Dr Rajkumar: ಅಣ್ಣಾವ್ರು ಅಗಲಿ ಇಂದಿಗೆ 17 ವರ್ಷ: ರಾಜ್‌ ಸರಳತೆಗೆ ಇದೊಂದು ಉದಾಹರಣೆ ಸಾಕು!

ಏಪ್ರಿಲ್ ತಿಂಗಳು ಬಂತು ಅಂದರೆ ಕನ್ನಡಿಗರ ಪಾಲಿಗೆ ಅಣ್ಣಾವ್ರ ತಿಂಗಳು. ಅಣ್ಣಾವ್ರ ಪುಣ್ಯತಿಥಿ ಇಂದು. ಈ ಹಿನ್ನೆಲೆಯಲ್ಲಿ ಅಣ್ಣಾವ್ರ ಸರಳತೆ, ಸಹೃದಯತೆಗೆ ಕೆಲವೊಂದು ಉದಾಹರಣೆ ಇಲ್ಲಿದೆ.

Dr Rajkumar death anniversary

ಏಪ್ರಿಲ್ 24 ಅಣ್ಣಾವ್ರ ಜನ್ಮದಿನ. ಇನ್ನು ಹನ್ನೆರಡು ದಿನ ಕಳೆದರೆ ಕನ್ನಡ ಸಿನಿಮಾ ಜಗತ್ತಿನ ದಂತಕತೆ, ನಟ ಸಾರ್ವಭೌಮ ಡಾ ರಾಜ್ ಜನ್ಮದಿನ. ಇಂದು ಅವರ ಪುಣ್ಯತಿಥಿ. ಅವರ ಜನ್ಮದಿನ, ಪುಣ್ಯತಿಥಿ ಎರಡೂ ಈ ತಿಂಗಳಲ್ಲೇ ಇದೆ. ಹಾಗಾಗಿ ಕನ್ನಡಿಗರಿಗೆ ಇದೊಂದು ಸಿಹಿ ಕಹಿಯ ತಿಂಗಳೂ ಹೌದು. ಅಂದಹಾಗೆ ಅಣ್ಣಾವ್ರು ತೀರಿಕೊಂಡದ್ದು ತಮ್ಮ ೭೬ನೇ ವಯಸ್ಸಿಗೆ. ಕನ್ನಡ ಚಿತ್ರರಂಗವನ್ನು ಆಳಿದ ಈ ಮಹಾನ್ ನಟ ನಟನೆ ಎಷ್ಟು ಅದ್ಭುತವೋ ಅವರ ಗುಣ, ಸರಳತೆಗಳೂ ಅಷ್ಟೇ ಜನಜನಿತ. ಅವರ ಬದುಕೇ ಹಲವರಿಗೆ ಪಾಠ. ಮಗುವಿನಂತೆ ಮುಗ್ಧ, ಅಭಿಮಾನಿಗಳನ್ನು ದೇವರು ಎಂದೇ ಭಾವಿಸಿ ಅವರನ್ನು ಗೌರವಿಸುತ್ತಿದ್ದ ರೀತಿಗೆ ಮಾರು ಹೋಗದವರಿಲ್ಲ. ಅಣ್ಣಾವ್ರ ಪುಣ್ಯ ತಿಥಿಯಂದು ಅವರ ಕೆಲವು ಅಪರೂಪದ ಗುಣ, ಸ್ವಭಾವ, ಅವರು ಹಿರಿಯರನ್ನು ಗೌರವಿಸುತ್ತಿದ್ದ ಬಗೆಯ ಬಗ್ಗೆ ಒಂದು ಉದಾಹರಣೆ ಇದೆ.

ಸಾಗರ ಸಂಗಮಂನಂಥಾ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಕೆ ವಿಶ್ವನಾಥ್ ಅಂದರೆ ಎಂಭತ್ತು, ತೊಂಭತ್ತರ ದಶಕದಲ್ಲಿ ಮನೆಮಾತು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಈ ನಿರ್ದೇಶಕ ಅಂದರೆ ಬಾಲಿವುಡ್ ಮಂದಿಯೂ ನಿಬ್ಬೆರಗಾಗಿ ಇವರ ಸಿನಿಮಾ ನಿರ್ದೇಶನದ ಟ್ಯಾಲೆಂಟ್ ಗೆ ಮಾರು ಹೋಗುತ್ತಿದ್ದರು. ಇವರು ನಿಧನರಾಗಿದ್ದು ಫೆ. 2ರಂದು. ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರ ಸಂಗಮಂ, ಸ್ವಯಂ ಕೃಷಿ, ಆಪದ್ಬಾಂಧವುಡು… ಹೀಗೆ, ಒಂದಕ್ಕಿಂತ ಒಂದು ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ನೀಡಿದ, ಕಮಲ ಹಾಸನ್, ಚಿರಂಜೀವಿಯಂಥ ಕಲಾವಿದರ ವೃತ್ತಿಜೀವನಕ್ಕೆ ದೊಡ್ಡ ತಿರುವುಗಳನ್ನು ನೀಡಿದ ನಿರ್ದೇಶಕ ಇವರು. ಕೆ. ವಿಶ್ವನಾಥ್ ಅವರ ಸಿನಿಮಾ ಬರುತ್ತಿದೆ ಎಂದರೆ ಸಾಕು ಅವತ್ತಿನ ಕಾಲಕ್ಕೆ ಅದೊಂದು ದೊಡ್ಡ ಟ್ರೆಂಡ್. ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಹಿಡಿದು 100 ದಿನಗಳು ಪೂರೈಸುವವರೆಗೂ ಚಿತ್ರಮಂದಿರಗಳು ಕಿಕ್ಕಿರಿದ ಪ್ರೇಕ್ಷಕರಿಂದ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದ್ದವು.

