ಲಾಕ್‌ಡೌನ್‌ನಿಂದ ಕಂಗಾಲಾದ ಯುವ ಉದ್ಯಮಿಗಳಿಗೆ ಲೂಸಿಯಾ ನಿರ್ದೇಶಕರ ನೆರವು!
ನಿರ್ದೇಶಕ ‘ಲೂಸಿಯಾ’ ಪವನ್ ಕುಮಾರ್ ಭಿನ್ನ ವ್ಯಕ್ತಿತ್ವದವರು. ಈಗ ಅವರು ರಾಜ್ಯದಲ್ಲಿ ಬಿಸಿನೆಸ್ ಆರಂಭಿಸಬೇಕು ಎಂದು ಉದ್ದೇಶಿಸಿರುವ ನವ ಉದ್ಯಮಿಗಳ ನೆರವಿಗೆ ನಿಂತಿದ್ದಾರೆ. ಸ್ಟಾರ್ಟಪ್ ಐಡಿಯಾ ಹೊಂದಿರುವವರಿಗೆ ಅದರ ಅಭಿವೃದ್ಧಿಗೆ ಐಡಿಯಾ ನೀಡಿದ್ದಾರೆ.
ಸ್ಟಾರ್ಟ್ ಅಪ್ ಉದ್ಯಮದ ತಾಣ
ಸಿಲಿಕಾನ್ ಸಿಟಿ ಬೆಂಗಳೂರು ಸಾವಿರಾರು ಹೂಡಿಕೆದಾರರ ನೆಚ್ಚಿನ ತಾಣ. ನೂರಾರು ಸ್ಟಾರ್ಟ್‌ಅಪ್‌ಗಳ ಅಡಿಪಾಯವೂ ಹೌದು ಈ ಊರು. ನೂರಾರು ಮಂದಿ ಇಲ್ಲಿ ಹೊಸ ಆಲೋಚನೆಗಳ ಮೂಲಕ ಸ್ಟಾರ್ಟ್‌ಅಪ್ ಅರಂಭಿಸಿ ಬಿಸಿನೆಸ್ ಶುರು ಮಾಡಿದ್ದಾರೆ. ಆ ಮೂಲಕ ಸಾಕಷ್ಟುಜನರು ಕೋಟ್ಯಧಿಪತಿಗಳೂ ಆಗಿದ್ದಾರೆ. ಆದರೆ ಈಗ ಲಾಕ್‌ಡೌನ್ ಆದಾಗಿನಿಂದ ಯಾರಿಗೂ ಬಿಸಿನೆಸ್ ಇಲ್ಲ. ಅಂತಹ ಸ್ಟಾರ್ಟ್‌ಅಪ್ ಉದ್ಯಮಿಗಳ ಮಾಹಿತಿ ಪಡೆದು, ಇತರರಿಗೆ ಆನ್‌ಲೈನಲ್ಲೇ ಮಾಹಿತಿ ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಪವನ್ ಕುಮಾರ್.
ಕಾರ್ಮಿಕರ ನೆರವಿಗೆ ಕ್ರೌಡ್ ಫಂಡಿಂಗ್ ; ಪವನ್ ಕುಮಾರ್ ವಿನೂತನ ಐಡಿಯಾ!
ಮಾಹಿತಿ ನೀಡುವ ಉದ್ದೇಶ
ಮೂಲತಃ ಐಟಿ ಕ್ಷೇತ್ರದಿಂದಲೇ ಬಂದ ಪವನ್ ಕುಮಾರ್ ಆನ್‌ಲೈನ್ ಕ್ಷೇತ್ರದಲ್ಲಿ ಪಳಗಿದವರು. ಆ ತಿಳಿವಳಿಕೆಯನ್ನೇ ಈಗ ಸ್ಟಾರ್ಟ್‌ಅಪ್ ಉದ್ಯಮದ ಮಂದಿಗೆ ನೀಡುತ್ತಿದ್ದಾರೆ.
‘ಇದೊಂದು ಮಾಹಿತಿ ಹಂಚಿಕೆ ಪ್ರಯತ್ನ ಮಾತ್ರ. ಲಾಕ್ ಡೌನ್ ಪರಿಣಾಮ ಇವತ್ತು ನೂರಾರು ಮಂದಿ ಸ್ಟಾರ್ಟ್‌ಅಪ್ ಉದ್ಯಮಿಗಳು ಕಂಗಾಲಾಗಿದ್ದಾರೆ. ಅವರಿಗೆ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಸ್ಟಾರ್ಟ್‌ಅಫ್ಸ್.ಹೋಮ್ ಟಾಕೀಸ್.ಕಾಮ್ ಶುರು ಮಾಡಲಾಗಿದೆ. ಸದ್ಯಕ್ಕೀಗ 170 ಜನ ನವ ಉದ್ಯಮಿಗಳು ಈ ಪ್ಲಾಟ್‌ಫಾಮ್‌ರ್‍ಗೆ ಬಂದಿದ್ದಾರೆ. ಅಲ್ಲಿ ಉಪಯುಕ್ತ ಮಾಹಿತಿ ಹಂಚಿಕೆಯಾಗುವ ಭರವಸೆ ಇದೆ ಎನ್ನುತ್ತಾರೆ ನಿರ್ದೇಶಕ ಪವನ್ ಕುಮಾರ್.
ಲೈಲಾ ವೆಬ್ ಸೀರೀಸಿನ 2 ಎಪಿಸೋಡು ನಿರ್ದೇಶಿಸಿದ ಯೂಟರ್ನ್ ನಿರ್ದೇಶಕ!
170 ಮಂದಿ ಉದ್ಯಮಿಗಳ ಮಾಹಿತಿ ಸಿಕ್ಕಿದೆ
ಸ್ಟಾರ್ಟ್‌ಅಫ್ಸ್.ಹೋಮ್ ಟಾಕೀಸ್.ಕಾಮ್ ಮೂಲಕ ಮಾಹಿತಿ ಹಂಚಿಕೊಳ್ಳಲು ಬಯಸುವರು ಆನ್‌ಲೈನ್‌ನಲ್ಲಿಯೇ ಫಾಮ್‌ರ್ ಭರ್ತಿ ಮಾಡಿ ಕಳುಹಿಸಲು ಪವನ್ ಕೋರಿದ್ದರು. ಆ ಪ್ರಕಾರ ಈಗ 170 ಮಂದಿ ಉದ್ಯಮಿಗಳು ಫಾಮ್‌ರ್ ಭರ್ತಿ ಮಾಡಿದ್ದಾರೆ. ಅವರ ಜತೆಗೆ ಮಾಹಿತಿ ಹಂಚಿಕೊಳ್ಳುವುದು, ಅವರ ಸ್ಟಾರ್ಟ್‌ಅಪ್ ಉದ್ಯಮದ ಕುರಿತು ಪವನ್ ಕುಮಾರ್ ಜತೆಗೆ ಮಾತುಕತೆ ನಡೆಸುವ ಅವಕಾಶ ಕೂಡ ಇಲ್ಲಿ ಲಭ್ಯವಿದೆ.