ಕಾಶ್ಮೀರ ಪ್ರವಾಸದಲ್ಲಿ ಡಾಲಿ ಧನಂಜಯ ಹಾಗೂ ರೆಬಾ.  ಈ ಜೋಡೀಯ ಸೆಲ್ಫೀ ಹಾಗೂ ಚಿತ್ರೀಕರಣದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

'ಟಗರು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಿದ ನಟ ಡಾಲಿ ಧನಂಜಯ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಅವುಗಳಲ್ಲಿ 'ರತ್ನ ಪ್ರಪಂಚ' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಕಾಶ್ಮೀರಕ್ಕೆ ಪ್ರಯಾಣ ಮಾಡಿದ್ದಾರೆ. ನಟಿ ರೆಬಾ ಹಾಗೂ ಧನಂಜಯ ಸೋಷಿಯಲ್ ಮೀಡಿಯಾದಲ್ಲಿ ಕಾಶ್ಮೀರ ಹೇಗಿದೆ ಎಂದು ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ.

ನಟನ ಹೆಸರಲ್ಲಿ ವಂಚಿತರಾಗಬೇಡಿ, ಇಲ್ಲ ಯಾವ ಆಡಿಷನ್‌ ನಡೆಯುತ್ತಿಲ್ಲ! 

ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡಿರುವ ತಂಡ, ಎರಡನೇ ಹಂತವನ್ನು ಕಾಶ್ಮೀರದಲ್ಲಿ ಮಾಡುತ್ತಿದೆ. ನಿರ್ದೇಶಕ ರೋಹಿತ್ ಪದಕಿ ಸಾರಥ್ಯದಲ್ಲಿ ಸಿನಿಮಾ ಡಿಫರೆಂಟ್ ಆಗಿ ಮೂಡಿ ಬರುವುದರಲ್ಲಿ ಅನುಮಾನವೇ ಇಲ್ಲ. 

'ರತ್ನನ್ ಪ್ರಪಂಚ' ಚಿತ್ರದಲ್ಲಿ ಬಿಗಿಲ್ ಚಿತ್ರದ ನಟಿ! 

'ಪದಗಳಲ್ಲಿ ವರ್ಣಿಸಲು ಅಸಾಧ್ಯ ಈ ಸುಂದರವಾದ ಸ್ಥಳವನ್ನು. ಶ್ರೀನಗರ ಭೂಮಿ ಮೇಲಿರುವ ಸ್ವರ್ಗ,' ಎಂದು ರೆಬಾ ಬರೆದುಕೊಂಡಿದ್ದಾರೆ. ಅಂದ ಹಾಗೆ ಚಿತ್ರದಲ್ಲಿ ಡಾಲಿ ಇನ್ಶೂರೆನ್ಸ್‌ ಏಜೆಂಟ್‌ ಪಾತ್ರ ನಿರ್ವಹಿಸಲಿದ್ದಾರೆ. ಪಾತ್ರದ ಹೆಸರು ರತ್ನಾಕರ ಆಗಿದ್ದು, ಹಿರಿಯ ನಟಿ ಉಮಾಶ್ರೀ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

View post on Instagram