ಭಾಗ್ಯವಂತರು, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಹೊಸ ಬೆಳಕು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. 'ಎಂದು ಹಾಡಿದ್ದೂ ಕೂಡ ಆಯ್ತು.. ಒಟ್ಟಿನಲ್ಲಿ...
ಡಾ ರಾಜ್‌ಕುಮಾರ್ (Dr Rajkumar) ವರು ತಮ್ಮ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ (Puneeth Rajkumar) ಮೇಲೆ ವಿಶೇಷ ಅಕ್ಕರೆ ಇಟ್ಟುಕೊಂಡಿದ್ದರು. ಸಹಜವಾಗಿಯೇ ಎಲ್ಲಾ ಅಪ್ಪ-ಅಮ್ಮಂದಿರು ಅವರ ಎಲ್ಲಾ ಮಕ್ಕಳ ಮೇಲೆ ವಿಶೇಷ ಪ್ರೀತಿ ಇಟ್ಟಕೊಂಡಿರುತ್ತಾರೆ. ಅದರಲ್ಲೂ , ಮುಖ್ಯವಾಗಿ ಕಿರಿಯ ಮಕ್ಕಳ ಮೇಲೆ ಪ್ರೀತಿ ಸಹಜ. ಅದರೆ, ಅದಕ್ಕಿಂತಲೂ ಮಿಗಿಲಾದ ಪ್ರೀತಿ ಡಾ ರಾಜ್‌ಕುಮಾರ್ ಅವರಿಗೆ ಪುನೀತ್ ಮೇಲೆ ಇತ್ತು ಎನ್ನಲಾಗಿದೆ ಅದಕ್ಕೆ ಕಾರಣವೂ ವಿಶೇಷವಾಗಿದೆ. ಅದೇನು ನೋಡಿ..
ಹೌದು, ಡಾ ರಾಜ್‌ಕುಮಾರ್ ಅವರು ಶಿವರಾಜ್‌ಕುಮಾರ್ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಆದರೆ, ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೇ ಪುನೀತ್ ಆಗಿ ಹುಟ್ಟಿದ್ದಾರೆ ಎಂದೇ ಡಾ ರಾಜ್‌ಕುಮಾರ್ ಅಂದುಕೊಂಡಿದ್ದರು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಅವರು ಕಳೆದುಕೊಂಡಿರುವ ಅಪ್ಪನ ಪ್ರೀತಿಯನ್ನು ತಮ್ಮ ಮಗ ಅಪ್ಪುವಿನಲ್ಲಿ ನೋಡುತ್ತಿದ್ದರು. ಆದ್ದರಿಂದ ಅವರು ಅಪ್ಪು ಚಿಕ್ಕವರಿದ್ದಾಗ ಅವರನ್ನು ಬಿಟ್ಟು ಇರುತ್ತಲೇ ಇರಲಿಲ್ಲ.
ಹೌದು, ಡಾ ರಾಜ್‌ಕುಮಾರ್ ಅವರು ತಮ್ಮ ಮಗ ಪುನೀತ್ ರಾಜ್‌ಕುಮಾರ್ ಅವರನ್ನು ತಮ್ಮ ತಂದೆ ಎಂದು ಭಾವಿಸಿದ್ದರಿಂದ ತಮ್ಮ ಜೊತೆಯಲ್ಲೆ ಯಾವತ್ತೂ ಇರಲಿ ಎನ್ನುತ್ತಿದ್ದರಂತೆ. ಆ ಕಾರಣಕ್ಕಾಗಿಯೇ 2 ತಿಂಗಳು ಇದ್ದಾಗಲೇ ಪುನೀತ್ ಅಪ್ಪಾಜಿಯ ಜೊತೆಯಲ್ಲಿ ಸಿನಿಮಾಕ್ಕೆ ಬಣ್ಣ ಹಚ್ಚಿದ್ದರು. ಆ ಬಳಿಕ ಕೂಡ ಪುನೀತ್‌ರನ್ನು ಯಾವತ್ತೂ ಶೂಟಿಂಗ್ ಸ್ಪಾಟ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು ಡಾ ರಾಜ್-ಪಾರ್ವತಮ್ಮ. ಈ ಕಾರಣಕ್ಕಾಗಿಯೇ ಅಪ್ಪು ಬಾಲ್ಯದಲ್ಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸುವಂತಾಗಿತ್ತು.
ಭಾಗ್ಯವಂತರು, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಹೊಸ ಬೆಳಕು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. 'ಎಂದು ಹಾಡಿದ್ದೂ ಕೂಡ ಆಯ್ತು.. ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಅವರಿಗೆ ಪುನೀತ್ ಮೇಲೆ ಈ ಕಾರಣದಿಂದ ಸ್ವಲ್ಪ ಹೆಚ್ಚಿನ ಪ್ರೀತಿ ಇತ್ತು ಎಂಬುದು ಜಗಜ್ಜಾಹೀರಾಗಿದೆ. ಈ ಸಂಗತಿಯನ್ನು ಸ್ವತಃ ರಾಘವೇಂದ್ರ ರಾಜ್‌ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
