ಭೀಮ ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವ ಕತೆ: 3 ಮಿಲಿಯನ್ ವೀಕ್ಷಣೆ ಕಂಡ ಟ್ರೈಲರ್
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, 3 ಮಿಲಿಯನ್‌ಗೂ ಹೆಚ್ಚು ಹಿಟ್ಸ್ ಗಳಿಸಿ ಟ್ರೆಂಡಿಂಗ್‌ನಲ್ಲಿದೆ. ಟ್ರೈಲರ್ ಆಸಕ್ತಿ ಹುಟ್ಟಿಸುವಂತೆ ಮೂಡಿ ಬಂದಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, 3 ಮಿಲಿಯನ್‌ಗೂ ಹೆಚ್ಚು ಹಿಟ್ಸ್ ಗಳಿಸಿ ಟ್ರೆಂಡಿಂಗ್‌ನಲ್ಲಿದೆ. ಟ್ರೈಲರ್ ಆಸಕ್ತಿ ಹುಟ್ಟಿಸುವಂತೆ ಮೂಡಿ ಬಂದಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಹಾಡುಗಳ ಬಳಿಕ ಟ್ರೇಲರ್ ಕೂಡ ಹಿಟ್ ಆಗಿದ್ದು, ಸಿನಿಮಾ ಇದೇ ಶುಕ್ರವಾರ ಆಗಸ್ಟ್ 9ರಂದು ಬಿಡುಗಡೆ ಆಗುತ್ತಿದೆ. ಚಿತ್ರದ ಕುರಿತು ದುನಿಯಾ ವಿಜಯ್, ‘ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವ ಕತೆ ಈ ಚಿತ್ರದಲ್ಲಿದೆ. ಪ್ರತಿಯೊಂದು ಮನೆಯಲ್ಲೂ ಹುಟ್ಟಿಕೊಂಡಿರುವ ಮತ್ತು ಹುಟ್ಟಿಕೊಳ್ಳಬಹುದಾದ ಸಮಸ್ಯೆಯ ಸುತ್ತ ಈ ಸಿನಿಮಾ ಮಾತನಾಡುತ್ತದೆ. ಹೀಗಾಗಿ ಇದು ಎಲ್ಲಾ ವರ್ಗದ ಪ್ರೇಕ್ಷಕರ ಸಿನಿಮಾ’ ಎಂದರು.
ಭೀಮ ಸಿನಿಮಾದ ಜೀವಾಳ ಕತೆಯಾದರೆ ಸಿನಿಮಾದ ನರನಾಡಿ ಚಿತ್ರದ ಸಂಗೀತವಾಗಿದೆ. ಚರಣ್ ರಾಜ್ ಸಂಗೀತದ ಭೀಮ ಸಿನಿಮಾ ಹಾಡುಗಳು ಭರ್ಜರಿ ಹಿಟ್ಟಾಗಿವೆ.. ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೇ , ಡೋಂಟ್ ವರಿ ಚಿನ್ನಮ್ಮಾ, ಬೂಮ್ ಬೂಮ್ ಸೇರಿದಂತೆ ಒಂದಕ್ಕಿಂತ ಒಂದು ಚಂದ.. ಸಿನಿಮಾದ ಹಾಡುಗಳ ಹಿಂದಿನ ಶಕ್ತಿಯನ್ನ ದು. ವಿಜಯ್ ಪತ್ರಕರ್ತರಿಗೆ ಪರಿಚಯಿಸಿದ್ದು ಹೀಗೆ. ಭೀಮ ಸಿನಿಮಾದ ಹಾಡುಗಳ ಯಶಸ್ಸಿನಲ್ಲಿ ಇನ್ನೂ ಪಾಳುದಾರರಿದ್ದಾರೆ. ಅದರಲ್ಲಿ ಮುಖ್ಯವಾಗಿಈ ಸಿನಿಮಾದ ಸಾಹಿತ್ಯ ಬರೆದವರಲ್ಲಿ ಅರಸು ಅಂತಾರೆ ಹಾಗೆಯೇ ಗಾಯಕ ನವೀನ್ ಸಜ್ಜೂ ಕೂಡ ಮುಖ್ಯವಾದವರು ಎಂದ ದುನಿಯಾ ವಿಜಯ್ ಈ ಸಿನಿಮಾದ ಪ್ಯಾಥೋ ಸಾಂಗ್ 4 ಲೈನ್ ಹಾಡಿಸಿಯೇ ಬಿಟ್ಟರು.
ಎಂದಿನಂತೆ ದು.ವಿಜಯ್ ಮತ್ತೊಂದು ಪ್ಯಾಥೋ ಸಾಂಗ್ ಪಕ್ಕಾ ಹಿಟ್ಟಾಗುತ್ತೆ ಅಂತ ಇಲ್ಲಿಯೇ ಸೂಚನೆ ಸಿಕ್ಕಿಬಿಟ್ಟಿತ್ತು. ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ್ , ‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್ ಬೂಮ್ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂ ಗಳೂರಿನ ಬಗ್ಗೆ ಹೇಳುವಂತಿದೆ.
ಅಪ್ಪು ಹೇಗೋ ದುನಿಯಾ ವಿಜಯ್ ಕೂಡಾ ನನಗೆ ತಮ್ಮನ ತರ: ಭೀಮ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಶಿವಣ್ಣ
ಶೀಘ್ರದಲ್ಲೇ ಈ ಹಾಡು ರಿಲೀಸ್ ಆಗಲಿದೆ. ಭೀಮ ಡ್ರಗ್ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದು. ಈಗಿನ ಕಾಲದಲ್ಲಿ ಡ್ರಗ್ ಎನ್ನುವುದು ಇಡೀ ಸಮಾಜವನ್ನು ವ್ಯಾಪಿಸಿರುವ ರೀತಿ ಭಯ ಹುಟ್ಟಿಸುತ್ತದೆ ಅದನ್ನು ನೇರವಾಗಿ ತೆರೆ ಮೇಲೆ ತಂದಿದ್ದೇನೆ, ಸಾವಿರ ಆನೆಗಳ ಶಕ್ತಿ ಭೀಮ ಅಂತಿದ್ದಾರೆ ವಿಜಯ್> ಕೃಷ್ಣಸಾರ್ಥಕ್ ಮತ್ತು ಜಗದೀಶ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್, ಆರ್‌ಎಸ್ ಗೌಡ, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ತರುಣ್ ಸುಧೀರ್, ಗುರು ದೇಶಪಾಂಡೆ, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ, ಕವಿರಾಜ್, ಅರಸು ಅಂತಾರೆ ಇದ್ದರು. ನಾಯಕಿ ಅಶ್ವಿನಿ, ಡ್ರ್ಯಾಗನ್ ಮಂಜು, ಸಂಗಿತ ನಿರ್ದೇಶಕ ಚರಣ್‌ರಾಜ್ ಸಿನಿಮಾ ಕುರಿತು ಭರವಸೆ ವ್ಯಕ್ತಪಡಿಸಿದರು.