ಯಾವಾಗ ಚಿತ್ರಮಂದಿರಗಳು ಬಾಗಿಲು ತೆರೆಯುತ್ತವೆ, ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಸಿಗಲಿದೆಯೇ ಎನ್ನುವ ಭವಿಷ್ಯದ ಲೆಕ್ಕಾಚಾರಗಳ ನಡುವೆಯೇ ಸದ್ಯ ಶೂಟಿಂಗ್‌ ಮುಗಿಸಿರುವ ಚಿತ್ರಗಳ ಪೈಕಿ ಯಾವ ಸಿನಿಮಾ ತೆರೆ ಮೇಲೆ ಮೂಡಲಿದೆ ಎನ್ನುವ ಪಕ್ಕಾ ಪ್ಲಾನ್‌ ಆಗಲೇ ರೆಡಿಯಾಗಿದೆ ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್‌ ನಿರ್ಮಾಪಕರು. 

ಸ್ಟಾರ್‌ ನಟರು ಅಭಿನಯದ ದೊಡ್ಡ ಚಿತ್ರಗಳೂ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯ ಸರದಿಗಾಗಿ ಕಾಯುತ್ತಿವೆ. ಈ ಲೆಕ್ಕದಲ್ಲಿ ನೋಡುವುದಾದರೆ ಚಿತ್ರಮಂದಿರಗಳು ಬಾಗಿಲು ತೆರೆದ ಕೂಡಲೇ ಮೊದಲು ಬರುವ ಚಿತ್ರ ‘ಸಲಗ’. ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಆಗಸ್ಟ್‌ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುಬಾರಿ ಬಜೆಟ್‌ನಲ್ಲಿ ಪ್ರಮೋಷನ್‌ಗೆಂದು ಸಾಂಗ್‌ ಶೂಟ್ ಮಾಡಿದ ಸಲಗ ಟೀಂ! 

‘ಜುಲೈ ತಿಂಗಳ ಕೊನೆಯ ವಾರದಲ್ಲಿ ಚಿತ್ರಮಂದಿರಗಳ ಬಾಗಿಲು ತೆರೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಯೋಚನೆ ಮಾಡಿದ್ದು, ಚಿತ್ರರಂಗದ ವತಿಯಿಂದಲೂ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಚಿತ್ರಮಂದಿರಗಳು ಬಾಗಿಲು ತೆರೆದರೆ ಆಗಸ್ಟ್‌ ತಿಂಗಳಲ್ಲಿ ನಾವು ಸಲಗ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ.

ಚಿತ್ರಮಂದಿರಗಳು ಬಾಗಿಲು ತೆರೆದು, ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಕೊಟ್ಟಕೂಡಲೇ ಮೊದಲ ಚಿತ್ರವಾಗಿ ನಮ್ಮ ಸಲಗ ಬರುತ್ತಿದೆ. ಅನಗತ್ಯ ಸ್ಪರ್ಧೆ ಆಗದಂತೆ ಮಾತುಕತೆ ಮಾಡಿಕೊಂಡು ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ. ಆಗಸ್ಟ್‌ನಲ್ಲಿ ಸಲಗ ತೆರೆಗೆ ಬರುವುದು ಪಕ್ಕಾ’ ಎಂಬುದು ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಮಾತು.

"