ಲಂಗೋಟಿಯೇ ಹೀರೋ ಆಗಿರುವ ಚಿತ್ರ ಲಂಗೋಟಿ ಮ್ಯಾನ್: ನಿರ್ದೇಶಕಿ ಸಂಜೋತ ಭಂಡಾರಿ
ನಮ್ಮ ಚಿತ್ರದ ನಿಜವಾದ ಹೀರೋ ಎಂದರೆ ಲಂಗೋಟಿಯೇ. ಅದಕ್ಕೆ ಅದನ್ನೇ ಹೆಸರಾಗಿಸಿದ್ದೇನೆ. ಸಿನಿಮಾ ಕುರಿತ ಎಲ್ಲಾ ಪ್ರಶ್ನೆಗಳಿಗೂ ಸಿನಿಮಾನೇ ಉತ್ತರ ನೀಡಲಿದೆ ಎಂದರು ನಿರ್ದೇಶಕಿ ಸಂಜೋತ ಭಂಡಾರಿ.
‘ಲಂಗೋಟಿಯನ್ನು ಅತ್ಯಂತ ಕನಿಷ್ಠ ಉಡುಪು ಎನ್ನಲಾಗುತ್ತದೆ. ಆದರೆ ಈಗಿನ ಕಾಲಮಾನದಲ್ಲಿ ಕೌಪೀನ ಧರಿಸುವವರು ಇದ್ದಾರೆಯೇ.. ಈ ಪ್ರಶ್ನೆಗೆ ನಮ್ಮ ಸಿನಿಮಾದಲ್ಲಿ ಉತ್ತರವಿದೆ. ನಮ್ಮ ಚಿತ್ರದ ನಿಜವಾದ ಹೀರೋ ಎಂದರೆ ಲಂಗೋಟಿಯೇ. ಅದಕ್ಕೆ ಅದನ್ನೇ ಹೆಸರಾಗಿಸಿದ್ದೇನೆ. ಸಿನಿಮಾ ಕುರಿತ ಎಲ್ಲಾ ಪ್ರಶ್ನೆಗಳಿಗೂ ಸಿನಿಮಾನೇ ಉತ್ತರ ನೀಡಲಿದೆ’. ಹೀಗೆನ್ನುತ್ತಾರೆ ನಿರ್ದೇಶಕಿ ಸಂಜೋತ ಭಂಡಾರಿ. ಅವರು ನಿರ್ದೇಶನದ ಮಾಡಿರುವ ‘ಲಂಗೋಟಿ ಮ್ಯಾನ್’ ಚಿತ್ರ ಇಂದು ಬಿಡುಗಡೆ ಆಗುತ್ತಿದೆ.
ಈ ಹಿಂದೆ ಸಂಜೋತಾ ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’ ಸಿನಿಮಾ ನಿರ್ದೇಶಿಸಿದ್ದರು. ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದು. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಹುಲಿ ಕಾರ್ತಿಕ್, ಸಂಹಿತ ವಿನ್ಯಾ, ಸ್ನೇಹ ಖುಷಿ, ಆಕಾಶ್ ರಾಂಬೋ, ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್ ನಟಿಸಿದ್ದಾರೆ. ‘ಮನರಂಜನೆಯೇ ಚಿತ್ರದ ಪ್ರಮುಖ ಅಂಶ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಇದು’ ಎಂದು ಸಂಜೋತ ಭಂಡಾರಿ ಹೇಳಿಕೊಂಡಿದ್ದಾರೆ.
‘ಲಂಗೋಟಿ ಮ್ಯಾನ್’ ಸೆ.20ರಂದು ಬಿಡುಗಡೆ ಆಗಲಿದೆ. ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಕೆಲವರು ಈ ಚಿತ್ರದ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ‘ಲಂಗೋಟಿ ಬಲು ಒಳ್ಳೆದಣ್ಣ’ ಹಾಡು ಬಿಡುಗಡೆಯಾದ ಮೇಲೆ ಆಕ್ಷೇಪ ವ್ಯಕ್ತಪಡಿಸಿದವರು ಸುಮ್ಮನಾಗಿದ್ದಾರೆ. ಪುರಂದರ ದಾಸರ ‘ಲಂಗೋಟಿ ಬಲು ಒಳ್ಳೆದಣ್ಣ’ ಎಂಬ ಪದದ ಮೊದಲ ಸಾಲನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಪ್ರಮೋದ್ ಮರವಂತೆ ಹಾಡಿನ ಗೀತರಚನೆ ಮಾಡಿದ್ದು, ಎ2 ಮ್ಯೂಸಿಕ್‌ನಲ್ಲಿ ಬಿಡುಗಡೆ ಆಗಿದೆ. ಸುಮೇದ್ ಕೆ ಸಂಗೀತ ನೀಡಿದ್ದಾರೆ.
ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ 'ಲಂಗೋಟಿಮ್ಯಾನ್': ಸೆ.20ರಂದು ರಿಲೀಸ್
ಸಿನಿಮಾ ಕುರಿತು ನಿರ್ದೇಶಕಿ ಸಂಜೋತಾ ಭಂಡಾರಿ, ‘ಈ ಚಿತ್ರದ ನಿಜವಾದ ಹೀರೋ ಲಂಗೋಟಿ. ಶೀರ್ಷಿಕೆ ಕುರಿತು ಅನೇಕರು ಆಕ್ಷೇಪ ಎತ್ತಿದ್ದಾರೆ. ಆದರೆ ಈ ಸಿನಿಮಾ ಎಲ್ಲಕ್ಕೂ ಉತ್ತರ ಕೊಡಲಿದೆ’ ಎಂದು ಹೇಳಿದ್ದಾರೆ. ಸಂಜೋತಾ ಜೊತೆ ಐಶ್ವರ್ಯಾ ರಮೇಶ್, ವರ್ಷ ಅಮರನಾಥ್, ಸುಧೀಕ್ಷಾ ಎನ್ ರೆಡ್ಡಿ, ರೋಮಿ ಮುಂತಾದ ಮಹಿಳಾ ತಂಡ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ. ನಿರ್ದೇಶಕರು ಹಿಂಜರಿಕೆಯಲ್ಲೇ, ಬರೀ ಲಂಗೋಟಿ ಹಾಕ್ಕೊಂಡು ಆ್ಯಕ್ಟ್ ಮಾಡಬೇಕಾಗುತ್ತೆ ಅಂದರು. ನಾನು ಕ್ಯಾಮರಾ ಮುಂದೆ ಫುಲ್ ಬೆತ್ತಲಾಗಿ ಓಡು ಅಂದರೆ ಅದಕ್ಕೂ ರೆಡಿ ಅಂದೆ. ಈ ಸಿನಿಮಾದಲ್ಲಿ ನನಗೆ ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ.’ -ಹೀಗಂದದ್ದು ಯುವ ನಟ ಆಕಾಶ್ ರ್‍ಯಾಂಬೋ.