ಯಾವ ದೇವರಿಗೆ ಯಾವ ಹೂವು ಅಚ್ಚುಮೆಚ್ಚು; ಪೂಜೆಗೆ ಯಾವುದು ಶ್ರೇಷ್ಠ..?
ಇನ್ನೇನು ಶ್ರಾವಣ ಮಾಸ ಆರಂಭವಾಗುತ್ತಿದ್ದು, ಎಲ್ಲೆಡೆ ಭಕ್ತಿಯ ಪರಾಕಾಷ್ಠೆ ಶುರುವಾಗಲಿದೆ. ವಿವಿಧ ಪೂಜೆಗಳು ನಡೆಯಲಿದ್ದು, ಯಾವ ದೇವರಿಗೆ ಯಾವ ಹೂವು ಶ್ರೇಷ್ಠ ಎಂಬ ಮಾಹಿತಿ ಇಲ್ಲಿದೆ.
ಇನ್ನೇನು ಶ್ರಾವಣ ಮಾಸ ಆರಂಭವಾಗುತ್ತಿದ್ದು, ಎಲ್ಲೆಡೆ ಭಕ್ತಿಯ ಪರಾಕಾಷ್ಠೆ ಶುರುವಾಗಲಿದೆ. ವಿವಿಧ ಪೂಜೆಗಳು ನಡೆಯಲಿದ್ದು, ಯಾವ ದೇವರಿಗೆ ಯಾವ ಹೂವು ಶ್ರೇಷ್ಠ ಎಂಬ ಮಾಹಿತಿ ಇಲ್ಲಿದೆ.
ದೇವರ ಪೂಜೆಯಲ್ಲಿ ಹೂವು ಇರಲೇಬೇಕು. ಹೂವು ಇರದ ಯಾವುದೇ ಪೂಜೆ ಅಪೂರ್ಣ. ಎಲ್ಲ ಹೂವುಗಳೂ ಸ್ವಭಾವತಃ ವಿಶೇಷವಾಗಿರುತ್ತವೆ. ಒಂದೊಂದರ ಸುಗಂಧ, ಬಣ್ಣ, ಗುಣ ಒಂದೊಂದು. ಕೆಲವು ರಾತ್ರಿ ಅರಳಿದರೆ, ಮತ್ತೆ ಕೆಲವು ಬೆಳಗ್ಗೆ ಅರಳುತ್ತವೆ. ದೇವರಿಗೂ ಕೆಲವೊಂದು ಹೂವುಗಳೆಂದರೆ ಹೆಚ್ಚೇ ಅಚ್ಚುಮೆಚ್ಚು. ನಿರ್ದಿಷ್ಠ ದೇವರ ದೈವೀಶಕ್ತಿ ನಿರ್ದಿಷ್ಟ ಹೂವುಗಳು ಹೀರಿಕೊಳ್ಳುತ್ತದೆ. ಹಾಗಿದ್ದರೆ, ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬ ಡೀಟೇಲ್ಸ್ ಇಲ್ಲಿದೆ.
ಹನುಮಂತ
ಆಂಜನೇಯನಿಗೆ ತುಳಸಿ ಹಾರ, ವಿಳ್ಯೆದೆಲೆ ಹಾರ, ಚಮೇಲಿ ಹೂವೆಂದರೆ ಇಷ್ಟ. ಇದಲ್ಲದೆ, ಶಕ್ತಿ ಹಾಗೂ ಧೈರ್ಯಕ್ಕೆ ಹೆಸರಾದವನು ಆಂಜನೇಯ. ಬಣ್ಣಗಳಲ್ಲಿ ಕೆಂಪು ಬಣ್ಣ ಈ ಗುಣಗಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ, ಕೆಂಪು ಬಣ್ಣದ ಹೂವುಗಳನ್ನೂ ಆಂಜನೇಯನಿಗೆ ಅರ್ಪಿಸಬಹುದು.
ಗಣೇಶ
ಗಣೇಶ ಪೂಜೆಯ ಸಂದರ್ಭದಲ್ಲಿ 21 ಬಗೆಯ ಹೂವುಪತ್ರೆಗಳನ್ನು ಬಳಸುವುದು ಶ್ರೇಷ್ಠ. ಅದರಲ್ಲೂ ಬಿಲ್ವ ಪತ್ರೆ, ಗರಿಕೆ ಹುಲ್ಲು, ಕೆಂಪು ದಾಸವಾಳವೆಂದರೆ ಗಣೇಶಗೆ ಅಚ್ಚುಮೆಚ್ಚು. ನಿತ್ಯ ಕನಿಷ್ಠ 6 ಗರಿಕೆ ಹುಲ್ಲು, ಉಳಿದಂತೆ ತುಳಸಿ ಹೊರತು ಪಡಿಸಿ ಗುಲಾಬಿ, ಮಲ್ಲಿಗೆ, ಚಂಪ ಸೇರಿದಂತೆ ಯಾವುದೇ ಹೂವನ್ನೂ ಗಣೇಶನಿಗೆ ಅರ್ಪಿಸಬಹುದು.
