ಅಪೂರ್ವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಈಗ ಬೇಡಿಕೆಯ ನಟಿ ಅಗಿರುವ ಅಪೂರ್ವ ಜತೆ ಮಾತುಕತೆ

-ಪ್ರಿಯಾ ಕೆರ್ವಾಶೆ

- ಫುಲ್‌ ಬ್ಯುಸಿಯಾಗಿದ್ದೀರ?

ಅಪೂರ್ವ, ವಿಕ್ಟರಿ 2 ನಂತರ ಕೃಷ್ಣ ಟಾಕೀಸ್‌ ನನ್ನ ಮೂರನೇ ಚಿತ್ರ. ಕಾಲಾಪತ್ಥರ್‌ ಶೂಟಿಂಗ್‌ ಇನ್ನೇನು ಶುರುವಾಗುತ್ತೆ. ಹಿಂದೆ ಮೊಡವೆ ಅಂತ ಒಂದು ಸಿನಿಮಾಕ್ಕೆ ಸೈನ್‌ ಮಾಡಿದ್ದೆ. ಅಕ್ಷಿತ್‌ ಶಶಿಕುಮಾರ್‌ ಇದರ ಹೀರೋ. ಆ ಚಿತ್ರ ಅರ್ಧಕ್ಕೆ ನಿಂತಿತ್ತು. ಇನ್ನೇನು ಮತ್ತೆ ಶುರುವಾಗುತ್ತೆ ಅಂತ ಕೇಳಲ್ಪಟ್ಟೆ.

- ಕೃಷ್ಣ ಟಾಕೀಸ್‌ ಸಿನಿಮಾದ ಪಾತ್ರ ಹೇಗಿದೆ?

ಈ ಕಾಲದ ಹುಡುಗಿ ಪಾತ್ರ. ನನ್ನ ಒಂದು ಮಾತಿಂದ ನಾಯಕ ತಗೊಳ್ಳೋ ನಿರ್ಧಾರ, ರಿಸ್ಕ್‌ಗಳು ಅವನ ಬದುಕನ್ನೇ ಬದಲಿಸುತ್ತೆ. ಹೀರೋ ಜೊತೆಗೆ ಜಾಲಿಯಾಗಿರುವ ಪಾತ್ರವೂ ಹೌದು.

- ಚಿತ್ರದಲ್ಲಿ ಬಹಳ ಗ್ಲಾಮರಸ್‌ ಆಗಿ ಕಾಣ್ತಿದ್ದೀರಿ?

ತುಂಬ ಗ್ಲಾಮರಸ್‌ ಏನಲ್ಲ. ಈ ಕಾಲದಲ್ಲಿ ಹುಡುಗೀರು ಹೇಗಿದ್ದಾರೋ ಹಾಗೇ ಇದೆ. ಆ ಸನ್ನಿವೇಶಕ್ಕೆ ಏನು ಬೇಕೋ ಅದನ್ನು ಮಾಡಿದ್ದೀನಿ.

- ಅಪೂರ್ವ ಪಾತ್ರಕ್ಕೋಸ್ಕರ ಎಷ್ಟುಗ್ಲಾಮರಸ್‌ ಆಗಿ ಕಾಣೋದಕ್ಕೂ ರೆಡಿ ಇರ್ತಾರ?

ಇಲ್ಲಪ್ಪ. ಇಲ್ಲೀವರೆಗಿನ ಗ್ಲಾಮರಸ್‌ ಪಾತ್ರ ಓಕೆ. ಇದಕ್ಕಿಂತ ಹೆಚ್ಚು ಗ್ಲಾಮರ್‌ ಆಗಲ್ಲ. ಮನೆಯಲ್ಲಿ ತುಂಬ ಸ್ಟ್ರಿಕ್ಟ್ ಇದ್ದಾರೆ. ಬಿಕಿನಿ, ಟೂ ಪೀಸ್‌ ಹಾಕು ಅಂದ್ರೆ ಖಂಡಿತಾ ಒಪ್ಪಲ್ಲ. ಒಂದು ಲಿಮಿಟ್‌ ತನಕ ಓಕೆ.

- ಕಾಲಾಪತ್ಥರ್‌ನಲ್ಲಿ ಯಾವ ಥರದ ಪಾತ್ರ ನಿಮ್ದು?

ಇಷ್ಟೆಲ್ಲ ಅಪ್‌ಡೇಟ್‌ ಆಗಿರುವ ಕಾಲದಲ್ಲಿ ನಾವಿದ್ರೂ ಹಳ್ಳಿಗಾಡಿನಲ್ಲಿ ಹೆಚ್ಚಿನವರಿಗೆ ಎಜುಕೇಶನ್‌ ಇಲ್ಲ. ಅವರ ನಡುವೆ ಓದಿಕೊಂಡಿರುವ ಹುಡುಗಿಯೊಬ್ಬಳು ಏನೆಲ್ಲ ಬದಲಾವಣೆ ತರಬಹುದು, ಅವಳಿಂದಾಗಿ ಆ ಊರಲ್ಲಿ ಆಗುವ ಚೇಂಜಸ್‌ ಏನು ಅನ್ನೋದನ್ನು ಕಾಮಿಡಿಯಾಗಿ ನನ್ನ ಪಾತ್ರದ ಮೂಲಕ ಹೇಳಲಾಗಿದೆ. ವಿಕ್ಕಿ ವರುಣ್‌ ಕ್ಯಾರೆಕ್ಟರ್‌ ತುಂಬ ಚೆನ್ನಾಗಿದೆ.