ಇತ್ತೀಚೆಗೆ ಸಖತ್ತಾಗೇ ಸುದ್ದಿಯಲ್ಲಿರೋ ಹೆಸ್ರು ಸ್ಯಾಂಡಲ್‌ವುಡ್ ನ ಆಂಗ್ರಿ ಯಂಗ್ ಮ್ಯಾನ್ ಡಾಲಿ ಧನಂಜಯ್ ಅವರದ್ದು. ಕೊರೋನಾ ಲಾಕ್ ಡೌನ್ ಟೈಮ್‌ನಲ್ಲಿ ಬಡವರ ಮನೆ ಮನೆಗೆ ಹೋಗಿ ದಿನಸಿ ಹಂಚಿದ್ರು, ಆಮೇಲೆ ಏನೋ ಹೇಳೋದಕ್ಕೆ ಹೋಗಿ ಮತ್ತೇನೋ ಹೇಳಿ ಯಡವಟ್ಟಲ್ಲಿ ಸಿಕ್ಕಾಕ್ಕೊಂಡ್ರು. ಅವರ ಮಾತು ವಿವಾದದ ರೂಪ ಪಡೆದು ಸಿಕ್ಕ್ ಸಿಕ್ಕೋರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಶುರು ಹಚ್ಚಿದಾಗ, ನನ್ನ ಬಿಟ್ ಬಿಡ್ರಯ್ಯಾ ಅಂತ ಅಲವತ್ತುಕೊಂಡ್ರು. ಹಿಂದಿ ದಿವಸ್ ಟೈಮ್ನಲ್ಲಿ ಕನ್ನಡ ಟೀ ಶರ್ಟ್ ಹಾಕ್ಕೊಂಡು ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ರು. ಆಮೇಲೆ ರೈತ ಪರವಾದ ಮಾತುಗಳನ್ನೂ ಆಡಿದ್ರು. ಇಷ್ಟೆಲ್ಲ ಆದ್ಮೇಲೆ 'ಬುದ್ಧಿಜೀವಿ ನಟ' ಅನ್ನೋ ಟ್ಯಾಗ್ ಲೈನ್ ಬೀಳ್ದೇ ಇರುತ್ತಾ? ಈಗ ಅಂಥದರ ಬಗೆಗೆಲ್ಲ ಡಾಲಿ ತಲೆ ಕೆಡಿಸಿಕೊಳಲ್ಲ. ಹಿಂದೊಮ್ಮೆ ತಾನು ಹೀಗೆಲ್ಲ ಮಾತಾಡಿದ್ರೆ ಸಿನಿಮಾ ಫೀಲ್ಡ್‌ನಲ್ಲಿ ತನ್ನ ಭವಿಷ್ಯ ಏನಾಗಬಹುದೋ ಅಂತ ಡಾಲಿ ತುಸು ಆತಂಕ ಪಟ್ಟಿದ್ರು. ಆದರೆ ಈಗ ಆ ಟೆನ್ಶನ್ ಇಲ್ಲ. ಕೈ ತುಂಬಾ ಚಿತ್ರಗಳಿವೆ. ರಚಿತಾ ರಾಮ್ ಜೊತೆಗೊಂದು ಸಿನಿಮಾ, ಮಲೆಯಾಳದಲ್ಲೊಂದು ಸಿನಿಮಾ, ಅಗ್ನಿ ಶ್ರೀಧರ್ ಜೊತೆಗೊಂದು ರೌಡಿಸಂ ಕಥಾಹಂದರದ ಮೂವಿ, ಜೊತೆಗೆ ರತ್ನನ್ ಪರ್ಪಂಚ... ಹೀಗೆ ಒಂದಲ್ಲ ಎರಡಲ್ಲ ಹಲವು ಚಿತ್ರಗಳು. ಈ ಹೊತ್ತಿನ ಬ್ಯುಸಿಯೆಸ್ಟ್ ನಟನಾಗಿ ಧನಂಜಯ್ ಹೊರಹೊಮ್ಮಿದ್ದಾರೆ. 

ಮೇಘನಾ ರಾಜ್ ಸೀಮಂತ ಸಂಭ್ರಮ: ಇಲ್ಲಿದೆ ವಿಡಿಯೋ ...

ಡಾಲಿ ಸಂವೇದನಾ ಶೀಲ ಹೇಳಿಕೆ ನೀಡೋದ್ರಲ್ಲೂ ಎತ್ತಿದ ಕೈ. ಇತ್ತೀಚೆಗೆ ಹಿರಿಯ ಪೋಷಕ ನಟರೊಬ್ಬರು ನಿಧನರಾದಾಗ ಅವರು ಹಾಕಿದ ಪೋಸ್ಟ್ ಸಖತ್ ವೈರಲ್ ಆಗಿತ್ತು. ಉಳಿದ ಕೆಲವು ಸನ್ನಿವೇಶಗಳಲ್ಲೂ ಅವರ ಸ್ಟೇಟ್ ಮೆಂಟ್ ಗಳು ಯಾವ ಡೈಲಾಗ್ ರೈಟರ್ಅನ್ನೂ ಮೀರಿಸೋ ಲೆವೆಲ್‌ನಲ್ಲಿದ್ದವು. ಬಹುಶಃ ಒಂದಾನೊಂದು ಕಾಲದಲ್ಲಿ ನಟನೆಯ ಅವಕಾಶಗಳು ಕೊಂಚ ಕಡಿಮೆ ಆದರೆ ಧನಂಜಯ್ ಸ್ಕ್ರಿಪ್ಟಿಂಗ್ ಗೆ ಇಳಿದರೂ ಗೆಲ್ಲಬಹುದು ಅನಿಸುತ್ತೆ. 

