ಹೆಣ್ಮಕ್ಕಳ ಪರವಾಗಿ ಒಂದು ಗಂಟೆಯ ಕತೆ ಸಿನಿಮಾ ಮಾಡಿದ್ದೇನೆ : ರಾಘವ ದ್ವಾರ್ಕಿ

ರಾಘವ ದ್ವಾರ್ಕಿ ನಿರ್ದೇಶನದ ‘ಒಂದು ಗಂಟೆಯ ಕತೆ’ ಇಂದು ಬಿಡುಗಡೆಯಾಗಲಿದೆ. ಸತ್ಯಘಟನೆ ಆಧಾರಿತ ಈ ಸಿನಿಮಾವನ್ನು ಯಾಕೆ ನೋಡ್ಲೇಬೇಕು ಅಂತ ರಾಘವ ಇಲ್ಲಿ ವಿವರಿಸಿದ್ದಾರೆ.

Director Raghav Dwarki talks about kannada movie Ondu Ganteya kathe vcs

ಪ್ರಿಯಾ ಕೆರ್ವಾಶೆ

ಒಂದು ಗಂಟೆಯ ಕತೆ ಸಿನಿಮಾ ಯಾಕೆ ವಿಶೇಷ?

ಇದು ಹಲವು ಸತ್ಯ ಘಟನೆಗಳ ಕೊಲಾಜ್‌. ನಮ್ಮ ರಾಜ್ಯದಿಂದ ಹಿಡಿದು ವಿಶ್ವದ ನಾನಾ ಕಡೆ ಈ ಘಟನೆಗಳು ನಡೆದಿವೆ. ಬಹಳ ಸ್ಟ್ರಾಂಗ್‌ ಆದ ಕಂಟೆಂಟ್‌ಅನ್ನು ಹಾಸ್ಯದ ಲೇಪದಿಂದ ಕಟ್ಟಲಾಗಿದೆ. ಇದು ಗಂಡುಮಕ್ಕಳಿಗೆ, ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವವರಿಗೆ ದೊಡ್ಡ ಪಾಠ. ಹೆಣ್ಣುಮಕ್ಕಳ ಮೇಲೆ ಗೌರವದ ಜೊತೆಗೆ ಭಯವೂ ಇರಬೇಕು ಅನ್ನೋದನ್ನು ಹೇಳೋದು ನನ್ನ ಉದ್ದೇಶ. ಈ ಸಿನಿಮಾ ನೋಡಿದ ಮೇಲೆ ನಾಲ್ಕು ಜನರಾದ್ರೂ ಬದಲಾದ್ರೆ ಈ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ.

ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್ 

ಇದು ಮಹಿಳೆಯರ ಕತೆ ಅಂತೀರಿ, ನಾಯಕ ಅಜಯ್‌ ರಾಜ್‌ ಪಾತ್ರವೇ ಪ್ರಮುಖ ಅನ್ನೋ ಥರ ಬಿಂಬಿಸಲಾಗಿದೆಯಲ್ಲಾ?

ಖಂಡಿತಾ ಇಲ್ಲ. ಅವರಿಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿ ಹೀರೋಯಿನ್ನೇ ಹೀರೋ ಆಗಿದ್ದಾರೆ. ಸುಮಾರು 350 ಜನ ವಿವಿಧ ಕ್ಷೇತ್ರಗಳ ಮಹಿಳೆಯರಿಗೆ ಈ ಸಿನಿಮಾ ತೋರಿಸಿದ್ದೇನೆ. ಅವರು ನೋಡಿ ಬಹಳ ಸಂತೋಷ ಪಟ್ಟಿದ್ದಾರೆ.

ಪೋಸ್ಟರ್‌, ಟ್ರೇಲರ್‌ ನೋಡಿದ್ರೆ ಸ್ವಲ್ಪ ಗೊಂದಲ ಆಗುತ್ತೆ, ಈ ಸಿನಿಮಾ ಫ್ಯಾಮಿಲಿ ನೋಡ್ಬಹುದು ಅಂತೀರಾ?

