ರಾಣಾ 'ಏಕ್‌ ಲವ್‌ ಯಾ' ನಟನೆಗೆ ಪುನೀತ್‌ ಮೆಚ್ಚುಗೆ!

 ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಣಾಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

Ek love ya fame Rana meets Puneeth Rajkumar with director Prem vcs

ಸ್ಯಾಂಡಲ್‌ವುಡ್‌ ಕ್ರೇಜಿ ಡೈರೆಕ್ಟರ್ ಜೋಗಿ ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಚಿತ್ರದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ನಾಯಕನಾಗಿದ್ದಾರೆ. ರಾಣಾ ಮೊದಲ ಚಿತ್ರ ಇದಾಗಿದ್ದು, ಚಿತ್ರದ ಬಗ್ಗೆ ಮಾತನಾಡಲು ನಟ ಪುನೀತ್‌ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. 'ಏಕ್‌ ಲವ್‌ ಯಾ' ಚಿತ್ರದ ಕೆಲವು ದೃಶ್ಯಗಳನ್ನು ನೋಡಿ ಪುನೀತ್‌ ರಾಜ್‌ಕುಮಾರ್‌ ಮೆಚ್ಚಿ ಕೊಂಡಿದ್ದು, ರಾಣಾ ನಟನೆ ಹೊಗಳಿದ್ದಾರೆ.

'ಅಪ್ಪು ಸರ್, ನಿಮ್ಮ ಸರಳ ನಡೆ ನುಡಿ, ಸಿನಿಮಾ ಮೇಲಿನ ಶ್ರದ್ಧೆ ನಮ್ಮನ್ನ ಪ್ರೇರೇಪಿಸುತ್ತೆ. ತೆರೆ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತೀಯಾ, ಡ್ಯಾನ್ಸ್‌ ಚೆನ್ನಾಗಿ ಮಾಡಿದ್ದಿಯಾ, ಎಂದು ನೀವು ಮೆಚ್ಚಿ ಮಾತನಾಡಿದ್ದು ನನಗೆ ಖುಷಿ ಕೊಟ್ಟಿದೆ. ನಿಮ್ಮ ಮಾತುಗಳಿಂದ ನನಗೆ ರೋಮಾಂಚನ ಆಗಿದೆ. ಪ್ರೇಮ್ ಅಂಕಲ್ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ಮುಂದಿನ ಸಿನಿಮಾಗಳನ್ನ ಮಾಡ್ತೀನಿ,' ಎಂದು ರಾಣಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮ್‌ ಕೂಡ ಜೊತೆಗಿದ್ದರು. 'ಥ್ಯಾಂಕ್ ಯು ಸೋ ಮಚ್ ಬಾಸ್ ಪುನೀತ್ ರಾಜ್‌ಕುಮಾರ್,'ಎಂದು ಪ್ರೇಮ್ ಟ್ಟೀಟ್ ಮಾಡಿದ್ದಾರೆ.

ಮೊದಲ ದೃಶ್ಯದಲ್ಲೇ ಬಿಲ್ಡಿಂಗ್‌ನಿಂದ ಹಾರಿದೆ: ರೀಷ್ಮಾ ನಾಣಯ್ಯ

ಕೆಲವು ದಿನಗಳ ಹಿಂದೆ ಮುತ್ತತಿಯಲ್ಲಿ ಏಕ್ ಲವ್ ಯಾ ಸಿನಿಮಾದ ಕೊನೆಯ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ನಿರ್ಮಾಪಕಿ ರಕ್ಷಿತಾ ಪ್ರೇಮ್ ಮುತ್ತತಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಶೂಟಿಂಗ್ ವ್ರಾಪ್‌ಅಪ್ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಣಾ ಜೊತೆ ಡಿಂಪಲ್ ಕ್ವೀನ್ ರಕ್ಷಿತಾ ಹಾಗೂ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ರೀಷ್ಮಾ ನಾಣಯ್ಯ ಜೋಡಿಯಾಗಿ ನಟಿಸಿದ್ದಾರೆ.

 

Latest Videos
Follow Us:
Download App:
  • android
  • ios