ರಾಮಾಯಣದ ಒಬ್ಬ ರಾಕ್ಷಸ 'ಕಬಂಧ'ನಿಗೆ ಎದೆಯಲ್ಲಿ ಕಣ್ಣಿತ್ತು, ನಮಗಿಲ್ಲ: ನಿರ್ದೇಶಕ ಸತ್ಯನಾಥ್

ರೈತರು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಣ್ಣಿಗೆ, ಬೆಳೆಗೆ ರಾಸಾಯನಿಕ ಹಾಕುತ್ತಿದ್ದಾರೆ. ಅದರಿಂದಲೇ ದೆವ್ವಕ್ಕಿಂತ ದೊಡ್ಡ ಸಮಸ್ಯೆ ಎದುರಾದರೆ, ಈ ಥರ ಹಿಂದೆ ಆಗಿತ್ತಾ, ಮುಂದೆ ಏನಾಗಬಹುದು ಎಂಬೆಲ್ಲಾ ಆಲೋಚನೆಯೇ ಈ ಸಿನಿಮಾ.

director satyanath talks over kabandha film storyline gvd

'ರಾಮಾಯಣದ ಒಬ್ಬ ರಾಕ್ಷಸ ಕಬಂಧ. ಅವನಿಗೆ ಎದೆಯಲ್ಲಿ ಕಣ್ಣಿತ್ತು, ನಮಗಿಲ್ಲ. ರೈತರು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಣ್ಣಿಗೆ, ಬೆಳೆಗೆ ರಾಸಾಯನಿಕ ಹಾಕುತ್ತಿದ್ದಾರೆ. ಅದರಿಂದಲೇ ದೆವ್ವಕ್ಕಿಂತ ದೊಡ್ಡ ಸಮಸ್ಯೆ ಎದುರಾದರೆ, ಈ ಥರ ಹಿಂದೆ ಆಗಿತ್ತಾ, ಮುಂದೆ ಏನಾಗಬಹುದು ಎಂಬೆಲ್ಲಾ ಆಲೋಚನೆಯೇ ಈ ಸಿನಿಮಾ. ಇದು ರೈತರ ಕತೆ. ಮನುಕುಲದ ಕತೆ. ನಮ್ಮ ಕತೆ.' ನಿರ್ದೇಶಕ ಸತ್ಯನಾಥ್ ಹೀಗೆ ಮಾತನಾಡುತ್ತಾ ಹೋಗುತ್ತಾರೆ. 'ಕಬಂಧ' ಸಿನಿಮಾ ಆ.9ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಕುರಿತು ಸತ್ಯನಾಥ್, 'ಹಾರರ್‌ಶೈಲಿಯಲ್ಲಿ ಕತೆ ಕಟ್ಟಿದ್ದೇನೆ. 

ಥ್ರಿಲ್ಲಿಂಗ್ ಆಗಿ ಕತೆ ಹೇಳುತ್ತೇವೆ. ಕೊನೆಗೆ ಅದಕ್ಕಿಂತ ದೊಡ್ಡದಾಗಿ ಏನೋ ಹೇಳಿದ್ದಾರೆ ಅಂತ ಪ್ರೇಕ್ಷಕನಿಗೆ ಅನ್ನಿಸುವಂತೆ ಸಿನಿಮಾ ಮಾಡಿದ್ದೇವೆ' ಎನ್ನುತ್ತಾರೆ. ನಾಯಕ ನಟ ಪ್ರಸಾದ್‌ ವಸಿಷ್ಠ, 'ರಾಮಾಯಣದ ಪಾತ್ರ ಕಬಂಧ ಮತ್ತು ಮಹಾಭಾರತದ ಪಾತ್ರ ಭೀಮ ಹೆಸರಿರುವ ಸಿನಿಮಾ ಒಂದೇ ದಿನ ಜೊತೆಜೊತೆಗೆ ಬಿಡುಗಡೆಯಾಗುತ್ತಿದೆ. ವಿಶ್ವಾಸದಿಂದ ಬರುತ್ತಿದ್ದೇವೆ. ಶುಕ್ರ ಫಿಲಂಸ್‌ನ ಸೋಮಣ್ಣ ವಿತರಣೆ ಮಾಡುತ್ತಿದ್ದಾರೆ. ವಿಜಯಕುಮಾರ್‌ ನೆರವಿಗೆ ನಿಂತಿದ್ದಾರೆ. ಗೆಲ್ಲುವ ಭರವಸೆ ಇದೆ' ಎನ್ನುತ್ತಾರೆ. ಕಿಶೋರ್, ಅವಿನಾಶ್, ಪ್ರಿಯಾಂಕ ಮಳಲಿ, ಛಾಯಾಶ್ರೀ ನಟಿಸಿದ್ದಾರೆ.

