಬಗ್ಗೆ ನನಗೆ ಹೆಮ್ಮೆ ಇದೆ. ಯಾವ ರೀತಿ ರಿಗ್ರೆಟ್ ಇಲ್ಲ. ರಿಗ್ರೆಟ್ ಮಾಡುವ ರೀತಿ ನಾನು ಬದುಕುವುದಿಲ್ಲ. ನಾನು ಚೆನ್ನಾಗಿ ಮಾಡಿದ್ದೀನಾ? ನಾನು ಆಯ್ಕೆ ಮಾಡಿರುವುದರಲ್ಲಿ ಏನು ಡಿಫರೆಂಟ್ ಆಗಿದೆ ಎಂದು ಮಾತ್ರ ಯೋಚನೆ ಮಾಡುವೆ. Destinyನ ಹೆಚ್ಚಾಗಿ ನಂಬುವೆ. ಅನುಭವದಿಂದ ಪಾಠ ಕಲಿತಿರುವೆ, ಇದೆಲ್ಲವೂ ಜೀವನದಲ್ಲಿ ದೊಡ್ಡ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ' 

ಲವ್?:

'ಪ್ರೀತಿ ವಿಚಾರದಲ್ಲಿ ನನಗೆ ಯಾವುದೇ ರಶ್ ಇಲ್ಲ ಆದರೆ ಒಳ್ಳೆಯವರು ಸಿಕ್ಕರೆ ಖಂಡಿತ ಪ್ರೀತಿ ಮಾಡುವೆ. ಜೀವನ ಹಿಂದಿನ ಕಹಿ ಘಟನೆಗಳಿಂದ ನಾನು ಯಾರನ್ನೂ ನಂಬುವುದಿಲ್ಲ ಹೀಗಾಗಿ ಸಮಯ ತೆಗೆದುಕೊಂಡು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಅಂದುಕೊಂಡಿರುವೆ.  ಹಿಂದಿನ ಸಂಬಂಧದ ನೋವುಗಳನ್ನು ಮುಂಬರುವ ಸಂಬಂಧದ ಮೇಲೆ ಹೇರಲು ನನಗೆ ಇಷ್ಟವಿಲ್ಲ. ನನ್ನ ಮನಸ್ಸು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ನಾನು ಮತ್ತೊಬ್ಬರನ್ನು ನನ್ನ ಜೀವನಕ್ಕೆ ಬರ ಮಾಡಿಕೊಳ್ಳುವುದು'

Erica Fernandes: ನಿನ್ನಿಂದಲೇ ನಟಿಯ ಹಾಟೆಸ್ಟ್ ಬಿಕಿನಿ ಲುಕ್

'ಜೀವನದಲ್ಲಿ ಒಂದು ಬ್ರೇಕಪ್ ಆದ್ಮೇಲೆ ನಮಗೆ ಚೆನ್ನಾಗಿ ಅರ್ಥ ಆಗುವುದು ಒಂದೇ - ನಿಜಕ್ಕೂ ನಮಗೆ ಏನು ಬೇಕು ಏನು ಬೇಡ. ನನಗೆ ಒಂದು ಸಂಬಂಧದಲ್ಲಿ  ಮುಖ್ಯವಾಗಿ ಕಂಫರ್ಟ್‌ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಯಾವ ಮುಜುಗರ ನಾಚಿಕೆ ಇಲ್ಲದೆ ವಿಚಾರಗಳನ್ನು ಹಂಚಿಕೊಳ್ಳಬೇಕು ಅವರು ಕೂಡ ನನ್ನ ಜೊತೆ ಇದೇ ರೀತಿ ಇರಬೇಕು. ಒಬ್ಬರನ್ನೊಬ್ಬರು ಗೌರವಿಸಬೇಕು ಹಾಗೂ ಅಗತ್ಯವಿರುವ ಸಮಯದಲ್ಲಿ ಸ್ಪೇಸ್ ಕೊಡಬೇಕು'

Follow Us:
Download App:
  • android
  • ios