‘ಸಿನಿಮಾದಲ್ಲಿ ಮಾಸ್ ಶಾಶ್ವತ ಕ್ಲಾಸ್ ಅನ್ನೋದಿಲ್ಲ. ಮಾರ್ನಿಂಗ್ ಶೋ ಭರ್ತಿ ಆದ್ರೆ ಸಿನಿಮಾ ಎದ್ದೇಳುತ್ತೆ ಅಂತ ಅರ್ಥ.’
‘ಸಿನಿಮಾದಲ್ಲಿ ಮಾಸ್ ಶಾಶ್ವತ ಕ್ಲಾಸ್ ಅನ್ನೋದಿಲ್ಲ. ಮಾರ್ನಿಂಗ್ ಶೋ ಭರ್ತಿ ಆದ್ರೆ ಸಿನಿಮಾ ಎದ್ದೇಳುತ್ತೆ ಅಂತ ಅರ್ಥ.’
- ಎಂದು ‘ಗರಡಿ’ ಸಿನಿಮಾದ ‘ಹೊಡೀರಲೆ ಹಲಿಗಿ’ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಯೋಗರಾಜ ಭಟ್ಟರು ಮಾತನಾಡಿದರು.
ಭಟ್ಟರ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದು ಥ್ರಿಲ್ಲಿಂಗ್ ಅನುಭವ: ನಿಶ್ವಿಕಾ ನಾಯ್ಡು
‘ನಾವು ರೊಚ್ಚಿಗೆದ್ದು ತುಂಬ ದಿನ ಆಯ್ತು. ಇನ್ನೇನಿದ್ದರೂ ಮಾಸ್ ಸಿನಿಮಾ. ಆದರೆ ಎಲ್ಲರೂ ಹೇಳುವಂಥಾ ಸೋ ಕಾಲ್ಡ್ ಕ್ಲಾಸ್ ಸಿನಿಮಾದಲ್ಲೂ ಮಾಸ್ ಅಂಶಗಳಿರುತ್ತವೆ. ಮಾಸ್ ಸಿನಿಮಾ ಅನ್ನೋದರಲ್ಲಿ ಕ್ಲಾಸ್ ಗುಣಗಳಿರುತ್ತವೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಏಕಲವ್ಯನಂತೆ ಕುಸ್ತಿ ಕಲಿಯುವ ಶಿಷ್ಯ, ಆತನ ವಿರುದ್ಧ ನಿಲ್ಲುವ ಗುರು, ಕುಸ್ತಿ ಸಮಾಜದ ಸಂಬಂಧ, ಗುರು ಶಿಷ್ಯ ಸಂಬಂಧ ಇತ್ಯಾದಿ ಅಂಶಗಳ ಬಗ್ಗೆ ಸಿನಿಮಾವಿದೆ. ನಿರ್ಮಾಪಕ, ನಟ ಬಿ ಸಿ ಪಾಟೀಲ್ ಉತ್ತರ ಕರ್ನಾಟಕದ ಹಲಿಗೆ ಬೀಟ್ಸ್ ಕೇಳಿಸಿದ್ದೇ ಈ ಹಲಿಗೆ ಹಾಡು ಬರೆಯಲು ಪ್ರೇರಣೆ. ಉತ್ತರ ಕರ್ನಾಟಕದ ಗಾಯಕಿ ಮೇಘನಾ ಹಳಿಯಾಳ್ ಸೊಗಸಾಗಿ ಹಾಡಿದ್ದಾರೆ’ ಎಂದರು.
Yogaraj Bhat: ಬಿ.ಸಿ.ಪಾಟೀಲ್ ಮತ್ತೆ ಸಿನಿಮಾದಲ್ಲಿ ನಟನೆ
ನಾಯಕ ಯಶಸ್ ಸೂರ್ಯ ಭಟ್ಟರೊಂದಿಗಿನ ಶೂಟಿಂಗ್ ರಸ ಘಳಿಗೆಗಳನ್ನು ಹಂಚಿಕೊಂಡರು. ಬಿ ಸಿ ಪಾಟೀಲ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸೋನಾಲ್ ಮೊಂತೆರೋ ನಾಯಕಿ. ಈ ಹಾಡಿಗೆ ಹೆಜ್ಜೆ ಹಾಕಿದ ನಿಶ್ವಿಕಾ ನಾಯ್ಡು, ಕಲಾವಿದರಾದ ಸುಜಯ್, ಧರ್ಮಣ್ಣ ಕಾಡೂರು, ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.