ತಮಿಳು- ತೆಲುಗು ಸಿನಿಮಾ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಿರುತ್ತಿತ್ತು: ನಟ ರಮೇಶ್ ಅರವಿಂದ್ ಶಾಕಿಂಗ್ ಹೇಳಿಕೆ

ಇಂಥಾ ಮಹಾನ್ ನಿರ್ದೇಶಕರು ಅಂದರೆ ಡಾ ರಾಜ್ ಅವರಿಗೆ ತುಂಬು ಗೌರವ. ತನ್ನ ಮನೆಗೆ ಬರಬೇಕೆಂದು ಬಹಳ ಸಲ ಆಹ್ವಾನಿಸಿದ್ದರು. ಅದಕ್ಕೆ ವಿಶ್ವನಾಥ್‌ ಅವರು ಒಪ್ಪಿದ್ದರೂ ಬಹಳ ಕಾಲ ಡಾ ರಾಜ್ ಮನೆ ಭೇಟಿ ಸಾಧ್ಯ ಆಗಿರಲಿಲ್ಲ. ಅದೊಂದು ದಿನ ಬೆಂಗಳೂರಿಗೆ ಬಂದಿದ್ದ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ತಮ್ಮ ಕೆಲಸಗಳ ನಡುವೆ ಸುಮಾರು 2 - 3 ಗಂಟೆಗಳ ಕಾಲ ಬಿಡುವು ಸಿಕ್ಕಿತ್ತು. ತಾವು ಇಳಿದುಕೊಂಡಿದ್ದ ಹೋಟೆಲಿಗೆ ಹೋಗಿ ರೆಸ್ಟ್(Rest) ಮಾಡೋಣ ಅಂದುಕೊಂಡ ಅವರಿಗೆ ಥಟ್ಟನೆ ನೆನಪಾಗಿದ್ದು ಡಾ. ರಾಜ್ ಕುಮಾರ್. ಡಾ. ರಾಜ್ ಅವರನ್ನು ನೋಡುವ ಮನಸ್ಸಾಯಿತು. ತಕ್ಷಣ ತಮ್ಮ ಕಾರು ಚಾಲಕನಿಗೆ ಡಾ. ರಾಜ್ ಕುಮಾರ್ ಅವರ ಮನೆಗೆ ಕರೆದುಕೊಂಡು ಹೋಗಪ್ಪಾ ಎಂದು ಕೇಳಿಕೊಂಡರು. ಅದರಂತೆ, ಕಾರು ಚಾಲಕ , ಸದಾಶಿವ ನಗರದಲ್ಲಿದ್ದ ಡಾ. ರಾಜ್ ಕುಮಾರ್ ಅವರ ಮನೆಯ ಮುಂದೆ ತಂದು ನಿಲ್ಲಿಸಿದರು.

