ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಸಂಕುಸ್ಥಾಪನೆ ಮಾಡುವ ವಿಚಾರದ ಬಗ್ಗೆ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ನಟ ಅನಿರುದ್ಧ್ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. 

ವಿಷ್ಣು - ಬಾಲು ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದ ಭಾರತಿ!

ಡಾ. ವಿಷ್ಣುವರ್ಧನ್ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಇದೇ ತಿಂಗಳು 15ರಂದು ಸ್ಮಾರಕದ ಗುದ್ದಲಿ ಪೂಜೆ ಮಾಡಲಾಗುತ್ತದೆ. ಸೂಕ್ತ ಭದ್ರತೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಭಾರತಿ ಆಹ್ವಾನಿಸಿದ್ದಾರೆ. ಎಲ್ಲೆಡೆ ಕೋವಿಡ್19 ಇರುವ ಕಾರಣ ಸಿ.ಎಂ ಗುದ್ದಲಿ ಪೂಜೆಗೆ ಬರಲು ಆಗುವುದಿಲ್ಲ, ಬದಲು  ಆನ್‌ಲೈನ್ ಮೂಲಕ ವಿಷ್ಣು‌ ಸ್ಮಾರಕದ ಸಂಕುಸ್ಥಾಪನೆ ನೆರವೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. 

ಸೆಪ್ಟೆಂಬರ್ 18 ರಂದು ಡಾ. ವಿಷ್ಣುವರ್ಧನ್ ಗೆ ಹುಟ್ಟುಹಬ್ಬ. ಪ್ರತಿ ವರ್ಷವೂ ಅಭಿಮಾನಿಗಳು ಸಾಹಸಸಿಂಹ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಸ್ಮಾರಕದ ಬಳಿ ಬಂದು ಪೂಜೆ ಸಲ್ಲಿಸುತ್ತಾರೆ. ಈ ಕಾರಣಕ್ಕೆ ಗುದ್ದಲಿ ಪೂಜೆಯನ್ನು ಮೂರು ದಿನಗಳ ಮುನ್ನವೇ ಮಾಡಲು ತೀರ್ಮಾನಿಸಿದ್ದಾರೆ.

ಡಾ.ವಿಷ್ಣು ಅಭಿಮಾನಿ ಲೋಕೇಶ್‌ ಆತ್ಮಹತ್ಯೆ 

'ಆ ದಿನ ದಯವಿಟ್ಟು ಯಾರು ಗುಂಪು ಸೇಬೇಡಿ. ಇದರಿಂದ ಯಾರಿಗೂ ತೊಂದರೆ ಆಗಬಾರದು. ಇವಾಗ ಒಂದು ಒಳ್ಳೆ ಕೆಲಸ ಶುರುವಾಗಿದೆ. ಇನ್ನು ಮೇಲೆ ಎಲ್ಲಾ ಒಳ್ಳೆಯದು ಆಗುತ್ತದೆ ಎಂಬ ಆಶಯವಿದೆ. 15ರಂದು ನಿರ್ಮಾಣ ಕಾರ್ಯ ಶುರು ಮಾಡುತ್ತೇವೆ. ಎಲ್ಲವೂ ಅಭಿಮಾನಿಗಳ ಆಶಯದಂತೆ ನೆರವೇರಲಿದೆ. ಕೋವಿಡ್‌‌ನಿಂದಾಗಿ ಯಾರನ್ನೂ ಭೇಟಿ ಮಾಡಲು ಅಗಲಿಲ್ಲ. ಕೊರೋನಾದಿಂದ ತುಂಬಾ ಜನರು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ. ಸ್ಮಾರಕ ಸ್ಥಳದ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿದಿದೆ,' ಎಂದು ಭಾರತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.