ಪನ್ನಗಾ- ಚಿರು ಸ್ನೇಹಕ್ಕೆ ಸಾಕ್ಷಿ ಆಯ್ತು ಈ ಸೈಮಾ ಅವಾರ್ಡ್. ಸಂತೋಷ ವ್ಯಕ್ತ ಪಡಿಸಿದ ಮೇಘನಾ ರಾಜ್. 

ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಸರ್ಜಾ ಅಗಲಿದ ನಂತರ ಮೇಘಾನ ರಾಜ್‌ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತ ಬಾಲ್ಯದ ಗೆಳೆಯ ಪನ್ನಗಾಭರಣ ಬಗ್ಗೆ ಅನೇಕರಿಗೆ ಗೊತ್ತಿದೆ. ಈಗಲೂ ತಮ್ಮ ಮನೆಯಲ್ಲಿ ಚಿರು ಫೋಟೋ ಇಟ್ಟುಕೊಂಡು, ತಮ್ಮ ಸ್ನೇಹವನ್ನು ಸ್ಮರಿಸುತ್ತಾರೆ. ಖ್ಯಾತ ನಿರ್ದೇಶಕ ನಾಗಾಭರಣ ಅವರ ಪುತ್ರ ಪನ್ನಗಾಭರಣ. ಹ್ಯಾಪಿ ನ್ಯೂ ಇಯರ್, ಹಾಗೂ ಫ್ರೆಂಚ್ ಬಿರಿಯಾನಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. 

ಕೆಲವು ದಿನಗಳ ಹಿಂದೆ ನಡೆದ ಸೈಮಾ ಅವಾರ್ಡ್ 2021 ಕಾರ್ಯಕ್ರಮದಲ್ಲಿ ಪನ್ನಗಾಭರಣ ಬೆಸ್ಟ್‌ ಡೈರೆಕ್ಟರ್ ಆಫ್ 2020 ಪ್ರಶಸ್ತಿ ಗೆದ್ದಿದ್ದಾರೆ. ವೇದಿಕೆ ಮೇಲೆ ಪ್ರಶಸ್ತಿ ಪಡೆದ ಪನ್ನಗಾ ಅವರ ಬಗ್ಗೆ ನೆಟ್ಟಿಗರಿಗೆ ಗಮನ ಸೆಳೆದದ್ದು ಅವರ ಬ್ಲಾಕ್ ಬ್ಲೇಝರ್. ಆ ಬ್ಲೇಝರ್‌ನ ಕಾಲರ್‌ ಬಿಳಿ ಬಣ್ಣವಿದ್ದು, ಚಿರು ಮುಖವನ್ನು ಪ್ರಿಂಟ್‌ ಮಾಡಿಸಲಾಗಿದೆ. 

ಮೇಘನಾ ರಾಜ್‌ ಭೇಟಿ ಮಾಡಲು ಬರೋದಾ ಎಂದ ಪನ್ನಗಾಭರಣ ಪುತ್ರ; ವಿಡಿಯೋ ವೈರಲ್!

'ನನ್ನ ಲಕ್ಕಿ ಚಾರ್ಮ್‌ ಸ್ನೇಹಿತನನ್ನು ಧರಿಸಿರುವೆ,' ಎಂದು ಬರೆದು ಕೊಂಡಿದ್ದಾರೆ. ಈ ಡಿಸೈನರ್ ಉಡುಪಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 'ಚಿರುಗೆ ಖಂಡಿತ ಇಷ್ಟವಾಗುತ್ತದೆ. ಇದು ಹೇಗಿದೆ ಅಂದ್ರೆ ಮಚ್ಚ ನಾನ ಇದ್ದೀನಿ ಬಿಡೋ ಅನ್ನುವ ಹಾಗೆ,' ಎಂದು ಮೇಘನಾ ರಾಜ್‌ ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಈ ಉಡುಪನ್ನು ಪನ್ನಗಾ ಅವರ ಪತ್ನಿ ನಿಖಿತಾ ಅವರೇ ಡಿಸೈನ್ ಮಾಡಿರುವುದು. ನಿಖಿತಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದು, ಅನೇಕ ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

View post on Instagram