ಹದಿನೆಂಟು ವರ್ಷ ದಾಟಿದ ಎಲ್ಲರೂ ಯಾವುದೇ ಮುಜುಗರ, ಬೇಜಾರಿಲ್ಲದೇ ಈ ಸಿನಿಮಾ ನೋಡಬಹುದು. ಮಕ್ಕಳನ್ನು ಕರ್ಕೊಂಡು ಬರ್ಬೇಡಿ. ಇದರಲ್ಲಿ ಕ್ರೈಮ್‌ ಕಂಟೆಂಟ್‌ ಇದೆ. ಈಗಾಗಲೇ ಈ ಸಿನಿಮಾ ನೋಡಿದ ಹೆಣ್ಮಕ್ಕಳೆಲ್ಲ ಮನೆಯವರನ್ನೂ ಕರೆದುಕೊಂಡು ಮತ್ತೊಮ್ಮೆ ಸಿನಿಮಾ ನೋಡುತ್ತೇವೆ ಅಂದಿದ್ದಾರೆ.

ಬಿಕಿನಿ ಹಾಕಲ್ಲ, ಟೂ ಪೀಸ್‌ ಒಪ್ಪಲ್ಲ: ಅಪೂರ್ವ 

ಈ ಸಿನಿಮಾ ನೋಡಲು ಐದು ಕಾರಣ ಕೊಡಬಹುದಾ?

1. ಸಿನಿಮಾ ಮೂಲಕ ಗಂಡು ಮಕ್ಕಳು ನೋಡ್ಲೇಬೇಕಾದ ಒಂದು ಸ್ಟ್ರಾಂಗ್‌ ಕಂಟೆಂಟ್‌ ಕೊಡ್ತಿದ್ದೀನಿ.

2. ಪ್ರತೀ ಹುಡುಗಿಯೂ ಲೈಫ್‌ನಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಡಿಸ್ಟರ್ಬ್‌ ಆಗಿರ್ತಾಳೆ. ಹೀಗಾಗಿ ಅವರಿಗಿದು ಬೇಗ ಕನೆಕ್ಟ್ ಆಗುತ್ತೆ.

3. ಪ್ರತಿನಿತ್ಯ ರೇಪ್‌, ಹೆಣ್ಣಿನ ಮೇಲಿನ ದೌರ್ಜನ್ಯದ ಸುದ್ದಿ ನೋಡುತ್ತಿರುತ್ತೀವಿ. ಮನೆಯೊಳಗೇ ಕೂತು ಕಮೆಂಟ್‌ ಮಾಡಿ ಸುಮ್ಮನಾಗ್ತೀವಿ. ಅಂಥಾ ಮನಸ್ಥಿತಿಗೂ ಇದರಲ್ಲಿ ಸಂದೇಶ ಇದೆ.

4. ಹೈ ಡೋಸ್‌ ಇರುವ ಸ್ಟ್ರಾಂಗ್‌ ಕಂಟೆಂಟ್‌ಅನ್ನು ಇಲ್ಲಿ ಕಷ್ಟಪಟ್ಟು ತೋರಿಸಿಲ್ಲ. ಶೇ.90 ಭಾಗ ನೀವು ನಗ್ತಾನೇ ಇರ್ತೀರಿ. ಆದರೆ ಕೊನೆಯ ಶೇ.10ರಷ್ಟುಭಾಗ ಒಬ್ಬನೂ ಅಲ್ಲಾಡದೇ ಸಿನಿಮಾ ನೋಡ್ತಾರೆ.

5. 130 ಜನ ರಂಗಭೂಮಿ, ಸೀರಿಯಲ್‌, ಸಿನಿಮಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಗಂಟೆ ಮೂವತ್ತೊಂಬತ್ತು ನಿಮಿಷದ ಸಿನಿಮಾ. ಒಂದು ಪಾಪ್‌ಕಾರ್ನ್‌ ತಿಂದು ಮುಗಿಸುವ ಟೈಮ್‌ನಲ್ಲಿ ನೀವು ಇಡೀ ಸಿನಿಮಾ ನೋಡಬಹುದು.

Latest Videos
Follow Us:
Download App:
  • android
  • ios