ಅಣ್ಣಾವ್ರ ಎದೆ ಮೇಲಿದ್ದ ಟೊಮೊಟೋ ಗಾತ್ರದ ಹುಣ್ಣನ್ನು ಮಾಯ ಮಾಡಿದ ಪವಾಡ ಪುರುಷ; ಘಟನೆ ಕೇಳಿ ಎಲ್ಲರೂ ಶಾಕ್
ಅಣ್ಣವರಿಗೆ ಇದ್ದ ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡಿದ್ದು ಮುತ್ತತ್ತಿ ರಾಯ. ಕನಸಿನಲ್ಲಿ ನಡೆದ ಘಟನೆಯನ್ನು ವಿವರಿಸಿದ ಮಂಜುನಾಥ್.
ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ ಮುತ್ತತ್ತಿರಾಯನ ಕೃಪಾಶಿರ್ವಾದದಿಂದ ಜನಿಸಿದ ಗಂಡು ಮಗುನೇ ಮುತ್ತುರಾಜ್ ಉರ್ಫ್ ಡಾ.ರಾಜ್‌ಕುಮಾರ್. ಸಣ್ಣ ವಯಸ್ಸಿನಿಂದಲೂ ರಾಜ್‌ಕುಮಾರ್ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಾಣಿಸಿಕೊಳ್ಳುತ್ತಿದ್ದಂತೆ. ಆದರೆ ಒಮ್ಮೆ ಎದೆಯ ಮೇಲೆ ಟೊಮಾಟೊ ಗಾತ್ರದ ಗುಳ್ಳೆ ಕಾಣಿಸಿಕೊಂಡಾಗ ನಡೆದ ಘನಟೆ ಮಾತ್ರ ನಿಜಕ್ಕೂ ಅಚ್ಚರಿ ಎನ್ನಬಹುದು..
ಹೌದು! ಪುಟ್ಟ ಹುಡುಗನಾಗಿದ್ದಾಗ ಎದೆಯ ಎಡಭಾಗದಲ್ಲಿ ಸಣ್ಣ ಸುಳ್ಳೆ ಕಾಣಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಇದೆಲ್ಲ ಬರೋದು ಸಹಜ ಅಂದುಕೊಂಡು ಮನೆಯಲ್ಲಿ ಸುಮ್ಮನಾಗಿದ್ದಾರೆ. ಆದರೆ ದಿನ ಕಳೆಯುತ್ತಿದ್ದಂತೆ ಟೊಮ್ಯಾಟೊ ಗಾತ್ರವಾಗುತ್ತದೆ ಹಾಗೂ ಕೆಂಪಾಗುತ್ತದೆ. ನೋವು ತಡೆಯಲಾರದೆ ದಿನ ಪೂರ್ತಿ ಅಣ್ಣಾವ್ರ ಅಳುತ್ತಿದ್ದಂತೆ. ಆಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತುಂಬಾನೇ ಕಷ್ಟ ಹೀಗಾಗಿ ದೇವರಲ್ಲಿ ಹರಿಕೆ ಮಾಡಿಕೊಳ್ಳುತ್ತಾರೆ ಆದರೂ ವಾಸಿಯಾಗುವುದಿಲ್ಲ. ಒಮ್ಮೆ ಅಣ್ಣಾವ್ರ ಚಿಕ್ಕಮ್ಮ ಜಗುಲಿಯಲ್ಲಿ ಮಲಗಿದ್ದಾಗ ಬಿದ್ದ ಕನಸಿನಲ್ಲಿ ಗಾಯ ವಾಸಿಯಾಗುತ್ತದೆ. ಈ ಘಟನೆಯನ್ನು ಹಿರಿಯ ಪತ್ರಕರ್ತ ಮಂಜುನಾಥ್ ಅವರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಅಣ್ಣಾವ್ರ ಕುಟುಂಬಕ್ಕೆ ಆರೋಗ್ಯದ ವಿಚಾರದಲ್ಲಿ ಏಟ್ ಮೇಲೆ ಏಟು ಬೀಳುತ್ತಿದೆ; ನೋವು ಹಂಚಿಕೊಂಡ ಪೂರ್ಣಿಮಾ ರಾಮ್‌ಕುಮಾರ್
'ಒಬ್ಬ ಶುಭ್ರ ಶ್ವೇತ ವಸನಧಾರಿಯಾದಂತಹ ಹಣ್ಣು ಹಣ್ಣು ಮುದುಕ ಒಂದು ಏನಮ್ಮ ಮಗುವಿನ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೀಯಾ? ಅಂತ ಕೇಳಿದಂತೆ ಆಗುತ್ತದೆ. ಆಗ ಮುತ್ತತ್ತಿರಾಯನೇ ಬಂದಿದ್ದಾನೆ ಎಂದು ಕೊಂಡು ಅವರ ಪಾದಗಳನ್ನು ಹಿಡಿದುಕೊಂಡು ನನ್ನ ಮಗುವನ್ನು ರಕ್ಷಣೆ ಮಾಡು ಎಂದು ಕೇಳಿಕೊಳ್ಳುತ್ತಾರೆ. ಆಗ ಈ ವಿಭೂತಿಯನ್ನು ತೆಗೆದುಕೋ. ಇದನ್ನು ಆ ಮಗುವಿನ ಹುಣ್ಣಿಗೆ ಹಚ್ಚು ವಾಸಿಯಾಗುತ್ತದೆ ಎಂದು ಆಶ್ವಾಸನೆ ಕೊಡುತ್ತಾರೆ. ಅದನ್ನು ಸರಿಗಿನಲ್ಲಿ ಕಟ್ಟಿಕೊಳ್ಳುತ್ತಾರೆ. ಇದು ಕನಸಿನಲ್ಲಿ ನಡೆದಿದ್ದು. ಆದರೆ ಎಚ್ಚರವಾದಾಗ ಅವರ ಸೆರಗಿನಲ್ಲಿ ಗಂಟು ಇರುತ್ತೆ ಆದರೆ ವಿಭೂತಿ ಮಾತ್ರ ಇರಲಿಲ್ಲ. ತಕ್ಷಣವೇ ಹೋಗಿ ಮಗು ನೋಡುತ್ತಾರೆ ಆ ಕೆಟ್ಟ ಹುಣ್ಣು ಒಡೆದು ಹೋಗಿತ್ತಂತೆ. ಮಗು ಆರಾಮ್ ಆಗಿ ಮಲಗಿಕೊಂಡಿತ್ತಂತೆ. ಮುತ್ತತ್ತಿರಾಯನ ಕೃಪೆಯಿಂದ ಜನಿಸಿದ ಮಗುವಿಗೆ ಬಂದ ತೊಂದರೆ ಆತನಿಂದಲೇ ನಿವಾರಣೆ ಆಯ್ತು ಎಂದು ಲಕ್ಷ್ಮಮ್ಮನವರು ಹೇಳಿದ್ದರಂತೆ. ಈ ಘಟನೆಯನ್ನು ಹಿರಿಯ ಪತ್ರಕರ್ತ ಮಂಜುನಾಥ್ ವಿವರಿಸಿದ್ದಾರೆ.
ಯಾಕೆ ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಪತಿ ರಾಮ್‌ಕುಮಾರ್ ಸಿನಿಮಾ ಮಾಡಲಿಲ್ಲ ಅಂತ ಕೊನೆಗೂ ಸತ್ಯ ಬಿಚ್ಚಿಟ್ಟ ಪೂರ್ಣಿಮಾ!