ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ.. ಗುಟ್ಟು ರಟ್ಟಾಗಿದೆ ನೋಡಿ..
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ.. ಅಮೋಘ ನಟನೆಗೆ ಮಾತ್ರ ಹೆಸರುವಾಸಿಯಾಗಿಲ್ಲ ಡಾ ರಾಜ್‌ಕುಮಾರ್, ಜೊತೆಗೆ, ಅಪ್ರತಿಮ ಗಾಯಕರೂ ಆಗಿದ್ದರು. ಅವರಿಗೆ ಆ ಕಾರಣಕ್ಕಾಗಿಯೇ ಗಾನ ಗಂಧರ್ವ ಬಿರುದನ್ನು ಕೂಡ ದಯಪಾಲಿಸಲಾಗಿತ್ತು. ಅಂಥ ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಅಂದರೆ, ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರು. ಅವರ ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಕೂಡ ನಾಟಕ ಕಲಾವಿದರಾಗಿದ್ದರು. ಆ ಕಾಲದಲ್ಲಿ ಸಿನಿಮಾ ಇರಲಿಲ್ಲ ಬಿಡಿ.. ಕಪ್ಪುಬಿಳುಪು ಚಿತ್ರ ಕೂಡ ಶುರುವಾಗಿದ್ದು ಡಾ ರಾಜ್‌ಕುಮಾರ್ ಕಾಲದಲ್ಲಿ ಅಷ್ಟೇ.
ಹೌದು, ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ ಹಾಗೂ ಬಬ್ರುವಾಹನ ಸೇರಿದಂತೆ ಡಾ ರಾಜ್‌ಕುಮಾರ್ ನಟನೆಯ ಹಲವಾರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಆ ಮೂಲಕ ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ಆಗ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ? ಮುಂದೆ ನೋಡಿ..
ಪುನೀತ್ ರಾಜ್‌ಕುಮಾರ್ ಗ್ರಾಂಡ್ ಹುಟ್ಟುಹಬ್ಬದ ಆಚರಣೆ: ಅದ್ರಿಂದ ಪ್ರೂವ್ ಆಗಿದ್ದೇನು?
'ನಿಮ್ಮ ಈ ವಿಶ್ವಾಸಕ್ಕೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕೋ ನನಗೆ ಗೊತ್ತಾಗ್ತಾ ಇಲ್ಲ.. ರಂಗಭೂಮಿಗಾಗ್ಲೀ ಚಿತ್ರರಂಗಕ್ಕಾಗ್ಲೀ ನನ್ನಿಂದ ಕಿಂಚಿತ್ತು ಸೇವೆ ನನ್ನಿಂದ ಸಲ್ಲಿದ್ರೆ, ಅದಕ್ಕೆ ಕಾರಣ ನಾನಲ್ಲ.. ಈ ಗೌರವ ಎಲ್ಲಾ ಸಲ್ಲಬೇಕಾಗಿದ್ದು ನನ್ನ ಅಪ್ಪಾಜಿ ಅವ್ರಿಗೆ.. ಇವ್ರೇ ನನ್ನ ಅಪ್ಪಾಜಿಯವ್ರು, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಂತ.. ನಮಗೆ ಬೆಳಕನ್ನು ತೋರಿಸಿಕೊಟ್ಟ ದೇವರು.. ಸಾಮಾನ್ಯವಾಗಿ ಅವ್ರು ರಾಕ್ಷಸ ಪಾತ್ರವನ್ನು ಮಾಡುವಲ್ಲಿ ಎತ್ತಿದ ಕೈ.
ನಮ್ಮ ಅಪ್ಪಾಜಿ ಮಾಡಿದ್ದ ರಾವಣ, ಭೀಮ, ಕಂಸ, ಜಲಂಧರ ಇಂಥ ಪಾತ್ರಗಳನ್ನು ನೋಡಿದ್ದ ನನಗೆ ಮಹಿಷಾಸುರ, ರಣಧೀರ ಕಂಠೀರವ ಇವುಗಳನ್ನೆಲ್ಲಾ ಮಾಡೋದಕ್ಕೆ ಸ್ಪೂರ್ತಿ ಕೊಟ್ತು.. ಇವತ್ತಿನ ನನ್ನ ಏಳಿಗೆನಾ ಅವ್ರು ಕಣ್ತುಂಬ ನೋಡಿದ್ರೆ, ಬಹಳ ಸಂತೋಷ ಪಡ್ತಾ ಇದ್ರು.. ಎಂದಿದ್ದರು ಡಾ ರಾಜ್‌ಕುಮಾರ್. ಬಳಿಕ ಅವರು ಅದೆಷ್ಟು ಬೆಳೆದರು ಎಂಬುದು ಎಲ್ಲರಿಗೂ ಗೊತ್ತು. ತಮ್ಮ ನಟನಾ ಜೀವನದ ಶುರುವಿನಲ್ಲಿ ತಮ್ಮ ಎಲ್ಲಾ ಯಶಸ್ಸನ್ನು ಅಪ್ಪಾಜಿಗೆ ಅರ್ಪಿಸಿದ್ದ ಡಾ ರಾಜ್‌ಕುಮಾರ್ ಅವರು ಬಳಿಕ ಅಭಿಮಾನಿಗಳೇ ನನ್ನ ದೇವರು ಎಂದಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?
ಈ ಎರಡೂ ಮಾತಿನ ಅರ್ಥ ಇಷ್ಟೇ. ಡಾ ರಾಜ್‌ಕುಮಾರ್ ಯಾವತ್ತೂ ಕೂಡ ತಮಗೆ ಸಿಕ್ಕ ಯಶಸ್ಸು 'ತಮ್ಮದು' ಎಂದು ಯಾವತ್ತೂ ಹೇಳಿಕೊಂಡಿರಲೇ ಇಲ್ಲ. ತಮ್ಮ ನಟನಾಕಲೆಯ ಕ್ರೆಡಿಟ್‌ಅನ್ನು ತಮ್ಮ ಅಪ್ಪಾಜಿಗೆ ಕೊಟ್ಟು, ತಮಗೆ ಸಿಕ್ಕ ಸಕ್ಸಸ್ ಅನ್ನು ಕನ್ನಡ ಸಿನಿಪ್ರೇಕ್ಷಕ ಅಭಿಮಾನಿಗಳಿಗೆ ಮೀಸಲಿಟ್ಟರು. 'ಅಭಿಮಾನಿ'ಗಳನ್ನು ದೇವರು ಎಂದು ಕರೆದುಬಿಟ್ಟರು ಡಾ ರಾಜ್‌ಕುಮಾರ್. ಈಗ ಅದೊಂದು ಟ್ರೆಂಡ್ ಆಗಿಯೂ ಮುಂದುವರಿಯುತ್ತಿದೆ.

