ಬೆಂಗಳೂರು (ಏ. 15):  ಇಂದು 2018-19 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಒಳ್ಳೆಯ ಅಂಕ ಬಂದವರು, ಪಾಸಾದವರು ಖುಷಿಯಲ್ಲಿದ್ದರೆ ಫೇಲಾದವರು ಬೇಸರದಲ್ಲಿದ್ದಾರೆ. ಜೀವನವೇ ಮುಗಿದು ಹೋಯಿತು ಎಂದು ನೊಂದು ಕೊಳ್ಳುತ್ತಿರುತ್ತಾರೆ. ಅಂತವರಿಗೆ ನಿರ್ದೇಶಕ ಯೋಗರಾಜ್ ಭಟ್ ಕಿವಿಮಾತು ಹೇಳಿದ್ದಾರೆ. ತಮ್ಮ ಎಂದಿನ ಮ್ಯಾನರಿಸಂನಲ್ಲಿ ಹೇಳಿದ್ದಾರೆ. 

ಪಿಯುಸಿ ಹುಡುಗ ಹುಡುಗಿಯರಿಗೆ ಜೈ, ರಿಸಲ್ಟ್ ಏನೇ ಬರ್ಲಿ ತಲೆ ಕೆಡಿಸ್ಕೋಬೇಡಿ ಯಾಕಂದ್ರೆ ಏನೇ ರಿಸಲ್ಟ್ ಬಂದ್ರೂ ಅದು ದಿ ಎಂಡ್ ಅಲ್ಲ ಎಂದು ನೊಂದಿರುವ ಮನಸ್ಸುಗಳಿಗೆ ಸಾಂತ್ವನ ಹೇಳಿದ್ದಾರೆ.