ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್ ಒಡೆಯರ್‌ ತಮ್ಮ ಹುಟ್ಟುಹಬ್ಬದ (ಡಿಸೆಂಬರ್ 16) ದಿನವೇ ಪುತ್ರನನ್ನು ಬರ ಮಾಡಿಕೊಂಡಿದ್ದಾರೆ. ಸಂಭ್ರಮದಲ್ಲಿರುವ ಪವನ್ ಕುಟುಂಬವನ್ನು ಇತ್ತೀಚಿಗೆ ಆರೋಗ್ಯ ಸಚಿವ ಸುಧಾಕರ್‌ ಸಹ  ಭೇಟಿ ಮಾಡಿ, ಶುಭ ಕೋರಿದ್ದಾರೆ. ಇದೀಗ ಅಪೇಕ್ಷಾ ತಮ್ಮ ಪ್ರತಿ ತಿಂಗಳ ಪ್ರೆಗ್ನೆಂಸಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಬರ್ತಡೇ ದಿನವೇ ಅಪ್ಪನಾದ ನಿರ್ದೇಶಕ ಪವನ್ ಒಡೆಯಾರ್!

ಅಪೇಕ್ಷಾ ಪೋಸ್ಟ್:
ಮೂರು ತಿಂಗಳಿನಿಂದ ಆರು ತಿಂಗಳಿನವರೆಗೂ ಸೆರೆ ಹಿಡಿದ ಫೋಟೋವನ್ನು ಅಪೇಕ್ಷಾ ಅಪ್ಲೋಡ್ ಮಾಡಿದ್ದಾರೆ. 'ಪ್ರೆಗ್ನೆಂಸಿ ಪ್ರತಿ ಕ್ಷಣವನ್ನೂ ಸಂಭ್ರಮಿಸಬೇಕು. Second trimester ಅದ್ಭುತವಾಗಿತ್ತು,' ಎಂದು ಬರೆದುಕೊಂಡಿದ್ದಾರೆ.

ನಟಿ ಅಪೇಕ್ಷಾ ಪುರೋಹಿತ್ ಸರಳ, ಸುಂದರ ಸೀಮಂತ ಕಾರ್ಯಕ್ರಮ! 

ಪವನ್ ಹಾಗೂ ಅಪೇಕ್ಷಾ ಪುತ್ರನ ಫೋಟೋ ರಿವೀಲ್ ಮಾಡಿಲ್ಲ, ವಿಶೇಷವಾದ ದಿನ ವಿಶೇಷವಾಗಿ ರಿವೀಲ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

ಸುಧಾಕರ್‌ ಭೇಟಿ:
ಕೆಲವು ದಿನಗಳ ಹಿಂದೆ ಆರೋಗ್ಯ ಸಚಿವ ಸುಧಾಕರ್‌ ಪವನ್ ನಿವಾಸಕ್ಕೆ ಭೇಟಿ ನೀಡಿ ಪವನ್ ಪುತ್ರನನ್ನು ಮಾತನಾಡಿಸಿದ್ದಾರೆ. 'ನಿಮ್ಮ ಅಮೂಲ್ಯವಾದ ಸಮಯವನ್ನು ನೀಡಿ ನಮ್ಮ ಪುತ್ರನನ್ನು ಭೇಟಿ ಮಾಡಲು ಬಂದಿದ್ದಕ್ಕೆ ಧನ್ಯಾವದಗಳು. We are blessed. ಥ್ಯಾಂಕ್ಸ್‌' ಎಂದು ಅಪೇಕ್ಷಾ ಬರೆದಿದ್ದಾರೆ.