ದುನಿಯಾ ಸಿನಿಮಾ ತೆರೆಗೆ ಬಂದು 18 ವರ್ಷ ಕಳೆದಿದೆ. ಇಷ್ಟು ವರ್ಷವಾದ್ರೂ ದುನಿಯಾ ವಿಜಿ ದುನಿಯಾ ಸಿನಿಮಾವನ್ನು ಮರೆತಿಲ್ಲ. ವಿಜಯ್‌ ಗೆ ಬ್ರೇಕ್‌ ನೀಡಿದ್ದ, ದುನಿಯಾ ಸಿನಿಮಾದ ಬಟ್ಟೆ, ಚಪ್ಪಲಿ ಹಾಗೂ ಬ್ಯಾಗನ್ನು ದುನಿಯಾ ವಿಜಿ ತಮ್ಮ ಬಳಿ ಇಟ್ಕೊಂಡಿದ್ದಾರೆ. ಅದ್ರ ಸುಂದರ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಮೊದಲ ಪ್ರೀತಿ, ಮೊದಲ ಕೆಲಸ, ಮೊದಲ ಸಂಬಳ ಹೀಗೆ ಎಲ್ಲ ಮೊದಲುಗಳು ಸ್ಪೇಷಲ್ ಆಗಿರುತ್ವೆ. ಇನ್ನು ವೃತ್ತಿ ಜೀವನಕ್ಕೆ ಅದ್ಭುತ ಆರಂಭ ನೀಡಿದ, ಸ್ಯಾಂಡಲ್ವುಡ್ (Sandalwood) ನಲ್ಲಿ ನೆಲೆ ನಿಂತು, ಕನ್ನಡಿಗರ ಮನಸ್ಸು ಕದಿಯಲು ಸಹಾಯ ಮಾಡಿದ ಮೊದಲ ಸಿನಿಮಾ ಪ್ರತಿಯೊಬ್ಬ ಕಲಾವಿದರಿಗೂ ವಿಶೇಷ. ಮೊದಲ ಬಾರಿ ನಾಯಕ ನಟನಾಗಿ ಕಾಣಿಸಿಕೊಂಡ ಸಿನಿಮಾವನ್ನು, ಕಲಾವಿದರು ಎಂದೂ ಮರೆಯೋದಿಲ್ಲ. ಅದ್ರಲ್ಲಿ ದುನಿಯಾ ವಿಜಿ (Duniya Viji) ಕೂಡ ಹೊರತಾಗಿಲ್ಲ. ದುನಿಯಾ ವಿಜಿ ಮೊದಲ ಬಾರಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು ದುನಿಯಾ ಸಿನಿಮಾ (Duniya Cinema)ದಲ್ಲಿ.

18 ವರ್ಷಗಳ ಹಿಂದೆ ತೆರೆ ಕಂಡಿದ್ದ ದುನಿಯಾ ಸಿನಿಮಾ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕಾಗೆ ಕಣ್ಣು, ಗೂಬೆ ಕಣ್ಣು ಹಾಡಿನಿಂದ ಹಿಡಿದು, ಪೌಂಡರ್ ಹಚ್ಕೊಳ್ಳಿ, ತಲೆ ಬಾಚ್ಕೊಳ್ಳಿ ಡೈಲಾಗ್ ವರೆಗೆ ಎಲ್ಲವನ್ನೂ ಅಭಿಮಾನಿಗಳು ಆಗಾಗ ನೆನಪಿಸಿಕೊಳ್ತಿರುತ್ತಾರೆ. 2007ರಲ್ಲಿ ತೆರೆಗೆ ಬಂದ ದುನಿಯಾ ಸಿನಿಮಾ, ವಿಜಯ್ ಹೆಸರನ್ನೇ ಬದಲಿಸಿತು. ವಿಜಯ್ ಇದ್ದವರು ದುನಿಯಾ ವಿಜಿಯಾಗಿ ಬದಲಾದ್ರು. ದುನಿಯಾ ಕನ್ನಡದ ಅತ್ಯುತ್ತಮ ಸಿನಿಮಾ ಮಾತ್ರವಲ್ಲ ಅಲ್ಲಿ ನಟಿಸಿದ ಕಲಾವಿದರಿಗೆ ಒಳ್ಳೆ ಬ್ರೇಕ್ ನೀಡಿದ ಚಿತ್ರ. ದುನಿಯಾ ವಿಜಯ್ ಈ ಸಿನಿಮಾ ನಂತ್ರ ಮನೆ ಮಾತಾದ್ರು. ಒಂದಾದ್ಮೇಲೆ ಒಂದು ಆಫರ್ ಸಿಗ್ತಾ ಹೋಯ್ತು. ಸ್ಯಾಂಡಲ್ವುಡ್ ನಲ್ಲಿ ನೆಲೆ ನಿಲ್ಲಲು ದುನಿಯಾ ವಿಜಿಗೆ ಸಹಾಯ ಮಾಡಿದ ಸಿನಿಮಾ ದುನಿಯಾ. ಈ ನೆನಪನ್ನು ದುನಿಯಾ ವಿಜಿ ಎಂದೂ ಮರೆಯಲು ಸಾಧ್ಯವಿಲ್ಲ. ಹಾಗಾಗಿಯೇ ದುನಿಯಾ ಸಿನಿಮಾದಲ್ಲಿ ಬಳಸಿದ ಡ್ರೆಸ್, ಚಪ್ಪಲಿ, ಬ್ಯಾಗನ್ನು ಈಗ್ಲೂ ದುನಿಯಾ ವಿಜಿ ತಮ್ಮ ಬಳಿ ಇಟ್ಕೊಂಡಿದ್ದಾರೆ. ತನ್ಮ ಸೋಶಿಯಲ್‌ ಮೀಡಿಯಾದಲ್ಲಿ ಎರಡು ದಿನಗಳ ಹಿಂದೆ ದುನಿಯಾ ವಿಜಿ ವಿಡಿಯೋ ಹಂಚಿಕೊಂಡಿದ್ದಾರೆ. ದುನಿಯಾ ಸಿನಿಮಾ ಬಂದು 18 ವರ್ಷ ಪೂರ್ಣಗೊಳ್ಳುತ್ತದೆ. ನಿಮ್ಮೆಲ್ಲರ ಹಾರೈಕೆಗೆ ಸದಾ ಋಣಿ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. 

