ಸ್ಯಾಂಡಲ್‌ವುಡ್‌ ರೋರಿಂಗ್ ಸ್ಟಾರ್ ಶ್ರೀಮುರಳಿ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟ ಸಿನಿಮಾ 'ಚಂದ್ರ ಚಕೋರಿ' ಬಗ್ಗೆ ನಿರ್ದೇಶಕ ಎಸ್‌ ನಾರಾಯಣ್‌ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. 

ತುಂಟಿ ಐರಾ, ಸೈಲೆಂಟ್ ತಮ್ಮ; ರಾಧಿಕಾ ಪಂಡಿತ್ ಶೇರ್ ಮಾಡಿದ 'ಹೊಸ' ಫೋಟೋ! 

ಬರೋಬ್ಬರಿ 18 ವರ್ಷಗಳ ಬಳಿಕ ಎಸ್ ನಾರಾಯಣ್‌ ಆದಿತ್ಯ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಲಾಂಚ್ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.  2003ರಲ್ಲಿ ತೆರೆ ಕಂಡ ಬ್ಲಾಕ್ ಬಸ್ಟರ್ ಸಿನಿಮಾ ಚಂದ್ರ ಚಕೋರಿ ಕಥೆಯನ್ನು ಎಸ್‌ ನಾರಾಯಣ್ ಕುರಿಗಳು ಸಾರ್ ಕುರಿಗಳು ಸಿನಿಮಾ ಚಿತ್ರೀಕರಣ ಮಾಡುತ್ತಲೇ ಬರೆದಿದ್ದರು. ಚಿತ್ರಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದ್ದ ನಾರಾಯಣ್ ಆದಿತ್ಯ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಸಂಪರ್ಕಿಸಿ ವಿಚಾರಿಸಿದ್ದರಂತೆ.

ಕುರಿಗಳು ಸಾರ್ ಕುರಿಗಳು ಸಿನಿಮಾಗೆ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಆದಿತ್ಯ ಸೆಟ್‌, ಆಗಾಗ ಬಂದು ಹೋಗುವುದನ್ನು ಕಂಡ ನಾರಾಯಣ್ ಈತನೇ ಪರ್ಫೆಕ್ಟ್‌ ಎಂದುಕೊಂಡಿದ್ದರಂತೆ. ಅವರನ್ನು ಸಂಪರ್ಕಿಸಲು 3-4 ಸಲ ಪ್ರಯತ್ನ ಪಟ್ಟಿದ್ದಾರೆ. ಆದರೆ ಅಷ್ಟರಲ್ಲಿ ಆದಿತ್ಯ 'ಲವ್' ಎನ್ನುವ ಚಿತ್ರವನ್ನು ಒಪ್ಪಿಕೊಂಡಿಯಾಗಿತ್ತು. ಚಂದ್ರ ಚಕೋರಿ ಚಿತ್ರದಲ್ಲಿ ನಟಿಸುವ ಅವಕಾಶ ಶ್ರೀ ಮುರಳಿಗೆ ಸಿಕ್ಕಿತು. ಈಗ ಮತ್ತೆ ಆದಿತ್ಯನಿಗೆ ಆ್ಯಕ್ಷನ್ ಹೇಳುತ್ತಿರುವ ಸಂಭ್ರಮವನ್ನು ನಾರಾಯಣ್ ಹಂಚಿಕೊಂಡಿದ್ದಾರೆ.

ಶೌರ್ಯ ಒಡೆಯರ್ ನಾಮಕರಣ ಸಂಭ್ರಮ; ಪವನ್ ಮುಖದಲ್ಲಿ ಬಿಲಿಯನ್ ಡಾಲರ್ ನಗು! 

ಸದ್ಯ ರವಿ ಬರೆದಿರುವ ಕಥೆಗೆ  'ಡಿ'ಎಂದು ಶೀರ್ಷಿಕೆ ಇಡಲಾಗಿದೆ. ನಾರಾಯಣ್ ನಿರ್ದೇಶನದಲ್ಲಿ ಮಿಂಚುತ್ತಿರುವ ಆದಿತ್ಯಗೆ ಹೊಸ ವರ್ಷದ ದಿನವೇ ಸಿನಿಮಾ ಲಾಂಚ್ ಮಾಡಿದ್ದಾರೆ. ಈ ಕಾರ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೂಡ ಸಾಥ್ ಕೊಟ್ಟಿದ್ದಾರೆ.