ವಿಷ್ಣು
ವಿಷ್ಣುವಿಗೆ ತಾವರೆ ಹಾಗೂ ತುಳಸಿ ಎಂದರೆ ಬಲು ಪ್ರೀತಿ. ಕೆಂಪು ತಾವರೆ, ಕೇವಾರ, ಚಂಪ, ಮಲ್ಲಿಗೆ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು. ರಾಮನಿಗೆ ಅರಳಿ ಹೂವೊಂದನ್ನು ಬಿಟ್ಟು ಬೇರೆಲ್ಲ ಇಡಬಹುದು. ಕೃಷ್ಣನಿಗೆ ಎಲ್ಲಕ್ಕಿಂತ ತುಳಸಿಯೇ ಸರ್ವಶ್ರೇಷ್ಠ. ಮಹಾಭಾರತದಲ್ಲೊಮ್ಮೆ ಕೃಷ್ಣನು ತನಗೆ ಮುತ್ತುಗ, ಕುಮುದ, ಮಾಲತಿ ಲತೆಗಳಿಷ್ಟ ಎಂಬ ಹೇಳುವ ಉಲ್ಲೇಖವೂ ಇದೆ.
ಶ್ರಾವಣದಲ್ಲಿ ಶಿವನಿಂದ ಬದಲಾಗುವುದು ಬದುಕು; ಈ ರಾಶಿಯವರೇ ಅದೃಷ್ಟವಂತರು..!
ಶಿವ
ಶಿವ ಅಥವಾ ಪರಮೇಶ್ವರನಿಗೆ ಬಿಲ್ವಪತ್ರೆ, ತುಂಬೆ ಹೂವು, ಕಣಗಿಲೆ ಹೂವು, ಲಿಂಗದ ಹೂವುಗಳು ಶ್ರೇಷ್ಠ. ಯಾವುದೇ ಬಿಳಿ ಹೂವು, ನೀಲಿ ತಾವರೆ, ದತ್ತೂರ, ನಾಗಕೇಸರಗಳು ಒಳ್ಳೆಯದು. ಆದರೆ, ಚಂಪ ಹಾಗೂ ಕೇತಕಿಯ ಹೂವು ಮಾತ್ರ ಶಿವನಿಗಿಡಬಾರದು. ಅವುಗಳು ಶಿವನಿಂದ ಶಾಪಗ್ರಸ್ಥವಾಗಿವೆ.
ಪಾರ್ವತಿ ದೇವಿ
ಪಾರ್ವತಿಗೆ ದಾಸವಾಳ, ಮಲ್ಲಿಗೆ, ಬಿಳಿ ತಾವರೆ ಹಾಗೂ ಚಂಪಕ ಪುಷ್ಪ ಎಂದರೆ ಪ್ರೀತಿ. ಉಳಿದಂತೆ, ಶಿವನಿಗೆ ಇಷ್ಟವಾದ ಹೂವೆಲ್ಲವೂ ಪಾರ್ವತಿಗೆ ಇಷ್ಟವೇ. ಅರ್ಕ ಹಾಗೂ ಆಮ್ಲವನ್ನು ಪಾರ್ತತಿಗೆ ಅರ್ಪಿಸಬಾರದು.
ಲಕ್ಷ್ಮಿ, ಸರಸ್ವತಿ ಹಾಗೂ ದುರ್ಗಾದೇವಿ
ಕಮಲ, ಸೇವಂತಿಗೆ, ಗುಲಾಬಿ ಬಣ್ಣದ ತಾವರೆ ಆಕೆಗೆ ಪ್ರಿಯವಾದ ಹೂವಾಗಿದೆ. ಪಾರಿಜಾತ ಹಾಗೂ ಬಿಳಿ ಕಮಲಕ್ಕೆ ಸರಸ್ವತಿ ಒಲಿಯುತ್ತಾಳೆ. ಇನ್ನು ದುರ್ಗಾ ದೇವಿಗೆ ಕೆಂಪು ಬಣ್ಣದ ಯಾವುದೇ ಹೂವಾಗಿದ್ದರೂ ಸರಿ ಬಲು ಇಷ್ಟ.
ಬೆಂಗಳೂರಿನ ಮಂದಿ ಕಾಲಿಗೆ ಕಪ್ಪು ದಾರ ಏಕೆ ಕಟ್ಟಿಕೊಳ್ಳುತ್ತಾರೆ? ಇಲ್ಲಿದೆ ಬಲವಾದ ನಂಬಿಕೆ..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.