ಪ್ರಗ್ನೆಂಸಿ ಅನೌನ್ಸ್‌ ಮಾಡಿದಾಗಿನಿಂದ ಪುತ್ರನ ನಾಮಕರಣವರೆಗೂ ಪ್ರತಿಯೊಂದೂ ವಿಚಾರವನ್ನು ಡಿಫರೆಂಟ್‌ ಆಗಿ ರಿವೀಲ್ ಮಾಡಿರುವ ನಿರ್ದೇಶಕ ಪವನ್ ಒಡೆಯರ್, ಪುತ್ರನಿಗೂ ಡಿಫರೆಂಟ್‌ ಆಗಿರುವ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. 

"

ಬರ್ತಡೇ ದಿನವೇ ಅಪ್ಪನಾದ ನಿರ್ದೇಶಕ ಪವನ್ ಒಡೆಯಾರ್! 

ಡಿಸೆಂಬರ್ 10ರಂದು ಪವನ್ ತಮ್ಮ ಹುಟ್ಟುಹಬ್ಬರದ ದಿನವೇ ಕುಟುಂಬಕ್ಕೆ ಪುತ್ರನನ್ನು ಬರ ಮಾಡಿಕೊಂಡರು. ಡಬಲ್ ಧಮಾಕದಲ್ಲಿರುವ ಫ್ಯಾಮಿಲಿ 20 ದಿನಗಳ ಬಳಿಕ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಪುತ್ರನಿಗೆ ತೊಟ್ಟಿಲ ಶಾಸ್ತ್ರವನ್ನೂ ಮಾಡಲಾಯಿತು. ಹೂಗಳ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. 

ಹೆಸರು ಏನು?
ಪುತ್ರನನ್ನು 20 ದಿನಗಳಲ್ಲಿ ಸೆರೆ  ಹಿಡಿದ ಫೋಟೋವನ್ನೂ ಸೇರಿಸಿ ವಿಡಿಯೋ ಮಾಡುವ ಮೂಲಕ ಹೆಸರನ್ನು  'ಶೌರ್ಯ' ಎಂದು ರಿವೀಲ್ ಮಾಡಿದ್ದಾರೆ. ಮುದ್ದಾಗಿರುವ ಪುಟ್ಟ ಕಂದಮ್ಮನನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ತಂದೆ ಹಾಗೂ ತಾಯಿಗೆ ಶುಭ ಹಾರೈಸಿದ್ದಾರೆ.

3-6 ತಿಂಗಳ ಪ್ರೆಗ್ನೆಂಸಿ ಫೋಟೋ; ನಟಿ ಅಪೇಕ್ಷಾ ಶೇರ್ ಮಾಡಿದ ಸಂಭ್ರಮದ ಕ್ಷಣ! 

ಕೆಲವು ದಿನಗಳ ಹಿಂದೆ ನಟಿ ಅಪೇಕ್ಷಾ ತಮ್ಮ ಪ್ರೆಗ್ನೆಂಸಿ ಜರ್ನಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಹಾಗೂ ಇತ್ತೀಚಿಗೆ ಆರೋಗ್ಯ ಸಚಿವ ಸುಧಾಕರ್  ಪವನ್ ನಿವಾಸಕ್ಕೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿದ್ದರು.