ನಾನು ಮೂಲತಃ ರೈತ, ಹಾರರ್ ಕಥಾ ಹಂದರ 'ಕಬಂಧ' ಚಿತ್ರದಲ್ಲೂ ರೈತ: ನಟ ಕಿಶೋರ್

ಮನರಂಜನೆ ಮೂಲಕ ಎಚ್ಚರಿಸುವ ಸಿನಿಮಾ: ಪ್ರತಿಯೊಬ್ಬ ನಟನಿಗೂ ತಾನು ಒಂದು ವಿಶಿಷ್ಟ ಕಥೆಯ ಭಾಗವಾಗಬೇಕು ಎಂಬ ಹಂಬಲ ಇರುತ್ತದೆ. ಆ ಮೂಲಕ ಗೆಲುವು ಪಡೆಯಬೇಕು ಎಂಬ ಆಸೆ ಇರುತ್ತದೆ. ಕೆಲವರಿಗೆ ಆ ಅದೃಷ್ಟ ತನ್ನಿಂತಾನೇ ಸಿಕ್ಕರೆ. ಹಲವರು ಅದಕ್ಕಾಗಿ ಹತ್ತಾರು ವರ್ಷ ಶ್ರಮಿಸುತ್ತಾರೆ. ಬೇರೆ ಬೇರೆ ಕಥೆಯ ಭಾಗವಾಗಿ ಕೊನೆಗೆ ತಮಗೆ ಬೇಕಾದ ಕಥೆಯ ಭಾಗವಾಗುತ್ತಾರೆ. ಅಂಥಾ ಒಬ್ಬ ಶ್ರಮಜೀವಿ ಪ್ರಸಾದ್‌ ವಸಿಷ್ಠ. ತುಮಕೂರು ಮೂಲದ ಪ್ರಸಾದ್ ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ವಿಭಿನ್ನ ಕಥೆಯ ‘ಕಂಬಂಧ’ ಸಿನಿಮಾ ಮೂಲಕ ನಾಯಕರಾಗಿದ್ದಾರೆ. 

ಸಿನಿಮಾ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ಪ್ರಸಾದ್ ವಸಿಷ್ಠ, ‘ಗುಣಮಟ್ಟದ ಸಿನಿಮಾ ಕೊಡಬೇಕು, ವಿಶಿಷ್ಟ ಕಥೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿರುವ ಸಿನಿಮಾ ಇದು. ಮನರಂಜನಾತ್ಮಕವಾಗಿಯೇ ಕತೆ ಹೇಳಿ ಕಡೆಗೊಂದು ಸಂದೇಶ ನೀಡುವುದು ನಮ್ಮ ಸಿನಿಮಾದ ವಿಶಿಷ್ಟತೆ. ನಾವು ಮುಂದಿನ ಪೀಳಿಗಿಗೆ ಅನ್ಯಾಯ ಮಾಡಿದ್ದೇವೆ. ಅದೇನು ಅನ್ನುವುದನ್ನು ನಮ್ಮ ಸಿನಿಮಾದ ಕತೆಯ ಹೈಲೈಟ್’ ಎನ್ನುತ್ತಾರೆ ಪ್ರಸಾದ್‌. ‘ಸೈಕಾಲಜಿಕಲ್ ಥ್ರಿಲ್ಲರ್ ಅಥವಾ ಹಾರರ್‌ ಶೈಲಿಯ ಕತೆ ಇದು. ಒಂದು ರಾತ್ರಿ, ಒಂದು ಹಗಲಿನ ಕತೆ. ಕುತೂಹಲಕರವಾಗಿ ಕತೆ ಸಾಗುತ್ತದೆ. 

ಸ್ಲೀವ್‌ಲೆಸ್ ಬ್ಲೌಸ್, ಗುಲಾಬಿ ಬಣ್ಣದ ಸೀರೆಯುಟ್ಟ ಪುಟ್ಟಗೌರಿ: ಚಂದನವನದ ಚೆಂದುಳ್ಳಿ ಚೆಲುವೆ ಸಾನ್ಯಾ ಅಂತಿದ್ದಾರೆ ಫ್ಯಾನ್ಸ್‌

ವಿಷ್ಣುಪ್ರಸಾದ್‌ ತುಂಬಾ ಚೆನ್ನಾಗಿ ಕ್ಯಾಮೆರಾ ಮೂಲಕ ದೃಶ್ಯಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅವಿನಾಶ್‌ ಸರ್‌, ಕಿಶೋರ್‌ ಸರ್‌, ಯೋಗರಾಜ್ ಭಟ್ಟರು ಕತೆಯನ್ನು ಮೆಚ್ಚಿಕೊಂಡು ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಹೊಳಹು ಕೊಡಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ನಿರ್ದೇಶಕ ಸತ್ಯನಾಥ್ ಕಥೆ ಹೆಣೆದಿದ್ದಾರೆ. ಚಿತ್ರಮಂದಿರದಲ್ಲಿ ನಮ್ಮ ಸಿನಿಮಾ ನೋಡುವವರಿಗೆ ಸಿನಿಮ್ಯಾಟಿಕ್ ಅನುಭವ ಸಿಗುತ್ತದೆ ಮತ್ತು ಒಂದೊಳ್ಳೆ ಸಿನಿಮಾ ನೋಡಿದ ನೆಮ್ಮದಿ ಸಿಗುತ್ತದೆ. ಅದಂತೂ ನಿಶ್ಚಿತ’ ಎನ್ನುತ್ತಾರೆ ಪ್ರಸಾದ್. ಕಬಂಧ ಸಿನಿಮಾವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಉದ್ದೇಶ ಚಿತ್ರತಂಡಕ್ಕಿದೆ.

Latest Videos
Follow Us:
Download App:
  • android
  • ios