ನಿರ್ದೇಶಕ ಕಮ್‌ ನಾಯಕ ನಟ ಅಶುಬೆದ್ರ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಬೆಂಗಳೂರು ಭೂಗತ ಲೋಕದ ಡಾನ್‌ ಜೈರಾಜ್‌ ಬದುಕಿನ ಕತೆಯನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಚಿತ್ರಕತೆ ಹಾಗೂ ಸಂಭಾಷಣೆ ಬರೆಯುವ ಮೂಲಕ ನಾಲ್ಕು ವರ್ಷಗಳ ಗ್ಯಾಪ್‌ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹಾಗೆಯೇ ಡಾಲಿ ಖ್ಯಾತಿಯ ನಟ ಧನಂಜಯ್‌, ಡಾನ್‌ ಜೈರಾಜ್‌ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಅಶುಬೆದ್ರ ವೆಂಚರ್ಸ್‌ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಯುವ ಪ್ರತಿಭೆ ಶೂನ್ಯ ನಿರ್ದೇಶಕರು. ಉಳಿದ ಕಲಾವಿದರು, ತಂತ್ರಜ್ಞರ ಮಾಹಿತಿ ಇಷ್ಟರಲ್ಲಿಯೇ ಬಹಿರಂಗವಾಗಲಿದೆ. ಚಿತ್ರತಂಡದ ಮಾಹಿತಿ ಪ್ರಕಾರ ಜೂನ್‌ ಮೊದಲ ವಾರದಿಂದ ಚಿತ್ರಕ್ಕೆ ಶೂಟಿಂಗ್‌ ಶುರು. ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ.

ಶುರುವಾಯ್ತು ಡಾಲಿ ಧನಂಜಯ್ ಹವಾ! ಎಲ್ಲೇ ನೋಡಿದ್ರೂ ಅವರದೇ ಕವನ

‘ ನಾವಿಲ್ಲಿ ಹೇಳ ಹೊರಟಿದ್ದು 70 ಹಾಗೂ 80 ದಶಕದೊಳಗಿನ ಜೈರಾಜ್‌ ಬದುಕಿನ ಕತೆ. ಅದು ಅನೇಕ ಕಾರಣಕ್ಕೆ ಹೆಚ್ಚು ಮಹತ್ವ ಪಡೆದಿದೆ. ತುರ್ತು ಪರಿಸ್ಥಿತಿ, ದೇವರಾಜ್‌ ಅರಸು ಆಳ್ವಿಕೆಯ ದಿನಗಳಲ್ಲಿ ಜೈರಾಜ್‌ ಹೇಗಿದ್ದ ಎನ್ನುವುದನ್ನು ಇಲ್ಲಿ ಫೋಕಸ್‌ ಮಾಡುತ್ತಿದ್ದೇವೆ. ಇದು ಕಾಲಕ್ಕೆ ತಕ್ಕಂತೆ ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಲಿದೆ.-ಅಗ್ನಿ ಶ್ರೀಧರ್‌, ಪತ್ರಕರ್ತ

‘ಅಳಿದು ಉಳಿದವರು’ ಚಿತ್ರದ ನಂತರ ಪಕ್ಕಾ ಕಮರ್ಷಿಯಲ್‌ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೆ. ಅದಕ್ಕೆ ಪೂರಕವಾದ ಕತೆಗಳ ಹುಡುಕಾಟದಲ್ಲಿದ್ದೆ. ಆಗ ನನಗೆ ಸಿಕ್ಕವರು ನಿರ್ದೇಶಕ ಶೂನ್ಯ. ಅವರು ಪತ್ರಕರ್ತ ಅಗ್ನಿ ಶ್ರೀಧರ್‌ ಬಳಿ ಚರ್ಚಿಸಿ, ಸಿನಿಮಾಕ್ಕೊಂದು ಕತೆ ಬೇಕೆಂದು ಮನವಿ ಮಾಡಿದ್ದರು. ಆದ್ರೆ ಅವರು ಆರಂಭದಲ್ಲಿ ಒಪ್ಪಿರಲಿಲ್ಲ. ಒಂದು ರೀತಿ ಒತ್ತಾಯದ ಮೂಲಕ ಈ ಸಿನಿಮಾಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಹಾಗೆಯೇ ಸಾಕಷ್ಟುಆಸಕ್ತಿ ತೋರಿದ್ದಾರೆ. ಖುಷಿ ಆಗಿದೆ. ಹಾಗೆಯೇ ಒಳ್ಳೆಯ ತಂಡವೇ ಸಿಕ್ಕಿದೆ ’ಎನ್ನುತ್ತಾರೆ ಅಶುಬೆದ್ರ.

"

10 ವರ್ಷದ ಸಂಭ್ರಮ;ಸೋತು ಕೂತಿದ್ದ ಹುಡುಗ ಗೆದ್ದು ಬೀಗಿದ ಸ್ಫೂರ್ತಿ ಕಥೆ!

ನಾನು ಅಗ್ನಿಶ್ರೀಧರ್‌ ಬರವಣಿಗೆಯ ಅಭಿಮಾನಿ. ಎದೆಗಾರಿಕೆ ಪುಸ್ತಕವನ್ನು ಹಲವು ಸಲ ಒದಿದ್ದೇನೆ. ಅವರ ಬರೆದ ಕತೆಯಲ್ಲಿ ಅಭಿನಯಿಸುವ ಅವಕಾಶ ಅಂದಾಗ ಖುಷಿಯಲ್ಲಿ ಒಪ್ಪಿಕೊಂಡೆ. ಆದರೂ ಜೈರಾಜ್‌ ಪಾತ್ರ ಸವಾಲಿನ ಪಾತ್ರವೇ. ಒಂದಷ್ಟುಸಿದ್ಧತೆ ಬೇಕು. - ಧನಂಜಯ್‌, ನಟ