ಆದರೆ ಹೀಗೆಲ್ಲ ಡೈಲಾಗ್ ಹೊಡೆಯೋ ನಟ ಈವರೆಗೆ ಕನ್ನಡ ಚಿತ್ರರಂಗದಲ್ಲಿ ಶುದ್ಧ ಚಾರಿತ್ರ್ಯಕ್ಕೂ ಫೇಮಸ್. ಹುಡುಗೀರ ಜೊತೆಗೆ ಪಾರ್ಟಿ ಮಾಡಿಯೋ, ನಟಿ ಜೊತೆಗೆ ಡೇಟಿಂಗ್ ಮಾಡಿಯೋ ಸುದ್ದಿಯಾದದ್ದಿಲ್ಲ. ಮೊನ್ನೆ ಮೊನ್ನೆ ರಚಿತಾ ರಾಮ್ ಬರ್ತ್ ಡೇ ಗೆ ವಿಶ್ ಮಾಡಿದ್ದು ಬಿಟ್ಟರೆ ಬೇರಲ್ಲೂ ಹುಡುಗೀರ ಬಗ್ಗೆ ಒಂದ್ ಮಾತು ಅಂದಿದ್ದು ಕನ್ನಡಿಗರ ಗಮನಕ್ಕಂತೂ ಬಂದಿಲ್ಲ. 

ಕುರೂಪಿ ಎಂದಿದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋಲ್ಲ ಶಾರುಖ್ ಮಗಳು! ...

ಇಂತಿಪ್ಪ ಡಾಲಿ ಧನಂಜಯ್ ವಯಸ್ಸು ಮೂವತ್ತೈದು ದಾಟಿದರೂ ಯಾಕೆ ಯಾವ ಹುಡುಗಿಯ ಹಿಂದೆಯೂ ಬಿದ್ದಿಲ್ಲ? ಅವರಿಗೆ ನಿಜಕ್ಕೂ ಗರ್ಲ್ ಫ್ರೆಂಡ್ ಯಾರೂ ಇಲ್ವಾ ಅಥವಾ ಅಂಥದ್ದನ್ನೆಲ್ಲ ಗುಟ್ಟಾಗಿಟ್ಟಿದ್ದಾರಾ? ಈ ಪ್ರಶ್ನೆ ಹಲವರದು. ಅದಕ್ಕೆ ಸರಿಯಾಗಿ ಹುಡುಗಿ, ಗರ್ಲ್ ಫ್ರೆಂಡ್ ಅನ್ನೋ ಮಾತೆಲ್ಲ ಬಂದ ಕೂಡಲೇ ಈ ಮಂಕಿ ಸೀನ ನಾಚಿ ನೀರಾಗ್ತಾರೆ. ಬೇರೆಲ್ಲೋ ಮಾತು ಹಾರಿಸ್ತಾರೆ. ಅಷ್ಟರ ಮೇಲೂ ಪ್ರಶ್ನೆ ಮಾಡಿದ್ರೆ, ಅಪ್ಪ ಅಮ್ಮನತ್ರನೇ ಮಾತಾಡಿ ಅಂತ ಈ ವಿಷಯಕ್ಕೇ ಫುಲ್ ಸ್ಟಾಪ್ ಇಟ್ಟು ಬಿಡ್ತಾರೆ. ತಾನು ಈ ವಿಚಾರವನ್ನೆಲ್ಲ ಹೇಳಿದ್ರೆ ಮಹಿಳಾ ಅಭಿಮಾನಿಗಳಿಗೆ ಎಲ್ಲಿ ಬೇಜಾರಾಗಿ ಬಿಡಬಹುದೋ ಅನ್ನುವ ಯೋಚ್ನೆ ಇವರಿಗೆ ಇದ್ದರೂ ಇರಬಹುದು. ಅದೇನೇ ಆದ್ರೂ ಅವರ ಹುಡುಗಿಯ ವಿಚಾರ ಬೇಗ ಹೊರಬರಲಿ. ಇನ್ನೂ ಯಾವ ಹುಡುಗಿಯೂ ಮನಸ್ಸಿಗೆ ಬಂದಿಲ್ಲ ಅಂದರೆ ಅವರಿಗೊಬ್ಬ ಚಂದದ ಅನುರೂಪಳಾದ ಹುಡುಗಿ ಸಿಗಲಿ ಅನ್ನೋ ಹಾರೈಕೆ ಕನ್ನಡಿಗರದ್ದು. 

ಐಶ್ವರ್ಯಾ ರೈ, ಸುಷ್ಮಿತಾ ಸೇನ್ ಯಾರು ಹೆಚ್ಚು ಶ್ರೀಮಂತರು? ...

"