ಆ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮನೆಯಿಂದ ಹೊರ ಬರಲು ಭಯ ಆಗುತ್ತಿತ್ತು: ನಿಶ್ವಿಕಾ ನಾಯ್ಡು

2007ರಲ್ಲಿ ಸೂರಿ, ದುನಿಯಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ದುನಿಯಾ ವಿಜಯ್ ಜೊತೆ ರಶ್ಮಿ, ರಂಗಾಯಣ ರಘು, ವಿಜಯ್, ಕಿಶೋರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದರು. ಹಳ್ಳಿ ಹುಡುಗನೊಬ್ಬ ತಾಯಿ ಸತ್ತ ಮೇಲೆ ಪಟ್ಟಣಕ್ಕೆ ಬಂದು ಭೂಗತ ಲೋಕದಲ್ಲಿ ಕಳೆದು ಹೋಗುವ ಈ ಚಿತ್ರಕಥೆ 2006 -2007ರ ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿಯಲ್ಲಿ ಗಮನ ಸೆಳೆದಿತ್ತು. ದುನಿಯಾ ವಿಜಿಗೆ ಅತ್ಯುತ್ತಮ ನಟ ಹಾಗೂ ಸೂರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿತ್ತು. ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ರಂಗಾಯಣ ರಘು ಪಡೆದಿದ್ದರು. ಈ ಸಿನಿಮಾದಲ್ಲಿ ದುನಿಯಾ ವಿಜಿ ಮಾಸಲು ಡ್ರೆಸ್, ಹರಿದ ಚಪ್ಪಲಿಯನ್ನು ಧರಿಸಿದ್ದರು. ಅದೆಲ್ಲವನ್ನೂ ವಿಜಿ ತಮ್ಮ ಬಳಿ ಭದ್ರವಾಗಿಟ್ಟುಕೊಂಡಿದ್ದಾರೆ. 

ನಿಮ್ಮ ದಾಂಪತ್ಯದಲ್ಲಿ ಹೊಂದಾಣಿಕೆ ಚೆನ್ನಾಗಿದ್ಯಾ? ಆದರ್ಶ ದಂಪತಿಯಲ್ಲಿ ಟೆಸ್ಟ್ ಮಾಡ್ಕೊಳ್ಳಿ

ದುನಿಯಾ ವಿಜಿಗೆ ರಂಗ ಎಸ್. ಎಸ್. ಎಲ್. ಸಿ ಮೊದಲ ಸಿನಿಮಾ. ಅವರು ಕಿಚ್ಚ ಸುದೀಪ್ ಅಭಿನಯದ ರಂಗ ಎಸ್. ಎಸ್. ಎಲ್. ಸಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ವಿಜಿ, ನಂತ್ರ ಕನ್ನಡದ ಇನ್ನೂ ಅನೇಕ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2007ರಲ್ಲಿ ಸೂರಿ ಕಣ್ಣಿಗೆ ಬಿದ್ದ ವಿಜಿ, ದುನಿಯಾದಲ್ಲಿ ಹಿರೋ ಆಗಿ ನಟಿಸಿದ್ರು. ದುನಿಯಾ ಬ್ಲಾಕ್ ಬ್ಲಾಸ್ಟರ್ ನಂತ್ರ ವಿಜಿ ಚಂಡ, ಜರಾಸಂಧ, ಜಾಕ್ಸನ್ ಮಾಸ್ತಿಗುಡಿ, ಜಯಮ್ಮನ ಮಗ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟ ದುನಿಯಾ ವಿಜಿ, ಸಲಗ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭೀಮ ಕೂಡ ಅವರ ನಿರ್ದೇಶದಲ್ಲಿ ಬಂದ ಸಿನಿಮಾ. ಈಗ ಎರಡನೇ ಮಗಳ ಚೊಚ್ಚಲ ಸಿನಿಮಾಗೆ ದುನಿಯಾ ವಿಜಿ ಆಕ್ಷನ್ ಕಟ್ ಹೇಳ್ತಿದ್ದಾರೆ.