ಅವತ್ತು ಡಾ. ರಾಜ್ ಅವರು ಮನೆಯಲ್ಲೇ ಒಳಗಡೆ ಇದ್ದರು. ಖುದ್ದು ಕಾರಿನಿಂದ ಇಳಿದು ಗೇಟ್ ನ ಬಳಿ ಬಂದ ವಿಶ್ವನಾಥ್, ಡಾ. ರಾಜ್ ಕುಮಾರ್ ಇದ್ದಾರಾ ಎಂದು ಕೇಳಿದರು. ಆತನಿಗೆ ಏನನ್ನಿಸಿತೋ ಏನೋ, ರಾಜ್ ಅವರು ಇಲ್ಲ ಎಂದು ಹೇಳಿಬಿಟ್ಟ. ಆಗ, ಅವರು ತಮ್ಮ ಪರಿಚಯ ಮಾಡಿಕೊಂಡು, 'ನಾನು ಹೈದರಾಬಾದ್ ನಿಂದ ಬಂದಿದ್ದೇನೆ ಅವರನ್ನು ನೋಡಲು. ಅವರು ಎಷ್ಟೊತ್ತಿಗೆ ಬರ್ತಾರೆ ಅಂತ ಒಳಗೆ ಹೋಗಿ ಕೇಳಿ. ನಾನು ತೆಲುಗು ನಿರ್ದೇಶಕ ಕೆ. ವಿಶ್ವನಾಥ್ ಅಂತ ಹೇಳಿ ಅವರಿಗೆ ಗೊತ್ತಾಗುತ್ತೆ' ಅಂತ ತೆಲುಗು ಮಿಶ್ರಿತ ಕನ್ನಡದಲ್ಲಿ ಹೇಳಿದರು. ಆದರೂ, ಕಾವಲುಗಾರ ಅವರನ್ನು ಮನೆಯ ಒಳಕ್ಕೆ ಬಿಡಲು ಮನಸ್ಸು ಮಾಡಲಿಲ್ಲ. 'ಇವತ್ತು ಅವರಿಲ್ಲ. ನೀವು ಇನ್ನೊಂದು ದಿನ ಬನ್ನಿ' ಎಂದು ಹೇಳಿದ.

ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದ ಕಿಚ್ಚ ಸುದೀಪ್

ಅಷ್ಟೊತ್ತಿಗೆ ಅತ್ತ ತಮ್ಮ ಬಂಗಲೆಯ ಬಾಲ್ಕನಿಗೆ ಬಂದ ಡಾ. ರಾಜ್ ಅವರಿಗೆ ತಮ್ಮ ಮನೆಯ ಗೇಟ್ ಬಳಿ ಯಾರೋ ಏನೋ ಮಾತನಾಡುತ್ತಿದ್ದುದು ಕಂಡುಬಂತು. ನೋಡಿದರೆ ವಿಶ್ವನಾಥ್. ಗಡಿಬಿಡಿಯಲ್ಲಿ ಮನೆಯೊಳಗಿನ ಮೆಟ್ಟಿಲಿಳಿದು ಗೇಟ್ ನ ಬಳಿ ಧಾವಿಸಿ ಬರುತ್ತಿದ್ದಂತೆ ಇತ್ತ ವಿಶ್ವನಾಥ್ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾರು ಹತ್ತಿಯೇ ಬಿಟ್ಟರು. ಸ್ವಲ್ಪ ಟ್ರಾಫಿಕ್ (Trafic)ಇದ್ದಿದ್ದರಿಂದ ಕಾರು ನಿಧಾನವಾಗಿ ಚಲಿಸತೊಡಗಿತು. ಇನ್ನೂ ಕಾರ್ (Car)ಸನಿಹದಲ್ಲೇ ಇರುವುದನ್ನು ಗಮನಿಸಿದ ಡಾ. ರಾಜ್ ಖುದ್ದಾಗಿ ತಾವೇ ಕಾರಿನ ಹಿಂದೆ ಓಡಿ ಹೋದರು.

ಹೀಗೆ ಸುಮಾರು ದೂರ ಓಡಿದ ಡಾ. ರಾಜ್ ಕಡೆಗೂ ಕಾರನ್ನು ನಿಲ್ಲಿಸುವಲ್ಲಿ ಸಫಲರಾದರು. ಡಾ. ರಾಜ್ ಅವರನ್ನು ನೋಡಿ ಅಚ್ಚರಿಗೊಂಡು ಕಾರಿನಿಂದ ಇಳಿದ ವಿಶ್ವನಾಥ್ ಅವರಿಗೆ ರಾಜ್ ಅವರು, ಕಾವಲುಗಾರನಿಂದ ಆದ ಅಚಾತುರ್ಯವನ್ನು ಅವರಿಗೆ ಹೇಳಿ, ನಡುರಸ್ತೆಯಲ್ಲೇ ಕೈ ಮುಗಿದು ಕ್ಷಮೆ(Sorry) ಕೋರಿದರು. ಮುಂದೆ ಆದರದಿಂದ ಸತ್ಕರಿಸಿ ಬೀಳ್ಕೊಟ್ಟರು. ಇದನ್ನು ಹಿರಿಯ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಬಳಿ ವಿಶ್ವನಾಥ್ ಹೇಳಿದ್ದರು. ಇದನ್ನು ಎಸ್‌ಪಿಬಿ(S P Balasubrahmanya) ಅವರೇ ಒಂದು ಕಡೆ ಉಲ್ಲೇಖಿಸಿದ್ದರು.

Latest Videos
Follow Us:
Download App:
  • android
  • ios